ಭಾರತ ಸೇರಿ ವಿಶ್ವಕ್ಕೆ ಹೊಸ ಶಾಕ್ ಕೊಟ್ಟ ಡೊನಾಲ್ಡ್‌ ಟ್ರಂಪ್!

US Visa Changes: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾರತ - ರಷ್ಯಾ ಮತ್ತು ಚೀನಾ ದೇಶಗಳು ಒಂದಾಗಿ ಸಭೆ ಸೇರಿದ ಬೆನ್ನಲ್ಲೇ ಭಾರತದ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಅಮೆರಿಕಾಗೆ ಹೋಗುವವರಿಗೆ ಅಲ್ಲಿನ ಆಡಳಿತವು ವಿವಿಧ ವರ್ಗಗಳಿಗೆ ವಿವಿಧ ಮಾದರಿಯ ವೀಸಾ ವ್ಯವಸ್ಥೆಯನ್ನು ಮಾಡಿದೆ. ಇದೀಗ ವೀಸಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಕಣ್ಣು ತೆರಿಗೆ ನೀತಿಯ ನಂತರ ಇದೀಗ ಅಲ್ಲಿನ ವೀಸಾ ವ್ಯವಸ್ಥೆಯ ಮೇಲೆ ಬಿದ್ದಂತೆ ಇದೆ.

ನಾಳೆಯಿಂದ (ಸೆಪ್ಟೆಂಬರ್ 02) ಅಮೆರಿಕಾದ ವೀಸಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೆ ತರಲಾಗುತ್ತಿದೆ. US ವೀಸಾ ಪಡೆಯುವುದಕ್ಕೆ ಇರುವ ಎಲ್ಲಾ ಸರಳ ಮಾರ್ಗಗಳನ್ನು ತೆಗೆದು ಹಾಕಲಾಗುತ್ತಿದೆ. ವೀಸಾ ಪಡೆಯುವ ಎಲ್ಲರಿಗೂ ಬಹುತೇಕ ಸಂದರ್ಶನಗಳು ಕಡ್ಡಾಯ ಮಾಡಲು ಅಮೆರಿಕಾ ಮುಂದಾಗಿದೆ. ಸೆಪ್ಟೆಂಬರ್ 2ರಿಂದ ಬಹುತೇಕ ಎಲ್ಲಾ ವಲಸೆರಹಿತ ವೀಸಾ ಅರ್ಜಿದಾರರು US ಕಾನ್ಸುಲರ್ ಅಧಿಕಾರಿಗಳೊಂದಿಗೆ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗವುದು ಕಡ್ಡಾಯ ಮಾಡಲಾಗಿದೆ. ಈ ಕ್ರಮದಿಂದ ವೀಸಾ ಪಡೆಯುವುದಕ್ಕೆ ಇಲ್ಲಿಯ ವರೆಗೆ ಸಿಗುತ್ತಿದ್ದ ವಯಸ್ಸಿನ ಆಧಾರಿತ ವಿನಾಯಿತಿ ಮತ್ತು ಡ್ರಾಪ್ ಬಾಕ್ಸ್ ನವೀಕರಣ ಕೈತಪ್ಪುವ ಆತಂಕ ಎದುರಾಗಿದೆ. ಈ ಹೊಸ ನಿಯಮದಿಂದಾಗಿ ವಿದ್ಯಾರ್ಥಿಗಳು, ವ್ಯಾಪಾರ ವೃತ್ತಿಪರರು ಮತ್ತು ಪದೇ ಪದೇ ಯುಎಸ್ ಪ್ರಯಾಣ ಮಾಡುವವರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

