Donald Trump: ಯುವತಿ, ಮಹಿಳೆಯರೆಂದರೆ ನನಗೆ ತುಂಬಾ ಇಷ್ಟ; ಪುರುಷರೆಂದರೆ ಅಷ್ಟಕ್ಕಷ್ಟೇ: ಡೊನಾಲ್ಡ್ ಟ್ರಂಪ್
Donald Trump: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊಡುವ ಕೆಲವು ಹೇಳಿಕೆಗಳು ಕೆಲವೊಮ್ಮೆ ವಿವಾದ, ಇನ್ನೂ ಕೆಲವೊಮ್ಮೆ ಹಾಸ್ಯದ ಬುಗ್ಗೆ ಮೂಡಿಸುವುದು ಸಹ ಇದೆ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೊಟ್ಟಿರುವ ಹೇಳಿಕೆಯೊಂದು ಹಾಸ್ಯ ಸ್ವರೂಪ ಪಡೆದುಕೊಂಡಿದೆ. ವಾಷಿಂಗ್ಟನ್‌ನಲ್ಲಿ ನಡೆದ ಗಾಜಾ ಶಾಂತಿ ಮಂಡಳಿ ಸಭೆಯಲ್ಲಿ ಮಾತನಾಡುವಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಕಾರಣವಾಗಿದೆ.
ವಿಶ್ವದ ದೊಡ್ಡಣ್ಣ ಎಂದು ಹೇಳಿಕೊಳ್ಳುವ ಅಮೆರಿಕದ ಅಧ್ಯಕ್ಷರು ನೀಡುವ ಸಣ್ಣ ಹೇಳಿಕೆಯು ದೊಡ್ಡ ಸುದ್ದಿ ಆಗುವುದು ಇದೆ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುರುಷರು, ಮಹಿಳೆಯರ ಬಗ್ಗೆ ಕೊಟ್ಟಿರುವ ಹೇಳಿಕೆಯು ಟ್ರೋಲ್‌ಗೂ ಕಾರಣವಾಗಿದೆ. ಗಾಜಾ ಶಾಂತಿ ಮಂಡಳಿ ಸಭೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುದೀರ್ಘ ಭಾಷಣ ಮಾಡಿದ್ದಾರೆ. ಈ ಸಭೆಯಲ್ಲಿ ಕೊಟ್ಟ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. ಅದೇನು ಅಂತ ನೋಡೋಣ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ನನಗೆ ಪುರುಷರ ಬಗ್ಗೆ ಯಾವುದೇ ಆಸಕ್ತಿಯಿಲ್ಲ. ಆದರೆ ಮಹಿಳೆಯರೆಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಪೆರುಗ್ವೆ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಭೆಗೆ ಆಹ್ವಾನ ನೀಡಿದ್ದರು. ಈ ಆಹ್ವಾನವನ್ನು ಸ್ವೀಕರಿಸಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ. ಪೆರುಗ್ವೆ ಅಧ್ಯಕ್ಷ ಸ್ಯಾಂಟಿಯಾಗೊ ಪೆನಾ ಅವರನ್ನು ಟ್ರಂಪ್ ಅವರು ಮಾತಿಗೆ ಸಣ್ಣಗೆ ನಕ್ಕಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು ?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪೆನಾ ಅವರನ್ನು ನೋಡಿ ಅಧ್ಯಕ್ಷರೇ ಇಲ್ಲಿಗೆ ಆಗಮಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದ. ಪೆನಾ ಅವರ ಯೌವನ, ರೂಪ ಚೆಂದ. ಸುಂದರ ಯುವ ವ್ಯಕ್ತಿ. ಯುವಕರಾಗಿ, ಸುಂದರವಾಗಿ ಇರುವುದು ಯಾವಾಗಲೂ ಒಳ್ಳೆಯದೇ. ಇದರರ್ಥ ನಾನು ನಿಮ್ಮನ್ನು ಇಷ್ಟಪಡಬೇಕು ಎಂದೇನು ಅಲ್ಲ. ನನಗೆ ಯುವಕರು ಮತ್ತು ಸುಂದರ ಪುರುಷರು ಇಷ್ಟವಿಲ್ಲ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಮುಂದುವರಿದು ಮಹಿಳೆಯರನ್ನು ಕಂಡರೆ ನನಗೆ ತುಂಬಾ ಇಷ್ಟ. ಪುರುಷರೆಂದರೆ ಅಷ್ಟಕಷ್ಟೇ ಅಂತ ಹೇಳಿ ನಕ್ಕಿದ್ದಾರೆ. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಲಿಫ್ಟ್ ಅನಾಹುತದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು
ಇನ್ನು ಇದೇ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರು ಲಿಫ್ಟ್ ಅನಾಹುತವೊಂದರ ಬಗ್ಗೆಯೂ ಮಾತನಾಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಡೆದ ಲಿಫ್ಟ್ ಅಚಾತುರ್ಯದ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪತ್ನಿ ಕೆಳಗೆ ಬೀಳದಂತೆ ರಕ್ಷಿಸಿದೆ ಎಂದಿದ್ದಾರೆ.












Click it and Unblock the Notifications