ಚಿಲಿ ನೂತನ ಅಧ್ಯಕ್ಷ ಆಯ್ಕೆಯಾದ ಗೇಬ್ರಿಯಲ್ ಬೊರಿಕ್ ಕುರಿತು ಮಾಹಿತಿ
ಸ್ಯಾಂಟಿಯಾಗೋ, ಡಿಸೆಂಬರ್ 20: ಚಿಲಿಯ ನೂತನ ಅಧ್ಯಕ್ಷರಾಗಿ 35 ವರ್ಷದ ಗೇಬ್ರಿಯಲ್ ಬೊರಿಕ್ ಆಯ್ಕೆಯಾಗಿದ್ದಾರೆ. ಗೇಬ್ರಿಯಲ್ ಶೇ.56ರಷ್ಟು ಮತಗಳನ್ನು ಪಡೆದುಕೊಂಡು ಅಧಿಕಾರದ ಗದ್ದುಗೆ ಏರಿದ್ದಾರೆ. ಗೇಬ್ರಿಯಲ್ ಅತ್ಯಂತ ಕಿರಿಯ ಅಧ್ಯಕ್ಷ ಎನಿಸಿಕೊಂಡಿದ್ದು, ಎಡಪಂಥೀಯರಾದ ಅವರು ಬಲಪಂಥೀಯರಾದ ಜೋಸ್ ಆಂಟೊನಿಯೊ ಕಾಸ್ಟ್ ಅವರನ್ನು ಸೋಲಿಸಿದರು. ಕಾಸ್ಟ್ ಅವರು ತಮ್ಮ ಎದುರಾಳಿ ಗೇಬ್ರಿಯಲ್ ಅವರ ಗೆಲುವಿಗೆ ಅಭಿನಂದಿಸಿ ಟ್ವಿಟ್ಟರ್‌ನಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ. ನಂತರ ಸಂದರ್ಶನದಲ್ಲಿ ಮಾತನಾಡಿ, ಚಿಲಿಯ ಪ್ರಜೆಗಳಿಗೆ ನಾನು ಅಧ್ಯಕ್ಷನಾಗುತ್ತೇನೆ, ಮಾರ್ಚ್ 2022ರಲ್ಲಿ ಅಧಿಕಾರವಹಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.
ಗೇಬ್ರಿಯಲ್ 2014ರಲ್ಲಿ ತಮ್ಮ 20ನೇ ವರ್ಷದಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅವರು ಚಿಲಿಯಲ್ಲಿ ಉನ್ನತ ಗುಣಮಟ್ಟದ ಶಿಕ್ಷಣಕ್ಕಾಗಿ ಹೋರಾಟ ನಡೆಸಿದ್ದರು. ಅವರು ಇಲ್ಲಿಯವರೆಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಧ್ಯಕ್ಷರುಗಳಿಗಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ಗೇಬ್ರಿಯಲ್ ಶೇ.56ರಷ್ಟು ಮತ ಪಡೆದಿದ್ದರೆ ಅವರ ವಿರೋಧಿ ಜೋಸ್ ಶೇ.44ರಷ್ಟು ಮತ ಗಳಿಸಿದ್ದರು.
ಗೇಬ್ರಿಯಲ್ ಬೊರಿಕ್ ಯಾರು?
ಗೇಬ್ರಿಯಲ್ ಬೊರಿಕ್ 1986ರಲ್ಲಿ ಪುಂಟಾ ಅರೆನಾಸ್‌ನಲ್ಲಿ ಜನಿಸಿದರು. 2011ರ ಬಳಿಕ ಬೊರಿಕ್ ಅವರು ಯಾವಾಗಲೂ ಪ್ರತಿಭಟನೆ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಿದ್ದರು.ಪ್ಯಾಟಗೋನಿಯನ್ ಐಸ್ ಫೀಲ್ಡ್‌ಗಳ ಕೆಳಗಿರುವ ತವರು ಕ್ಷೇತ್ರ ಮ್ಯಾಗಲ್ಲಾನ್ಸ್‍ನ ಬಗ್ಗೆ ಹೆಮ್ಮೆಪಡುತ್ತಾರೆ.
