ಚಿಕಾಗೋ; ಕಾರಿನ ಡಿಕ್ಕಿಯಲ್ಲಿ ಶವವಾಗಿ ಸಿಕ್ಕಳು ಗುಜರಾತ್ ಮೂಲದ ಯುವತಿ

ಚಿಕಾಗೋ, ಜನವರಿ 17: ಎರಡು ವಾರಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿಯೊಬ್ಬರು ತಮ್ಮದೇ ಕಾರಿನ ಡಿಕ್ಕಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕಾದ ಚಿಕಾಗೋದ ಇಲಿಯಾನ್ಸ್ ನಲ್ಲಿ ನಡೆದಿದೆ.

34ರ ಹರೆಯದ ಸುರೀಲ್ ಡಾಬಾವಾಲ ಶವವಾಗಿ ಪತ್ತೆಯಾದ ಮಹಿಳೆ. ಇವರ ತಂದೆ ಗುಜರಾತ್ ಮೂಲದವರು. ಸುರೀಲ ಡಾಬಾವಾಲ ಅವರು ಕಳೆದ ಡಿಸೆಂಬರ್ 30ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಜನವರಿ ಒಂದರಂದು ಶಾಂಬರ್ಗ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಮ್ ಗೆ ಹೋಗಿದ್ದ ಸುರೀಲ ಡಾಬಾವಾಲ ನಂತರ ತನ್ನ ಕಾರು ಚಲಾಯಿಸಿಕೊಂಡು ತೆರಳಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಕೆ ಬಿಳಿ ಸೆಡಾನ್ ಕಾರನ್ನು ಚಿಕಾಗೋದ ಗ್ಯಾರಿಫೀಲ್ಡ್ ಪಾರ್ಕ್ ನಲ್ಲಿ ಪತ್ತೆ ಹಚ್ಚಿದ್ದರು.

Gujarath Origin Girl Found Dead In Her Car In Chicago

ಕಾರಿನ ಡಿಕ್ಕಿ ತೆರೆದಾಗ ಅದರಲ್ಲಿ ಸುರೀಲ ಶವ ಪತ್ತೆಯಾಗಿದೆ. ಹೊದಿಕೆಯಿಂದ ಸುತ್ತಿ ಸುರೀಲ ಅವರ ಶವವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಲಾಗಿದೆ. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿರುವ ಸುರೀಲ ಡಾಬಾವಾಲ, ತನ್ನ ತಂದೆಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+