Donald Trump: ಕ್ಯಾಬಿನೆಟ್ ಸಭೆಯಲ್ಲಿ ನಿದ್ರೆ ಮಾಡಿದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್: ಇಲ್ಲಿದೆ ವೈರಲ್ ವಿಡಿಯೋ
Donald Trump: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಿಂದಿನ ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಅವರ ಆರೋಗ್ಯ ಹಾಗೂ ಕಾರ್ಯವೈಖರಿಯ ಬಗ್ಗೆ ಟ್ರಂಪ್ ಭಾರೀ ಟೀಕೆ ಮಾಡಿದ್ದರು. ಅಲ್ಲದೇ ಜೋ ಬೈಡನ್ ಅವರಿಂದ ಅಮೇರಿಕಾದ ವರ್ಚಸ್ಸು ಹಾಳಾಗುತ್ತಿದೆ ಎಂದೂ ಅವರು ದೂರಿದ್ದರು. ಆದರೆ ಇದೀಗ ಟ್ರಂಪ್ ಭಾರೀ ಮುಜುಗರಕ್ಕೆ ಒಳಗಾಗಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರ ಅಮೇರಿಕಾದಲ್ಲಿ ಸುದೀರ್ಘ ಕ್ಯಾಬಿನೆಟ್ ಮೀಟಿಂಗ್‌ಗಳು ನಡೆದಿವೆ. ಈ ಮೀಟಿಂಗ್‌ನಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ನಿದ್ರೆಗೆ ಜಾರಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 79 ವರ್ಷದ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಕಣ್ಣುಗಳನ್ನು ಮಿಟುಕಿಸಿ, ನಿದ್ರೆಗೆ ಜಾರಿದ್ದಾರೆ. ಒಂದು ಹಂತದಲ್ಲಿ ಕಣ್ಣುಗಳನ್ನು ಸಂಪೂರ್ಣವಾಗಿ ಮುಚ್ಚು ಮಲಗಿರುವುದು ಕ್ಯಾಮೆರಾಗಳು ಸೆರೆಹಿಡಿದಿವೆ, ಕ್ಯಾಬಿನೆಟ್ ಸದಸ್ಯರು ತಮ್ಮ ಸಾಧನೆಗಳನ್ನು ಎತ್ತಿ ತೋರಿಸುತ್ತಾ ಅವರನ್ನು ಹೊಗಳುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಟ್ರಂಪ್ ಅವರು ಮತ್ತೆ ಮತ್ತೆ ನಿದ್ರೆಗೆ ಜಾರಿದ್ದಾರೆ. ತೂಕಡಿಸಿ, ತೂಕಡಿಸಿ ಬೀಳುತ್ತಿರುವ ವಿಡಿಯೋ ಟ್ರೆಂಡ್ ಸೃಷ್ಟಿ ಮಾಡಿದೆ.

ಅಮೇರಿಕಾದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮಾತನಾಡುವಾಗ ಟ್ರಂಪ್ ಸ್ವಲ್ಪ ಸಮಯ ನಿದ್ರಿಸುತ್ತಿದ್ದರು. ಟ್ರೂತ್ ಸೋಷಿಯಲ್‌ನಲ್ಲಿ ತಡರಾತ್ರಿಯ ಪೋಸ್ಟ್ ಹಂಚಿಕೊಂಡ ಕೆಲವೇ ಕ್ಷಣಗಳ ನಂತರ ಟ್ರಂಪ್ ನಿದ್ರೆಗೆ ಜಾರುತ್ತಿರುವ ವಿಡಿಯೋ ವೈರಲ್ ಆಗಿದೆ.
ಟ್ರಂಪ್ ಅವರಂತೆ ಯಾರೂ ಕೆಲಸ ಮಾಡಲ್ಲ!
ಇನ್ನು ಈ ವಿಷಯ ಇಷ್ಟೊಂದು ಚರ್ಚೆ ಹಾಗೂ ವೈರಲ್ ಆಗುವುದಕ್ಕೆ ಹಲವು ಕಾರಣಗಳಿವೆ. ಅಮೇರಿಕಾದ ಕ್ಯಾಬಿನೆಟ್ ಮೀಟಿಂಗ್ ಪ್ರಾರಂಭವಾಗುವುದಕ್ಕೂ ಕೆಲವೇ ಗಂಟೆಗಳ ಮುಂಚೆ The White House ಸೋಷಿಯಲ್ ಮೀಡಿಯಾ ಎಕ್ಸ್‌ಖಾತೆಯಿಂದ ಟ್ವೀಟ್‌ವೊಂದನ್ನು ಮಾಡಲಾಗಿತ್ತು. ಈ ಟ್ವೀಟ್‌ನಲ್ಲಿ ವಿಭಿನ್ನ ಹಾದಿ.. ಅಮೇರಿಕಾದ ಜನರಿಗಾಗಿ ಯಾರೂ ಟ್ರಂಪ್‌ಗಿಂತ ಹೆಚ್ಚು ಶ್ರಮಿಸುವುದಿಲ್ಲ ಎಂದು ಪೋಸ್ಟ್ ಮಾಡಲಾಗಿತ್ತು.
NEW YORK POST ವರದಿಯನ್ನು ಉಲ್ಲೇಖಿಸಿ ಟ್ರಂಪ್ ಅವರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ, ಓವಲ್ (ಕಚೇರಿಗೆ ಬರುವ ಸಮಯ ಅಥವಾ ಲಾಗಿನ್ ವಿವರ) ಆಫೀಸ್ ದಾಖಲೆಗಳು ಟ್ರಂಪ್ ಅವರು ಅವಧಿ ಮೀರಿ ಕೆಲಸ ಮಾಡುವುದನ್ನು ಖಚಿತಪಡಿಸುತ್ತವೆ ಎಂದು ಟ್ವೀಟ್ ಮಾಡಲಾಗಿತ್ತು. ಇದಾಗಿ ಕೆಲವೇ ಗಂಟೆಗಳಲ್ಲಿ ಟ್ರಂಪ್ ನಿದ್ರೆಗೆ ಜಾರಿದ್ದಾರೆ.
Donald Trump got more sleep during this meeting than I got all of last night.
— A Tweetr Has No Name (@WokeMustGo) December 2, 2025
pic.twitter.com/VZ5of9bcP0
ಸಾರ್ವಜನಿಕ ಸಮಯ ಕಡಿತ: ಇನ್ನು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೆಚ್ಚು ಆಯಾಸಕ್ಕೆ ಒಳಗಾಗುತ್ತಿದ್ದಾರೆ ಎಂದು ಹಲವರು ದೂರಿದ್ದಾರೆ. ಅದಕ್ಕೆ ಅವರು ನೀಡಿರುವ ಮತ್ತೊಂದು ಕಾರಣವೇನೆಂದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಣಿಸಿಕೊಳ್ಳುವ ಅಥವಾ ಸಾರ್ವಜನಿಕ ಸಂಪರ್ಕ ಸಭೆ, ಕಾರ್ಯಕ್ರಮಗಳಿಗೆ ಮೀಸಲಿರಿಸಿರುವ ಸಮಯವನ್ನು ಕಡಿತ ಮಾಡಿದ್ದಾರೆ ಎನ್ನುವುದು ಸಹ ಒಂದಾಗಿದೆ.












Click it and Unblock the Notifications