ಭ್ರಷ್ಟಾಚಾರ ಆರೋಪ: ಬಂಧನ ಭೀತಿಯಲ್ಲಿ ಪೆರು ಮಾಜಿ ಅಧ್ಯಕ್ಷ ಆತ್ಮಹತ್ಯೆ

ಪೆರು ದೇಶದ ಮಾಜಿ ಅಧ್ಯಕ್ಷ ಆಲನ್ ಗಾರ್ಸಿಯಾ ಬುಧವಾರದಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಭ್ರಷ್ಟಾಚಾರದ ಆರೋಪ ಇದ್ದ ಅವರನ್ನು ಬಂಧಿಸಲು ಪೊಲೀಸರು ತೆರಳುವ ವೇಳೆಗೆ ತಮ್ಮ ಮನೆಯಲ್ಲಿ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರಿಗೆ ಅರವತ್ತೊಂಬತ್ತು ವರ್ಷ ವಯಸ್ಸಾಗಿತ್ತು ಎಂದು ಅವರ ಪಕ್ಷದ ಮೂಲಗಳು ತಿಳಿಸಿವೆ.

ಆಲನ್ ಗಾರ್ಸಿಯಾ ಸಾವನ್ನಪ್ಪಿದ್ದಾರೆ, ಅಪ್ರಾ ದೀರ್ಘ ಕಾಲ ಇರಲಿ ಎಂದು ಗಾರ್ಸಿಯಾ ಅವರ ಅಮೆರಿಕನ್ ಪಾಪ್ಯುಲರ್ ರೆವ್ಯೂಲಷನರಿ ಅಲಯನ್ಸ್ (ಅಪ್ರಾ) ಪ್ರಧಾನ ಕಾರ್ಯದರ್ಶಿ ಒಮರ್ ಕ್ವೆಸಡ ಹೇಳಿದ್ದಾರೆ. ಗಾರ್ಸಿಯಾ ಹೃದಯ ಸ್ತಂಭನದಿಂದ ನಿಧನರಾಗುವ ಮುನ್ನ ಮೂರು ಸಲ ಪ್ರಜ್ಞೆ ತಪ್ಪಿ, ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಪೆರುವಿನ ಆರೋಗ್ಯ ಸಚಿವ ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಗಾರ್ಸಿಯಾ ಅವರನ್ನು ಬಂಧಿಸಲು, ಹತ್ತು ದಿನಗಳ ಕಾಲ ವಶಕ್ಕೆ ಪಡೆಯಲು ಪೊಲೀಸರಿಗೆ ಅರೆಸ್ಟ್ ವಾರಂಟ್ ಸಿಕ್ಕಿತ್ತು. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಂತೆ ಹಾಗೂ ಗಾರ್ಸಿಯಾ ದೇಶ ಬಿಟ್ಟು ಹೋಗದಂತೆ ತಡೆಯಲು ಸೂಚಿಸಲಾಗಿತ್ತು.

Alan Garcia

1985-90 ಹಾಗೂ 2006-11 ಹೀಗೆ ಎರಡು ಬಾರಿ ಗಾರ್ಸಿಯಾ ಪೆರು ದೇಶದ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಬ್ರೆಜಿಲ್ ‌ನ ನಿರ್ಮಾಣ ಸಂಸ್ಥೆಯೊಂದಕ್ಕೆ ದೊಡ್ಡ ಮಟ್ಟದ ಸಾರ್ವಜನಿಕ ಕೆಲಸಗಳ ಗುತ್ತಿಗೆ ನೀಡಲು ಲಂಚ ಪಡೆದ ಆರೋಪ ಅವರ ಮೇಲಿತ್ತು.

ಹದಿನೆಂಟು ತಿಂಗಳು ದೇಶ ಬಿಟ್ಟು ಹೋಗುವಂತಿಲ್ಲ ಎಂದು ಕೋರ್ಟ್ ಹೇಳಿದ ನಂತರ, ಕಳೆದ ನವೆಂಬರ್ ನಲ್ಲಿ ಉರುಗ್ವೆ ರಾಯಭಾರ ಕಚೇರಿಯಲ್ಲಿ ಆಶ್ರಯವನ್ನು ಕೇಳಿದ್ದರು ಗಾರ್ಸಿಯಾ. ಆದರೆ ಅವರ ಮನವಿ ತಿರಸ್ಕೃತವಾಗಿತ್ತು. ಪೆರು ಅಧ್ಯಕ್ಷರಾಗಿ ಭ್ರಷ್ಟಾಚಾರದ ಆರೋಪ ಹೊತ್ತ ನಾಲ್ವರ ಪೈಕಿ ಗಾರ್ಸಿಯಾ ಕೂಡ ಒಬ್ಬರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+