ಇಸ್ರೇಲ್ vs ಇರಾನ್ ಯುದ್ಧ ಅಂತ್ಯ: ಕದನ ವಿರಾಮಕ್ಕೆ ಒಪ್ಪಿಕೊಂಡ ದೇಶಗಳು: ಡೊನಾಲ್ಡ್‌ ಟ್ರಂಪ್ ಟ್ವೀಟ್!

End of Israel vs Iran war: ಜಗತ್ತಿನಲ್ಲಿ ಮೂರನೇ ವಿಶ್ವ ಯುದ್ಧಕ್ಕೆ ಕಾರಣವಾಗಲಿದೆ ಎಂದು ಹೇಳಲಾಗಿದ್ದ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಕೊನೆಗೂ ಅಂತ್ಯವಾಗುತ್ತಿದೆ. ಇದಕ್ಕೆ ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್. ಹೌದು ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವಿನ ಯುದ್ಧ ನಿಲ್ಲಲಿದೆ. ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಟ್ವೀಟ್ ಮಾಡಿದ್ದು. ಇದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ನಾವು ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ. ಯಾವುದೇ ಕಾರಣಕ್ಕೂ ಅಮೆರಿಕ ಮಾಡುವುದನ್ನೆಲ್ಲವನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದೇ ಹೇಳಿಕೊಂಡಿದ್ದ ಇರಾನ್ ಕೊನೆಗೂ ರಾಜಿ ಸಂಧಾನಕ್ಕೆ ಮುಂದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಇಸ್ರೇಲ್ - ಇರಾನ್‌ನ ನಡುವಿನ ಯುದ್ಧ ಕೊನೆಗೂ ಅಂತ್ಯವಾಗುತ್ತಿದೆ. ಅದೂ ಸಹ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಮಧ್ಯಪ್ರವೇಶದಿಂದ. ಹೌದು ಇಸ್ರೇಲ್ ಹಾಗೂ ಇರಾನ್‌ ನಡುವಿನ ಯುದ್ಧ ಅಂತ್ಯವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕ. ಈ ಎರಡೂ ದೇಶಗಳ ನಡುವೆ ಯುದ್ಧ ಹೆಚ್ಚಾಗುವುದಕ್ಕೆ ಪರೋಕ್ಷ ಕಾರಣವಾಗಿದ್ದ ಅಮೆರಿಕ ಇದೀಗ ಅದನ್ನು ಮುಗಿಸುವುದಕ್ಕೂ ಮುಂದಾಗಿದೆ.

End of Israel vs Iran war Countries that have agreed to ceasefire Donald Trump tweets

ಡೊನಾಲ್ಡ್‌ ಟ್ರಂಪ್ ಟ್ವೀಟ್ ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಅಭಿನಂದನೆಗಳು! ಇಸ್ರೇಲ್ ಮತ್ತು ಇರಾನ್ ನಡುವೆ ಸಂಪೂರ್ಣ ಪ್ರಮಾಣದ ಕದನ ವಿರಾಮ ಆಗಲಿದೆ. CEASEFIRE ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಅವರು ಹೇಳಿದ್ದಾರೆ. ಈ ಯುದ್ಧವು ಇಸ್ರೇಲ್ ಮತ್ತು ಇರಾನ್ ತಮ್ಮ ಅಂತಿಮ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ ಸುಮಾರು 6 ಗಂಟೆಗಳ ನಂತರ ಮುಗಿಯಲಿದೆ ಎಂದು ಒಪ್ಪಿಕೊಂಡಿವೆ. ಇದಾಗಿ 12 ಗಂಟೆಗಳ ನಂತರ ಯುದ್ಧ ಮುಕ್ತಾಯವಾಗಿದೆ ಎಂದು ಪರಿಗಣಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಹೇಳಿದ್ದಾರೆ.

ಇನ್ನು ಅಧಿಕೃತವಾಗಿ ಇರಾನ್ CEASEFIRE ಅಂದರೆ ಕದನ ವಿರಾಮ / ಯುದ್ಧ ವಿರಾಮವನ್ನು ಪ್ರಾರಂಭಿಸಲಿದೆ. ಮುಂದುವರಿದು 12 ಗಂಟೆಯಲ್ಲಿ, ಇಸ್ರೇಲ್ CEASEFIRE ಅನ್ನು ಪ್ರಾರಂಭಿಸುತ್ತದೆ. 24 ಗಂಟೆಯಲ್ಲಿ 12ನೇ ದಿನದ ಯುದ್ಧ ಈ ಮೂಲಕ ಅಧಿಕೃತವಾಗಿ ಅಂತ್ಯವಾಗಲಿದೆ.

ಇದನ್ನು ಜಗತ್ತು ಸ್ವಾಗತಿಸುತ್ತದೆ. ಪ್ರತಿ ಕದನ ವಿರಾಮದ ಸಮಯದಲ್ಲೂ ಇನ್ನೊಂದು ಬದಿಯು ಶಾಂತಿಯುತ ಮತ್ತು ಗೌರವ ನಡೆ ಇರಲಿದೆ ಎಂದು (ಇಸ್ರೇಲ್ - ಇರಾನ್‌ ಎಡರೂ ದೇಶಗಳು ಕದನ ವಿರಾಮವನ್ನು ಶಾಂತಿ ಮತ್ತು ಗೌರವದಿಂದ ಸ್ವೀಕರಿಸಬೇಕು) ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆಯುತ್ತದೆ ಎಂಬ ಊಹೆಯ ಮೇಲೆ ಹಾಗೂ ಎರಡೂ ದೇಶಗಳು ಅದೇ ರೀತಿ ನಡೆದುಕೊಳ್ಳಲಿದೆ. ಇರಾನ್‌ ಮತ್ತು ಇಸ್ರೇಲ್ ದೇಶಗಳು ಯುದ್ಧವನ್ನು ಅಂತ್ಯ ಮಾಡಲು ಸಾಮರ್ಥ್ಯ , ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಕ್ಕೆ ನಾನು ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ಇದನ್ನು 12 ದಿನಗಳ ಯುದ್ಧ ಅಂತ್ಯ ಎಂದು ಕರೆಯುವುದಕ್ಕೆ ಇಚ್ಛಿಸುತ್ತೇವೆ ಎಂದಿದ್ದಾರೆ.

ಇದು ವರ್ಷಗಳ ಕಾಲ ನಡೆಯಬಹುದಾಗಿದ್ದ ಯುದ್ಧ ಮತ್ತು ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು. ಆದರೆ ಅದು ಆಗಲಿಲ್ಲ ಮತ್ತು ಎಂದಿಗೂ ಆಗುವುದಿಲ್ಲ! ದೇವರು ಇಸ್ರೇಲ್ ಅನ್ನು ಆಶೀರ್ವದಿಸಲಿ, ದೇವರು ಇರಾನ್ ಅನ್ನು ಆಶೀರ್ವದಿಸಲಿ, ದೇವರು ಮಧ್ಯಪ್ರಾಚ್ಯವನ್ನು ಆಶೀರ್ವದಿಸಲಿ, ದೇವರು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಆಶೀರ್ವದಿಸಲಿ, ಮತ್ತು ದೇವರು ಜಗತ್ತನ್ನು ಆಶೀರ್ವದಿಸಲಿ ಎಂದು ಡೊನಾಲ್ಡ್‌ ಟ್ರಂಪ್ ಅವರು ಸುದೀರ್ಘವಾಗಿ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+