ಕೆನಡಾ ವ್ಯಾಂಕೋವರ್ ದ್ವೀಪದಲ್ಲಿ ಭೂಕಂಪ: 6.6 ತೀವ್ರತೆ ದಾಖಲು

ವ್ಯಾಂಕೋವರ್, ಅಕ್ಟೋಬರ್ 22: ಕೆನಡಾದ ವ್ಯಾಂಕೋವರ್ ದ್ವೀಪದಲ್ಲಿ ಇಂದು (ಅ.22) ಬೆಳಿಗ್ಗೆ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ರಿಕ್ಟರ್ ಮಾಪನದಲ್ಲಿ 6.6 ತೀವ್ರತೆ ದಾಖಲಾಗಿದೆ. ವ್ಯಾಂಕೋವರ್ ದ್ವೀಪದ ಪಶ್ಚಿಮ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ಸುಮಾರು 21 ಮೈಲಿ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಸಂಸ್ಥೆ ಹೇಳಿದೆ.

ಸದ್ಯಕ್ಕೆ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.

ಸೆ.28 ರಂದು ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸುಮಾರು 800 ಕ್ಕೂ ಹೆಚ್ಚು ಜನ ಮೃತರಾಗಿದ್ದರು.

Earthquake of madgnitude 6.6 hits Vancouver island in Cananda

ಈ ಶತಮಾನದಲ್ಲಿ ನಡೆದ ಅತ್ಯಂತ ಘೋರ ನೈಸರ್ಗಿಕ ವಿಕೋಪ ಎನ್ನಿಸಿಕೊಂಡ ಇದು, ಇಂಡೋನೇಷ್ಯಾದ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. 7.7 ತೀವ್ರತೆಯ ಭೂಕಂಪದಿಂದಾಗಿ ಈ ಪ್ರದೇಶದಲ್ಲಿ ಸುನಾಮಿಯೂ ಸಂಭವಿಸಿತ್ತು.

ಅ.11 ರಂದು ಪಪುವಾ ನ್ಯೂ ಗಿನಿಯಾದ ನ್ಯೂಬ್ರಿಟೇನ್ ನಲ್ಲಿ 7.3 ತೀವ್ರತೆಯ ಭೀಕರ ಭೂಕಂಪ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+