Donald Trump: ಅಧಿಕಾರಕ್ಕೆ ಬಂದ ದಿನವೇ ಭಾರತೀಯರು ಸೇರಿ ಲಕ್ಷಾಂತರ ಜನರಿಗೆ ಡೊನಾಲ್ಡ್‌ ಟ್ರಂಪ್ ಶಾಕ್‌!‌

Donald Trump immigration policy: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪದಗ್ರಹಣಕ್ಕೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಡೊನಾಲ್ಡ್‌ ಟ್ರಂಪ್‌ ಅವರು ಸೋಮವಾರ ಜನವರಿ 20ರಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಅಧಿಕಾರ ಸ್ವೀಕಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಸಕಲ ಸಿದ್ಧತೆಗಳನ್ನು ಸಹ ಮಾಡಿಕೊಳ್ಳಲಾಗಿದೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಹಾಗೂ ಎರಡನೇ ಬಾರಿ ಟ್ರಂಪ್ ಪದಗ್ರಹಣ ಮಾಡ್ತಾ ಇದ್ದಾರೆ. ಇದರ ಬೆನ್ನಲ್ಲೇ ಟ್ರಂಪ್‌ ವಲಸೆ ನೀತಿ ಭಾರತೀಯರು ಸೇರಿದಂತೆ ಲಕ್ಷಾಂತರ ಜನರಲ್ಲಿ ಭಯವನ್ನುಂಟು ಮಾಡಿದೆ. ದಾಖಲೆಗಳಿಲ್ಲದೆ ಭಾರತೀಯರು ಸೇರಿದಂತೆ ಲಕ್ಷಾಂತರ ಜನ ಅಕ್ರಮ ವಲಸಿಗರು ಅಮೆರಿಕದಲ್ಲಿ ಇದ್ದಾರೆ. ಇನ್ನು ಟ್ರಂಪ್ ಅವರ ಕಠಿಣ ವಲಸೆ ನೀತಿಯಿಂದ ಹಲವರಿಗೆ ಜೈಲು ಕಂಬಿಗಳ ಹಿಂದೆ ಸೇರುವ ಆತಂಕ ಶುರುವಾಗಿದೆ. ಅಂದಾಜು ಅಮೆರಿಕದಲ್ಲಿ 15 ಲಕ್ಷ ಜನ ವಲಸಿಗರು ಇದ್ದಾರೆ ಅಂತ ಹೇಳಲಾಗಿದೆ!

ಡೊನಾಲ್ಡ್‌ ಟ್ರಂಪ್ ಅಧಿಕಾರಕ್ಕೆ ಬರುವ ಮುನ್ನವೇ ಈ ಆತಂಕ ಶುರುವಾಗಿತ್ತು. ಅಮೆರಿಕ ಅಧ್ಯಕ್ಷೀಯ ಚುನಾಣೆಗೆ ಟ್ರಂಪ್‌ ಸ್ಪರ್ಧೆ ಮಾಡಲಿದ್ದಾರೆ ಎಂದಾಗಲೇ ಅಮೆರಿಕದಲ್ಲಿ ಇರುವ ವಲಸಿಗರಲ್ಲಿ ಆತಂಕ ಮನೆ ಮಾಡಿತ್ತು. ಅದರಲ್ಲೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಡೊನಾಲ್ಡ್‌ ಟ್ರಂಪ್ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ವಲಸೆ ನೀತಿಯೂ ಒಂದಾಗಿದೆ. ವಲಸೆ ನೀತಿಯನ್ನು ತಡೆಯುವ ಮೂಲಕ ಅಮೆರಿಕದ ಮೂಲ ನಿವಾಸಿಗಳಿಗೆ ಉದ್ಯೋಗ ಹಾಗೂ ಸೌಲಭ್ಯಗಳಲ್ಲಿ ಹೆಚ್ಚಿನ ಅವಕಾಶ ಕೊಡುವುದು ಸೇರಿದಂತೆ ಹಲವು ಕಾರಣಕ್ಕೆ ವಲಸೆ ನೀತಿ ಗಂಭೀರವಾಗಿದೆ.

Donald Trump Shocked Millions of People Including Indians on Day He Came to Power

