ಡೊನಾಲ್ಡ್ ಟ್ರಂಪ್ ಹೊಸ ತೆರಿಗೆ ನೀತಿ: ಭಾರತಕ್ಕೆ ಆ ಒಂದು ಕಾರಣಕ್ಕೆ ಆತಂಕ!
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೇ ಖಡಕ್ ಆಡಳಿತವನ್ನು ಶುರು ಮಾಡಿಕೊಂಡಿದ್ದಾರೆ. ಟ್ರಂಪ್ ಹೊಸ ನೀತಿಗಳು ಹಾಗೂ ಮಾತುಗಳು ಸಣ್ಣ ಮಟ್ಟಿಗೆ ಭಾರತಕ್ಕೆ ತಲೆನೋವು ಆಗಿರುವುದು ಸಹ ಇದೆ. ಯಾಕೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ತೆರಿಗೆ ನೀತಿಯನ್ನು ಜಾರಿಗೆ ತರುವ ಬಗ್ಗೆ ಹಾಗೂ ಇಂಧನ ನೀತಿಯ ಬಗ್ಗೆ ಮಾತನಾಡಿದ್ದಾರೆ. ಈ ಎಲ್ಲಾ ವಿಷಯಗಳು ಒಂದಿಲ್ಲೊಂದು ಕಾರಣಕ್ಕೆ ಭಾರತಕ್ಕೂ ಸಂಬಂಧಿಸಿದೆ. ಅಲ್ಲದೆ ಭಾರತದ ತೆರಿಗೆ ನೀತಿಯ ಬಗ್ಗೆ ಅವರು ಮೊದಲಿನಿಂದಲೂ ಅಸಮಾಧಾನವನ್ನು ದಾಖಲಿಸಿಕೊಂಡು ಬಂದಿದ್ದಾರೆ. ಅಮೆರಿಕದ ಉತ್ಪನ್ನಗಳಿಗೆ ಭಾರತದಲ್ಲಿ ಸಿಕ್ಕಾಪಟ್ಟೆ ಟ್ಯಾಕ್ಸ್ ಹಾಕ್ತಾರೆ ಅನ್ನೋದು ಡೊನಾಲ್ಡ್ ಟ್ರಂಪ್ ಅವರ ಆರೋಪವಾಗಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ನೀತಿಗಳ ಬಗ್ಗೆ ಹೇಳಿದ್ದೇನು. ಆ ನೀತಿಗಳು ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ವಿವರ ಇಲ್ಲಿದೆ.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಭಾರತವು ಸಂತೋಷ ಹಾಗೂ ಸ್ವಲ್ಪ ವಿಷಯಗಳಲ್ಲಿ ಸಂಕಷ್ಟವನ್ನೂ ಅನುಭವಿಸುತ್ತಿದೆ. ಸಂತೋಷವಾಗುತ್ತಿರುವುದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿರುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದು. ಆದರೆ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯ ಬಗ್ಗೆ ಭಾರತವು ಮೊದಲಿನಿಂದಲೂ ಸಣ್ಣ ಆತಂಕವನ್ನು ಹಾಗೂ ಅಸಮಾಧಾನವನ್ನು ಸಹ ಹೊಂದಿದೆ. ಈಚೆಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ತೆರಿಗೆ ನೀತಿಯ ಬಗ್ಗೆ ಮಾತನಾಡಿದ್ದರು.

ನಾಲ್ಕು ವರ್ಷಗಳ ವನವಾಸದ ನಂತರ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಮರಳಿರುವ ಟ್ರಂಪ್ ಫೂಲ್ ಜೋಶ್‌ನಲ್ಲಿ ಇದ್ದಾರೆ. ಅಲ್ಲದೆ ಅಮೆರಿಕದಲ್ಲಿ ಹೊಸ ನೀತಿಗಳನ್ನು ಜಾರಿಗೆ ತರುವುದಾಗಿ ಹೇಳುತ್ತಿದ್ದಾರೆ. ಅವರ ಹೊಸ ನೀತಿಗಳು ಈಗ ಭಾರತವು ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ವಿಷಯವೇ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ಅಮೆರಿಕದ ಹಲವು ಕ್ಷೇತ್ರಗಳಲ್ಲಿ ಹೊಸ ಬದಲಾವಣೆ ಹಾಗೂ ಹೊಸ ನೀತಿಯನ್ನು ಜಾರಿ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಮೊದಲ ಹಂತದಲ್ಲಿ ವಲಸೆ ನೀತಿ, ತೆರಿಗೆ ಹಾಗೂ ಆಯಿಲ್ ವಿಚಾರಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ವಿಷಯಗಳ ಬಗ್ಗೆ ನಿರ್ಣಾಯಕ ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ಅಮೆರಿಕವನ್ನು ಎಲ್ಲಾ ವಿಷಯದಲ್ಲೂ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ನನ್ನ ಗುರಿಯಾಗಿದೆ ಎಂದಿದ್ದಾರೆ. ಈ ಗುರಿಯನ್ನು ಮುಟ್ಟುವುದಕ್ಕೆ ಅವರು ಯಾವ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎನ್ನುವುದು ಈಗ ಇರುವ ಪ್ರಶ್ನೆಯಾಗಿದೆ.
ಅಮೆರಿಕದ ಅವನತಿ ಮುಗಿಯಿತು: ಇನ್ನು ಟ್ರಂಪ್ ಅವರು ತಮ್ಮ ಮೊದಲ ಭಾಷಣದಲ್ಲಿ ಇನ್ನೇನು ಅಮೆರಿಕದ ಅವನತಿ ಮುಗಿಯಿತು ಎಂದು ಮಾತನಾಡಿದ್ದಾರೆ. ಅಮೆರಿಕವನ್ನು ಎಲ್ಲದರಲ್ಲೂ ಮೊದಲು ಮಾಡುವುದೇ ನನ್ನ ಗುರಿ ಅಂತ ಅವರು ಹೇಳಿದ್ದಾರೆ.
ಭಾರತಕ್ಕೆ ಇರುವ ಆತಂಕವೇನು: ಭಾರತದ ತೆರಿಗೆ ನೀತಿಯ ಬಗ್ಗೆ ಟ್ರಂಪ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತದಿಂದ ಅಮೆರಿಕಗೆ ರಫ್ತು ಮಾಡುವ ವಸ್ತುಗಳ ಮೇಲೆಯೂ ಟ್ರಂಪ್ ಹೆಚ್ಚು ತೆರಿಗೆ ವಿಧಿಸಿದರೆ ಹೇಗೆ ಎನ್ನುವ ಆತಂಕ ಇದೆ. ಇದರಿಂದ ಭಾರತದ ವ್ಯಾಪಾರದ ಮೇಲೆ ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications