Donald Trump: ಡೊನಾಲ್ಡ್ ಟ್ರಂಪ್‌ಗೆ ಕೊನೆ ಕ್ಷಣದಲ್ಲಿ ಜೋ ಬೈಡನ್ ಶಾಕ್, ರಷ್ಯಾ - ಉಕ್ರೇನ್ ವಾರ್‌ಗೆ ಉ.ಕೊ ಎಂಟ್ರಿ!
ರಷ್ಯಾ ಹಾಗೂ ಉಕ್ರೇನ್‌ನ ನಡುವೆ ಯುದ್ಧದ ಕಾರ್ಮೋಡ ಸರಿಯುತ್ತಲ್ಲೇ ಇಲ್ಲ. ಕೊನೆಯ ಕ್ಷಣದಲ್ಲೂ ರಷ್ಯಾ ಮೇಲೆ ದಾಳಿ ನಡೆಸುವುದಕ್ಕೆ ಅಮೆರಿಕದ ಹಂಗಾಮಿ ಅಧ್ಯಕ್ಷ ಜೋ ಬೈಡನ್ ಉಕ್ರೇನ್‌ಗೆ ಸೂಚನೆ ನೀಡಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಹೇರುತ್ತಿದ್ದಂತೆಯೇ ವಿಶ್ವದಲ್ಲಿ ಯುದ್ಧಗಳು ನಿಲ್ಲಲಿವೆ ಎಂದೇ ಹೇಳಲಾಗಿತ್ತು. ಆದರೆ, ಅಮೆರಿಕದಲ್ಲಿ ಇನ್ನೂ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈ ನಡುವೆ ಹಂಗಾಮಿ ಅಧ್ಯಕ್ಷ ಜೋ ಬೈಡನ್ ಅವರ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಜೋ ಬೈಡನ್ ಅವರು ಅಮೆರಿಕದ ದೀರ್ಘ ಶ್ರೇಣಿಯ ಹಾಗೂ ಬಲಿಷ್ಠ ಕ್ಷಿಪಣಿಗಳನ್ನು ಬಳಸಲು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ರಷ್ಯಾದ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವಂತೆ ಉಕ್ರೇನ್‌ಗೆ ಸೂಚಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳೇ ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅಧಿಕೃತ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಇದು ಉಕ್ರೇನ್‌ನ (ರಾಜಧಾನಿ ಕೈವ್) ಬಹುಕಾಲದ ಬೇಡಿಕೆಯಾಗಿತ್ತು ಎಂದೂ ಹೇಳಲಾಗಿದೆ. ಆದರೆ, ಈ ಬಗ್ಗೆ ಅಮೆರಿಕದ ವೈಟ್‌ಹೌಸ್‌ನಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಪ್ರಕಟವಾಗಬೇಕಿದೆ.

ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಅವರು, ರಷ್ಯಾದ ಮಿಲಿಟರಿ ಭಾಗವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದಕ್ಕೆ ಪ್ರಬಲ ಮಿಸೈಲ್‌ಗಳನ್ನು ಬಳಸುವುದಕ್ಕೆ ಅನುಮತಿ ನೀಡುವಂತೆ ಮನವಿ ಮಾಡುತ್ತಲ್ಲೇ ಇದ್ದರು. ಇದೀಗ ಕೊನೆಯ ಹಂತದಲ್ಲಿ ಜೋ ಬೈಡನ್ ಅವರು, ಈ ಮಿಸೈಲ್‌ಗಳ ದಾಳಿಗೆ ಅನುಮತಿ ಸೂಚಿಸಿದ್ದಾರೆ.
