ಪಾಕಿಸ್ತಾನದ ತೇಜ್ಗಮ್ ರೈಲಿನಲ್ಲಿ ಬೆಂಕಿ: 65 ಪ್ರಯಾಣಿಕರ ಸಜೀವ ದಹನ

ಇಸ್ಲಾಮಾಬಾದ್,ಅಕ್ಟೋಬರ್ 31: ಪಾಕಿಸ್ತಾನದ ಕರಾಚಿ-ರಾವಲ್ಪಿಂಡಿ ತೇಜ್ಗಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, 65 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.

13 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ತಲುಪಿದ ಪೊಲೀಸರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಆದರೆ, ಈವರೆಗೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನೆಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಪಾಕಿಸ್ತಾನದಲ್ಲಿ ಕಳೆದ ಜುಲೈನಲ್ಲಿ ಸಂಭವಿಸಿದ್ದ ರೈಲು ಅಪಘಾತದಲ್ಲಿ 11 ಜನರು ಮತ್ತು ಸೆಪ್ಟೆಂಬರ್‌ನಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರು. 2005ರಲ್ಲಿ ಸಿಂಧ್ ಪ್ರಾಂತ್ಯದ ನಿಲ್ದಾಣವೊಂದರಲ್ಲಿ ರೈಲು ಇನ್ನೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 130 ಮಂದಿ ಸಾವನ್ನಪ್ಪಿದ್ದರು.

Fire Engulfs Express Train in Liaqatpur Pakistan 65 Killed

ಮಾಹಿತಿಯ ಪ್ರಕಾರ, ಪಾಕಿಸ್ತಾನದ ಕರಾಚಿ-ರಾವಲ್ಪಿಂಡಿ ತೇಜ್ಗಮ್ ಎಕ್ಸ್‌ಪ್ರೆಸ್ ಗುರುವಾರ ಬೆಳಿಗ್ಗೆ ರಹೀಂ ಯಾರ್ ಖಾನ್ ರೈಲ್ವೆ ನಿಲ್ದಾಣದ ಬಳಿಯ ಲಿಯಾಕತ್‌ಪುರಕ್ಕೆ (ಲಿಯಾಕತ್‌ಪುರ) ತಲುಪಿದ ಸಂದರ್ಭದಲ್ಲಿ ರೈಲಿನ ಬೋಗಿಯೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ಎಷ್ಟು ವೇಗವಾಗಿ ಹರಡಿತು ಎಂದರೆ ಪ್ರಯಾಣಿಕರಿಗೆ ತಪ್ಪಿಸಿಕೊಳ್ಳಲು ಸಹ ಅವಕಾಶ ಸಿಗಲಿಲ್ಲ.

ಈ ಅಪಘಾತ ಸಂಭವಿಸಿದ ಸಮಯದಲ್ಲಿ ಪ್ರಯಾಣಿಕರು ರೈಲಿನಲ್ಲಿ ಮಲಗಿದ್ದರು ಎಂದು ಹೇಳಲಾಗುತ್ತಿದೆ. ಬೆಂಕಿಯಿಂದ ಈವರೆಗೆ 65 ಜನರು ಸಾವನ್ನಪ್ಪಿದ್ದರೆ, 13 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+