Donald Trump Oath: ಜೋ ಬೈಡನ್‌ನಿಂದ ಟ್ರಂಪ್‌ಗೆ ಸರ್ಪ್ರೈಸ್ ಗಿಫ್ಟ್!
Donald Trump Oath: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದು. ಟ್ರಂಪ್ ಅವರು ಅಧಿಕಾರ ಸ್ವೀಕರಿಸುವ ಮುನ್ನ ಹಲವು ಅಚ್ಚರಿಯ ಬೆಳವಣಿಗೆಗಳು ಅಮೆರಿಕದಲ್ಲಿ ನಡೆಯುತ್ತಿವೆ. ಇದೀಗ ನಿರ್ಗಮಿತ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಸುದೀರ್ಘ ಪತ್ರ ಬರೆದಿದ್ದಾರೆ. ಈ ಪತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ನಿರ್ಗಮಿತ ಅಧ್ಯಕ್ಷರು ನೂತನ ಅಧ್ಯಕ್ಷರಿಗೆ ಪತ್ರ ಬರೆಯುವುದು ವಾಡಿಕೆ. ಅದೇ ರೀತಿ ಅಮೆರಿಕದ ಹಂಗಾಮಿ ಅಧ್ಯಕ್ಷ ಜೋ ಬೈಡನ್ ಅವರು ಡೊನಾಲ್ಡ್ ಟ್ರಂಪ್‌ಗೆ ಪತ್ರ ಬರೆದು ಶುಭಕೋರಿದ್ದಾರೆ. ಆದರೆ ಈ ಪತ್ರದಲ್ಲಿ ಮತ್ತೊಂದು ವಿಶೇಷವೂ ಇದ್ದು ಇದು ವೈರಲ್‌ಗೆ ಕಾರಣವಾಗಿದೆ. ಅಷ್ಟಕ್ಕೂ ಆ ಪತ್ರದ ಉದ್ದೇಶವೇನು ಎನ್ನುವ ವಿವರ ಇಲ್ಲಿದೆ.
ಅಮೆರಿಕದ ಅಧ್ಯಕ್ಷರಾದ ಜೋ ಬಿಡೆನ್ ಅವರು ನಿಯೋಜಿತ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ಪತ್ರ ಬರೆದಿದ್ದಾರೆ. ಅದನ್ನು ಸರ್ಕಾರಿ ಕಚೇರಿ ಓವಲ್ನ ಮೇಜಿನ ಡ್ರಾಯರ್‌ನಲ್ಲಿ ಇರಿಸಿರುವುದಾಗಿ ಹೇಳಿದ್ದಾರೆ. ಅಮೆರಿಕದಲ್ಲಿ ವೈಟ್‌ಹೌಸ್‌ನಿಂದ ಹೊರಡುವ ಅಮೆರಿಕದ ಅಧ್ಯಕ್ಷರು ಹೊಸ ಅಧ್ಯಕ್ಷರಿಗೆ ಪತ್ರ ಬರೆಯುವುದು ವಾಡಿಕೆ ಇದೆ. ಈ ಬಾರಿ ಮತ್ತೊಂದು ಕಾರಣಕ್ಕೆ ಈ ಪತ್ರ ವಿಶೇಷತೆ ಪಡೆದುಕೊಂಡಿದೆ. ಅಮೆರಿಕದ ಸಂಪ್ರದಾಯವನ್ನು ಮುಂದುವರಿಸಲಾಗಿದ್ದರೂ. ಇದರಲ್ಲಿ ಒಂದು ವಿಶೇಷವಿದೆ.

ಅಮೆರಿಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರೊಬ್ಬರು ಅವರ ಹಿಂದಿನ ಅಧ್ಯಕ್ಷ ಹಾಗೂ ನೂತನ ಅಧ್ಯಕ್ಷ ಇಬ್ಬರೂ ಒಬ್ಬರೇ ಆಗಿರುವವರಿಗೆ ಪತ್ರ ಬರೆದಿದ್ದಾರೆ. ಯಾಕೆಂದರೆ ಅಮೆರಿಕದ ನೂತನ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರಾಗಿದ್ದವರು ಡೊನಾಲ್ಡ್ ಟ್ರಂಪ್ ಅವರೇ ಆಗಿದ್ದಾರೆ. ಈ ರೀತಿ ಆಗುತ್ತಿರುವುದು ಅಮೆರಿಕದ ಇತಿಹಾಸದಲ್ಲಿ ಅಪರೂಪದಲ್ಲಿ ಅಪರೂಪ ಅಂತಲೇ ಹೇಳಲಾಗುತ್ತಿದೆ.
ಶ್ವೇತಭವನವನ್ನು ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿ ಪ್ರವೇಶಿಸುತ್ತಿದ್ದಾರೆ. ಕ್ರಿಮಿನಲ್ ಆರೋಪಗಳು ಅವರ ವಿರುದ್ಧ ಕೇಳಿ ಬಂದಿತ್ತು. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಎರಡು ಬಾರಿ ಅವರ ಹತ್ಯೆಗೆ ಪ್ರಯತ್ನಗಳು ಸಹ ನಡೆದಿದ್ದವು. ಇದೀಗ ಸೋಮವಾರ ಅಮೆರಿಕದ 47 ನೇ ಅಧ್ಯಕ್ಷರಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿ ಲವ್‌ಯೂ ಅಮೆರಿಕ: ಇನ್ನು ನಿರ್ಗಮಿತ ಅಧ್ಯಕ್ಷರಾದ ಜೋ ಬೈಡನ್ ಅವರು ಹಾಗೂ ಅವರ ಪತ್ನಿ ವಿಲವ್ ಯು ಅಮೆರಿಕ ಅಂತ ಹೇಳಿ ಪೋಸ್ಟ್ ಮಾಡಿರುವ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊನೆಯದಾಗಿ ದಂಪತಿಗಳು ವೈಟ್‌ಹೌಸ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಭಾರೀ ವೈರಲ್ ಆಗಿದೆ.












Click it and Unblock the Notifications