Donald Trump s new shock Significant change in US visa system

ಅಮೆರಿಕಾದ ವೀಸಾದಲ್ಲಿ ಏನಿದು ಹೊಸ ಬದಲಾವಣೆ

ಇನ್ನು ಅಮೆರಿಕಾದಲ್ಲಿ ಹಲವು ಮಾದರಿಯ ವೀಸಾಗಳು ಇವೆ. ಇಲ್ಲಿಯವರೆಗೆ 14 ವರ್ಷದೊಳಗಿನ ಮತ್ತು 79 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಅನೇಕ H-1B (ನುರಿತ ಕೆಲಸಗಾರರು), L-1 (ಕಂಪನಿ ವರ್ಗಾವಣೆ), F-1 (ವಿದ್ಯಾರ್ಥಿಗಳು), O-1 (ಅನುಭವಿ ಹಾಗೂ ಬುದ್ಧಿವಂತರು), ಮತ್ತು ಸಂದರ್ಶಕ ವೀಸಾಗಳು (ವ್ಯಾಪಾರ ಅಥವಾ ಪ್ರವಾಸೋದ್ಯಮಕ್ಕಾಗಿ B-1/B-2) ಸಂದರ್ಶನ ವಿನಾಯಿತಿಗಳಿಗೆ ಅರ್ಹತೆ ಪಡೆಯಲು ಅವಕಾಶವಿತ್ತು. ನಾಳೆಯಿಂದ ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು ಅಥವಾ ವೀಸಾಗಳನ್ನು ನವೀಕರಿಸಿಕೊಳ್ಳಬೇಕು ಎಂದು ಇಚ್ಛಿಸುವವರು ಖುದ್ದಾಗಿ ವೀಸಾ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ.

ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳು, ಕೆಲವು ಅಂತಾರರಾಷ್ಟ್ರೀಯ ಸಂಸ್ಥೆಯ ವರ್ಗಗಳು ಮತ್ತು ಮೆಕ್ಸಿಕನ್ ಪ್ರಜೆಗಳಿಗೆ ಪೂರ್ಣ-ಮಾನ್ಯತೆಯ B-1/B-2 ವೀಸಾಗಳು ಮತ್ತು ಗಡಿದಾಟುವ ಯುಎಸ್ ಮಾನ್ಯತೆಯ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ನವೀಕರಣ ವಿನಾಯಿತಿಗಳನ್ನು ನೀಡಲಾಗಿದೆ. ಆದರೆ ಈ ವೀಸಾಗಳನ್ನು ನೀಡುವಾಗಲೂ ಸಂದರ್ಶನಕ್ಕೆ ಕರೆಯುವ ಸಾಧ್ಯತೆ ಇದೆ.

ಅಮೆರಿಕಾ ವೀಸಾ ನೀಡುವಾಗ ವ್ಯಕ್ತಿಯ ಹಿನ್ನೆಲೆ, ಯಾವ ಕಾರಣಕ್ಕೆ ಅಮೆರಿಕಾಗೆ ಹೋಗುತ್ತಿದ್ದಾರೆ ಹಾಗೂ ಎಷ್ಟು ದಿನಗಳ ಕಾಲ ಅಮೆರಿಕಾದಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನುವುದು ಸೇರಿದಂತೆ ಕೆಲವೊಂದು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಲ್ಲದೇ ಇದರೊಂದಿಗೆ ಇದೀಗ ಅಪಾಯಿಂಟ್‌ಮೆಂಟ್‌ಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದೂ ಹೇಳಲಾಗಿದೆ.

ಅಮೆರಿಕಾದ ವೀಸಾ ಪದ್ಧತಿಯಲ್ಲಿನ ಬದಲಾವಣೆಗಳು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರದಲ್ಲಿರುವ ಹಾಗೂ ಅಮೆರಿಕಾಗೆ ಹೋಗಬೇಕು ಎಂದು ಎದುರು ನೋಡುತ್ತಿರುವವರ ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ನವೀಕರಣಕ್ಕೂ ಸಂದರ್ಶನಕ್ಕೆ ಹಾಜರಾಗಬೇಕು ಎನ್ನುವ ಹೊಸ ನಿಯಮದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+