ಯುಎಸ್ ವಲಸೆ ಮತ್ತು ಕಸ್ಟಮ್ಸ್‌ ಎನ್‌ಫೋರ್ಸ್‌ಮೆಂಟ್ ಅಧಿಕಾರಿಗಳು ಅಮೆರಿಕದಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ವಲಸೆ ಇರುವವರ ಪಟ್ಟಿಯನ್ನು ರೆಡಿ ಮಾಡಿಕೊಂಡಿದ್ದಾರೆ. ಆಘಾತಕಾರಿ ವಿಚಾರವೆಂದರೆ ಈ ರೀತಿ ಸಿದ್ಧವಾಗಿರುವ ಪಟ್ಟಿಯಲ್ಲಿ ಭಾರತದ 18,000 ಸಾವಿರ ಜನ ಸಹ ಇದ್ದಾರೆ ಎಂದು ಹೇಳಲಾಗಿದೆ. ಅಮೆರಿಕದ ಅಧಿಕಾರಿಗಳು ಮಂಗಳವಾರ ದೇಶಾದ್ಯಂತ ದಾಖಲೆ ರಹಿತ ವಲಸಿಗರನ್ನು ಸಾಮೂಹಿಕ ಬಂಧನ ಮಾಡಲಿದ್ದಾರೆ. ಇದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಗಳು ಹೇಳಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ವಲಸೆ ನೀತಿಯಿಂದ ಲಕ್ಷಾಂತರ ಜನ ಗಡಗಡ ಅಂತ ನಡುಗುತ್ತಿದ್ದಾರೆ. ಸಮೂಹಿಕ ಬಂಧನದ ಸುಳಿವನ್ನು ಅಧಿಕಾರಿಗಳು ಬಿಟ್ಟುಕೊಟ್ಟಿದ್ದು. ಅಮೆರಿಕದಲ್ಲಿ ಎಲ್ಲೆಲ್ಲಿ ವಲಸಿಗರು ಇದ್ದಾರೆ ಎನ್ನುವ ಬಗ್ಗೆ ಲಿಸ್ಟ್‌ ಸಹ ಈಗಾಗಲೇ ರೆಡಿ ಇದೆ. ನಾನು ಅಧಿಕಾರಕ್ಕೆ ಬಂದರೆ ಅಮೆರಿಕದಲ್ಲಿ ಅಕ್ರಮ ವಲಸೆ ನೀತಿ ತಡೆಗೆ ಕ್ರಮ ತೆಗೆದುಕೊಳ್ಳಲಿದ್ದೇನೆ ಎಂದು ಹೇಳಿದ್ದರು. ಅದರಂತೆ ಅಧಿಕಾರಕ್ಕೆ ಬಂದ ಮೊದಲ ದಿನವೇ ಈ ಅಭಿಯಾನ ಶುರುವಾಗಲಿದೆ ಅಂತ ಹೇಳಲಾಗ್ತಿದೆ. ಅಮೆರಿಕದಲ್ಲಿರುವ ಲಕ್ಷಾಂತರ ಜನ ದಾಖಲೆರಹಿತ ವಲಸಿಗರನ್ನು ಗಡೀಪಾರು ಮಾಡುವುದಾಗಿ ಹೇಳಲಾಗಿತ್ತು. ಗಡಿಪಾರು ಹಾಗೂ ಬಂಧನ ಅಭಿಯಾನ ಸೋಮವಾರದಿಂದಲೇ ಪ್ರಾರಂಭವಾಗುವ ಸಾಧ್ಯತೆ ಇದೆ.

ಚಿಕಾಗೋದಲ್ಲಿ ಶುರು: ಇನ್ನು ಅಮೆರಿಕದಾದ್ಯಂತ ಅಕ್ರಮ ವಲಸಿಗರು ಇದ್ದು. ಅಮೆರಿಕದಲ್ಲಿ ವಲಸೆ ದಾಳಿ ಶುರುವಾಗಲಿದೆ. ಅಮೆರಿಕದ ಚಿಕಾಗೋದಿಂದ ಇದು ಶುರುವಾಗಲಿದೆ. ಇದಕ್ಕಾಗಿ ನೂರಾರು ಜನ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಒಟ್ಟಾರೆ ಅಮೆರಿಕದಲ್ಲಿ ಅಕ್ರಮ ವಲಸೆ ನೀತಿ ಗಂಭೀರವಾಗಿ ಜಾರಿಯಾಗುತ್ತಿದೆ. ಇದರಲ್ಲಿ ಎಷ್ಟು ಜನ ಗಡಿಪಾರು ಆಗಲಿದ್ದಾರೆ ಹಾಗೂ ಎಷ್ಟು ಜನ ಜೈಲು ಸೇರಲಿದ್ದಾರೆ ಎನ್ನುವುದಷ್ಟೇ ಈಗ ಲೆಕ್ಕಾಚಾರದ ವಿಷಯವಾಗಿದೆ. ಯಾಕೆಂದರೆ ಈ ಹಿಂದೆಯು ಅಮೆರಿಕ ಟ್ರಂಪ್‌ ಅವರ ಕಠಿಣ ಆಡಳಿತವನ್ನು ಕಂಡಿದೆ.

18 ಸಾವಿರ ಭಾರತೀಯರಿಗೆ ಶಾಕ್‌: ಇನ್ನು ಈ ಬೆಳವಣಿಗೆಯಿಂದ ಭಾರತೀಯರಿಗೂ ಶಾಕ್‌ ಎದುರಾಗಿದೆ. ಅಮೆರಿಕದಲ್ಲಿ ಯಾವುದೇ ದಾಖಲೆಗಳಿಲ್ಲದೆ ಬರೋಬ್ಬರಿ 18,000 ಸಾವಿರ ಜನರಿದ್ದಾರೆ ಅಂತ ಹೇಳಲಾಗಿದೆ. ಯುಎಸ್ ವಲಸೆ ಹಾಗೂ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಇದಕ್ಕೆ ಸಂಬಂಧಿಸಿದಂತೆ ಪಟ್ಟಿಯನ್ನ ಈಗಾಗಲೇ ರೆಡಿಮಾಡಿಟ್ಟುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+