2011ರಲ್ಲಿ, ತನ್ನ ಕಾನೂನು ಪದವಿಯ ಅಂತಿಮ ವರ್ಷಕ್ಕೆ ಪ್ರವೇಶಿಸಿದಾಗ, ಬೊರಿಕ್ ಶಿಕ್ಷಣ ವ್ಯವಸ್ಥೆಯ ದನಿಯಾಗಿದ್ದರು. ಈ ಮೂಲಕ ಹಲವು ಯುವ ನಾಯಕರನ್ನು ಹುಟ್ಟಿಹಾಕಿತು. ಅವರೆಲ್ಲರೂ ಬೊರಿಕ್ ಗೆ ರಾಜಕೀಯ ಪ್ರವೇಶಕ್ಕೆ ಪ್ರೇರಣೆ ನೀಡಿದರು.
ತಮ್ಮ ಕಾನೂನು ಪದವಿಯನ್ನು ಪೂರ್ಣಗೊಳಿಸದ ಗೇಬ್ರಿಯಲ್ ಬೋರಿಕ್ 2013ರಲ್ಲಿ ಚಿಲಿಯ ಕಾಂಗ್ರೆಸ್ ಚುನಾವಣೆಯಲ್ಲಿ ಜಯಶೀಲರಾದರು ಮತ್ತು ಎರಡು ಅವಧಿಗೆ ಉಪನಾಯಕರಾಗಿ ಸೇವೆ ಸಲ್ಲಿಸಿದರು.
ನಂತರ ಚಿಲಿಯ ಎರಡು ಸಾಂಪ್ರದಾಯಿಕ ಒಕ್ಕೂಟಗಳನ್ನು ಮೀರಿ ಬಂದ ಮೊದಲ ಕಾಂಗ್ರೆಸ್ಸಿಗರಲ್ಲಿ ಒಬ್ಬರಾದರು.
ಇತಿಹಾಸವು ನಮ್ಮಿಂದ ಪ್ರಾರಂಭವಾಗುವುದಿಲ್ಲ ಎಂದು ನನಗೆ ತಿಳಿದಿದೆ" ಎಂದಿರುವ ಗೇಬ್ರಿಯಲ್, ನಾನು ವಿವಿಧ ಸ್ಥಳಗಳಲ್ಲಿ ದಣಿವರಿಯದೆ ಸಾಮಾಜಿಕ ನ್ಯಾಯ ಹುಡುಕುತ್ತಿರುವವರ ದೀರ್ಘ ಪಥದ ವಾರಸುದಾರನಂತೆ ಭಾಸವಾಗುತ್ತಿದೆ ಎಂದು ಹೇಳುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ನಿರಂತರವಾಗಿ ಶ್ರಮಿಸುತ್ತೇನೆ ಎಂದು ಎಂಡಪಂಥೀಯ ಗೇಬ್ರಿಯಲ್ ಬೊರಿಕ್ ಹೇಳಿದ್ದಾರೆ.

ಅವರು ಅಂತಿಮ ವರ್ಷದ ಕಾನೂನು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಪಾಲ್ಗೊಂಡಿದ್ದ ಹಲವರು ಬೊರಿಕ್ ಅವರ ಚುನಾವಣಾ ಅಭಿಯಾನದಲ್ಲೂ ಕೂಡ ಭಾಗಿಯಾಗಿದ್ದರು.
Recommended Video
2013ರಲ್ಲಿ ಕಾಂಗ್ರೆಸ್‌ಗೆ ಸೇರಿದ ಬಳಿಕ ಅವರ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಉಪಾಧ್ಯಕ್ಷರಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ್ದರು.












Click it and Unblock the Notifications