ಆದರೆ, ಅಧಿಕಾರ ಸ್ವೀಕರಿಸುವ ಹಂತದಲ್ಲಿ ಇರುವ ಡೊಲಾಲ್ಡ್ ಟ್ರಂಪ್‌ಗೆ ಇದು ಹೊಸ ಸವಾಲು ತಂದೊಡ್ಡಿದೆ. ಚುನಾವಣೆ ಸಂದರ್ಭದಲ್ಲಿ ಅವರು ರಷ್ಯಾ ಹಾಗೂ ಉಕ್ರೇನ್ ಯುದ್ಧವನ್ನು ನಿಲ್ಲಿಸುವುದಾಗಿ ಹೇಳಿದ್ದರು. ಆದರೆ, ಅವರ ಲೆಕ್ಕಾಚಾರಗಳು ಈಗ ತಲೆಕೆಳಗಾಗುತ್ತಿದ್ದು, ಆತಂಕ ಸೃಷ್ಟಿ ಮಾಡಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಉಕ್ರೇನ್‌ಗೆ ನ್ಯಾಟೋದೊಂದಿಗೆ ಸೇರುವುದು (ನ್ಯಾಟೋ ಸದಸ್ಯತ್ವ) ವಿರೋಧಿಸಿದ್ದರು. ಇದೇ ಯುದ್ಧಕ್ಕೆ ಮುಖ್ಯಕಾರಣವಾಗಿತ್ತು. ಅಲ್ಲದೇ ಮುಂದುವರಿದು ಉಕ್ರೇನ್‌ಗೆ ಅಮೆರಿಕದಿಂದ ಹೆಚ್ಚಿನ ಮಿಲಿಟರಿ ಸಹಾಯ ಸಿಗಲು ಶುರುವಾಗಿದ್ದು, ರಷ್ಯಾವನ್ನು ಕೆರಳಿಸಿತ್ತು.
ರಷ್ಯಾದಲ್ಲಿ ಉತ್ತರದ ಮಿಲಿಟರಿ!
ಅಮೆರಿಕದ ಈ ದಿಢೀರ್ ನಿರ್ಧಾರಕ್ಕೆ ರಷ್ಯಾ ಹಾಗೂ ಉತ್ತರ ಕೊರಿಯಾ ದೇಶಗಳು ಒಂದಾಗುತ್ತಿರುವುದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಉತ್ತರ ಕೊರಿಯಾದ ಮಿಲಿಟರಿ ಪಡೆಗಳು ರಷ್ಯಾವನ್ನು ಪ್ರವೇಶಿಸಿದ್ದು, ರಷ್ಯಾಗೆ ಬೆಂಬಲ ಸೂಚಿಸುತ್ತಿರುವುದು ರಷ್ಯಾವನ್ನು ಕೆಣಕಿದಂತಾಗಿದೆ ಎನ್ನಲಾಗಿದೆ.
ಜೋ ಬೈಡನ್ ಅವರು ನಿರ್ಗಮನದ ಹಂತದಲ್ಲಿ ಇದ್ದಾರೆ. ಆದರೆ, ಈ ಹಂತದಲ್ಲಿ ರಷ್ಯಾ ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸಿದೆ. ಅಲ್ಲದೇ ಇದೀಗ ರಷ್ಯಾಗೆ ಉತ್ತರ ಕೊರಿಯಾದ ಮಿಲಿಟರಿ ಆಗಮಿಸಿದೆ. ಗುಪ್ತಚರ ವರದಿಗಳ ಪ್ರಕಾರ, ಉತ್ತರ ಕೊರಿಯಾದ 10,000 ಸೈನಿಕರು ರಷ್ಯಾದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಒಂದೇ ದಿನದಲ್ಲಿ ಯುದ್ಧ ನಿಲ್ಲಿಸುತ್ತೇನೆ: ಟ್ರಂಪ್
ಇನ್ನು ಒಂದೇ ದಿನದಲ್ಲಿ ಯುದ್ಧ ನಿಲ್ಲಿಸುವುದಾಗಿ ಡೊಲಾನ್ಡ್ ಟ್ರಂಪ್ ಅವರು ಹೇಳಿದ್ದರು. ನಾನು ಅಧಿಕಾರಕ್ಕೆ ಬಂದರೆ ಒಂದೇ ದಿನದಲ್ಲಿ ರಷ್ಯಾ ಹಾಗೂ ಉಕ್ರೇನ್ ಯುದ್ಧವನ್ನು ನಿಲ್ಲಿಸಲಿದ್ದೇನೆ ಎಂದಿದ್ದರು. ಆದರೆ, ಇದೀಗ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಹಿಂದೆಂದಿಗಿಂತಲೂ ತೀಕ್ಷ್ಣವಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿಯನ್ನು ನೂತನ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಹೇಗೆ ನಿಭಾಯಿಸಲಿದ್ದಾರೆ ಎನ್ನುವ ಕುತೂಹಲ ಎದುರಾಗಿದೆ.












Click it and Unblock the Notifications