ಟರ್ಕಿ ಭೂಕಂಪ: 91 ಗಂಟೆ ಅವಶೇಷಗಳಡಿ ಇದ್ದರೂ ಬದುಕಿ ಬಂದ ಬಾಲಕಿ

ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿ 91 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ ಮೂರು ವರ್ಷದ ಬಾಲಕಿ ಬದುಕಿ ಬಂದಿದ್ದಾಳೆ.

ಕಳೆದ ವಾರ ಭೂಕಂಪ ಸಂಭವಿಸಿತ್ತು, ಎಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನುವ ಅಂದಾಜು ಕೂಡ ಯಾರಿಗೂ ಇರಲಿಲ್ಲ.

ಆದರೂ 91 ಗಂಟೆಗಳ ಕಾಲ ಮೂರು ವರ್ಷದ ಮಗು ತನ್ನ ಉಸಿರನ್ನು ಗಟ್ಟಿಯಾಗಿ ಹಿಡಿದುಕೊಂಡು, ಭಯ ಪಡದೆ, ರಕ್ಷಣಾ ಕಾರ್ಯಕರ್ತರು ಆಗಮಿಸುವವರೆಗೂ ಕಾದಿದ್ದಾಳೆ.

Girl, 3 Rescued After 91 Hours Trapped Under Rubble In Turkey

ಭೂಕಂಪ ಸಂಭವಿಸಿ 91 ಗಂಟೆಗಳ ನಂತರ ಪಶ್ಚಿಮ ಇಝ್ಮಿರ್ ಪ್ರಾಂತ್ಯದ ಬೈರಾಕ್ಲಿ ಜಿಲ್ಲೆಯಲ್ಲಿ ಅವಶೇಷಗಳಡಿ ಸಿಲುಕಿದ್ದ ಬಾಲಕಿಯನ್ನು ಹೊರತೆಗೆಯಲಾಗಿದೆ.

ಇದೇ ವೇಳೆ ಕುಸಿದ ಕಟ್ಟಡವೊಂದರ ಅಡಿಯಿಂದ 14 ವರ್ಷದ ಬಾಲಕಿಯೊಬ್ಬಳನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ.ಗ್ರೀಸ್‌ನ ಏಜಿಯನ್ ಸಮುದ್ರದಲ್ಲಿ ಕೇಂದ್ರ ಬಿಂದು ಹೊಂದಿದ್ದ ಭೂಕಂಪದ ಪರಿಣಾಮವಾಗಿ 1 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಮೋಸ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಗುರುವಾರಕ್ಕೆ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ರಕ್ಷಣೆಗೆಂದು ಹೋದಾಗ ಬಾಲಕಿಯೊಬ್ಬಳ ಅಳು ಕೇಳಿಸಿತ್ತು, ಆಕೆ ರಕ್ಷಣಾ ಕಾರ್ಯಕರ್ತರ ಹತ್ತಿರ ಸನ್ನೆ ಮಾಡಿದ್ದಳು, ಬಳಿಕ ತನ್ನ ಹೆಸರು ಮತ್ತು ತಾನು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಳು.

ಕಳೆದ ವಾರ 7.0 ಮ್ಯಾಗ್ನಿಟ್ಯೂಟ್ ಭೂಕಂಪ ಸಂಭವಿಸಿತ್ತು. ಎಷ್ಟು ಜನ ನಾಪತ್ತೆಯಾಗಿದ್ದಾರೆಂಬ ಮಾಹಿತಿ ಇರಲಿಲ್ಲ, ಆದರೂ ಐದು ಕಟ್ಟಡಗಳ ಅವಶೇಷಗಳಡಿ ತಪಾಸಣೆ ಮುಂದುವರೆಸಲಾಗಿತ್ತು.ಟರ್ಕಿಯಲ್ಲಿ 3500 ಟೆಂಟ್‌ಗಳನ್ನು ನಿಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+