Donald Trump Oath Ceremony: ಟ್ರಂಪ್‌ ಅಧಿಕಾರಕ್ಕೇರಿದ ನಂತರ ಭಾರತ-ಚೀನಾಗೆ ಭೇಟಿ ನೀಡಲು ಪ್ಲ್ಯಾನ್‌

ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಡೊನಾಲ್ಡ್‌ ಟ್ರಂಪ್‌ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದು, ಇಡೀ ಜಗತ್ತೇ ಈ ಕಾರ್ಯಕ್ರಮದತ್ತ ಚಿತ್ತ ಹರಿಸಿದೆ. ಈ ಕಾರ್ಯಕ್ರಮಕ್ಕೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನಿಸಲಾಗಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಕೂಡ ಆಹ್ವಾನ ಬಂದಿದ್ದು, ಮೋದಿ ಅವರ ಬದಲಿಗೆ ಭಾರತದ ಸರ್ಕಾರದ ವಿದೇಶಾಂಗ ಸಚಿವರು ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂದು ವರದಿಯಾಗಿದೆ.

ಇನ್ನು ಅಮೇರಿಕಾ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರಕ್ಕೆ ಬಂದ ನಂತರ ಅವರು ಮುಖ್ಯವಾಗಿ ಹಲವು ಬದಲಾವಣೆಗನ್ನು ತರಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಎರಡನೇ ಬಾರಿ ಅಧ್ಯಕ್ಷರಾಗುತ್ತಿರುವ ಟ್ರಂಪ್‌ ಈ ಹಿಂದೆಯೂ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮೋದಿ ಅವರೊಂದಿಗೆ ಕೂಡ ಟ್ರಂಪ್ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಹಿನ್ನೆಲೆ ಅವರು ಅಧ್ಯಕ್ಷರಾಗಿ ಮೊದಲಿಗೆ ಭಾರತ ಹಾಗೂ ಚೀನಾ ದೇಶಗಳಿಗೆ ಭೇಟಿ ನೀಡಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Donald Trump Plans To Visit India And China After Oath Ceremony

ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರರು ಅವರ ವಿದೇಶಾಂಗ ನೀತಿಯ ಕಾರ್ಯಸೂಚಿಯಲ್ಲಿ ಚೀನಾ ಮತ್ತು ಭಾರತಕ್ಕೆ ಆರಂಭಿಕ ಭೇಟಿಯ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಟ್ರಂಪ್‌ ಅವರು ಪೂರ್ವಭಾವಿ ರಾಜತಾಂತ್ರಿಕ ನಡೆಯ ಹಿನ್ನೆಲೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನೇರ ಚರ್ಚೆ ಹಾಗೂ ಭಾರತದ ವಿದೇಶಾಂಗ ಸಚಿವರೊಂದಿಗೆ ಪ್ರಾಥಮಿಕ ಮಾತುಕತೆ ನಡೆಸಲಿದ್ದಾರೆ. ಟ್ರಂಪ್‌ ಅವರು ಸಾಂಪ್ರದಾಯಿಕ ಯುರೋಪಿಯನ್ ಮೈತ್ರಿಗಳಿಂದ ದೂರ ಸರಿಯುವ ಮೂಲಕ ಚೀನಾ ಮತ್ತು ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಸುಧಾರಿಸುವ ಕಡೆಗೆ ಗಮನ ಹರಿಸಲಿದ್ದಾರೆ.

ಚೀನಾಕ್ಕೆ ಟ್ರಂಪ್‌ ಪ್ರವಾಸ ಕೈಗೊಳ್ಳಲಿದ್ದು, ನೇರವಾಗಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಚರ್ಚೆಗಳನ್ನು ನಡೆಸಲಿದ್ದಾರೆ. ಈ ಏಪ್ರಿಲ್‌ನ ಆರಂಭದಲ್ಲೇ ಅವರು ಭಾರತಕ್ಕೆ ಭೇಟಿ ನೀಡಲು ಯೋಜನೆ ರೂಪಿಸಿದ್ದಾರೆ ಎಂದು ಟ್ರಂಪ್ ಸಲಹೆಗಾರರು ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಪೂರ್ವಭಾವಿ ಚರ್ಚೆಗಳು ಕೂಡ ನಡೆದಿವೆ. ಈ ಪ್ರಮಾಣವಚನದ ನಂತರ ಮುಂದಿನ ಒಂದು ವಾರ ಭಾರತೀಯ ವಿದೇಶಾಂಗ ಸಚಿವರು ಅಮೇರಿಕಾ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ತಮ್ಮ ಸಹವರ್ತಿ ರಾಷ್ಟ್ರಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

Donald Trump Plans To Visit India And China After Oath Ceremony

ಟ್ರಂಪ್‌ ಅಧಿಕಾರ ವಹಿಸಿಕೊಂಡ ಕೂಡಲೇ ಚೀನಾ ಮತ್ತು ಭಾರತದತ್ತ ಗಮನಹರಿಸಿದ್ದು, ಯುರೋಪ್, ನ್ಯಾಟೋ ಮತ್ತು ನೆರೆಯ ಕೆನಡಾ ಮತ್ತು ಮೆಕ್ಸಿಕೋದ ಬಗ್ಗೆ ಅವರು ತಿರಸ್ಕಾರ ನೀತಿಯನ್ನೇ ಮುಂದುವರಿಸಲಿದ್ದಾರೆ. ಸದ್ಯ ಚೀನಾ ಮತ್ತು ಭಾರತವು ಸ್ಪಷ್ಟವಾಗಿ ಟ್ರಂಪ್‌ ಅವರ ದೃಷ್ಟಿಯಲ್ಲಿದೆ. ಟ್ರಂಪ್‌ ಮುಖ್ಯವಾಗಿ ಚೀನಾದೊಂದಿಗೆ ವ್ಯಾಪಾರ, ಟಿಕ್‌ಟಾಕ್ ಮತ್ತು ಇತರ ಹಲವು ವಿಷಯಗಳ ಬಗ್ಗೆ ಈಗಾಗಲೇ ಚರ್ಚಿಸಿದ್ದಾರೆ. ಅಧ್ಯಕ್ಷ ಕ್ಸಿ ಮತ್ತು ಟ್ರಂಪ್‌ ಜಗತ್ತನ್ನು ಹೆಚ್ಚು ಶಾಂತಿಯುತ ಮತ್ತು ಸುರಕ್ಷಿತವಾಗಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಎಂದು ಟ್ರಂಪ್‌ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+