ಕಮಲಾ ಹ್ಯಾರಿಸ್, ಜೋ ಬೈಡನ್‌ರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಡೊನಾಲ್ಡ್ ಟ್ರಂಪ್!
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಉಪಾಧ್ಯಕ್ಷರಾದ ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಅವರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಹೌದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೊಚ್ಚಲ ಭಾಷಣ ಮಾಡಿದ್ದು, ಇದು ವಿಶ್ವದ ನಾಯಕರು ಗಮನ ಸೆಳೆಯುವಂತೆ ಮಾಡಿದೆ ಈ ಭಾಷಣದಲ್ಲಿ ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವೆ ಯುದ್ಧ ನಿಲ್ಲಿಸಿದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕಮಲಾ ಹ್ಯಾರಿಸ್ ಹಾಗೂ ಜೋ ಬೈಡನ್ ಅವರು ಎದ್ದು ನಿಂತು ಚಪ್ಪಾಳೆಯನ್ನು ತಟ್ಟಿದ್ದಾರೆ. ಇಷ್ಟಕ್ಕೂ ಡೊನಾಲ್ಡ್ ಟ್ರಂಪ್ ಅವರು ಬದ್ಧ ರಾಜಕೀಯ ಎದುರಾಳಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದು ಹೇಗೆ ಈ ಚಪ್ಪಾಳೆಗೆ ಕಾರಣವೇನು ಎನ್ನುವ ವಿವರ ಇಲ್ಲಿದೆ.

ಕದನ ವಿರಾಮ ವಿಚಾರಕ್ಕೆ ಮೆಚ್ಚುಗೆ: ಇನ್ನು ಇಸ್ರೇಲ್ ಹಾಗೂ ಹಮಾಸ್‌ನ ನಡುವೆ ನಡೆದ ಕದನ ವಿರಾಮ ವಿಚಾರವು ಅಮೆರಿಕದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಸಹಜವಾಗಿಯೇ ಈ ಕ್ರೆಡಿಟ್ ಅಮೆರಿಕ ನೂತನ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರಿಗೆ ಸಂದಿದೆ.
ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಪ್ರಮಾಣವಚನವನ್ನು ಸ್ವೀಕರಿಸಿದ್ದು. ಚೊಚ್ಚಲ ಭಾಷಣದಲ್ಲಿ ಅವರು ಯುದ್ಧ ವಿರಾಮದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವೆ ನಡೆದಿದ್ದ ಯುದ್ಧವನ್ನು ನಿಲ್ಲಿಸಿರುವುದು ಅಥವಾ ಅದಕ್ಕೆ ಕದನ ವಿರಾಮ ತಂದಿರುವುದು ಐತಿಹಾಸಿಕ ಬೆಳವಣಿಗೆ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಯಾನಕ ಪರಿಸ್ಥಿತಿ ಇತ್ತು. ಇದೀಗ ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಶಮನವಾಗಿದೆ. ನಾವು ಶಾಂತಿ ಸ್ಥಾಪಕರಾಗಿದ್ದೇವೆ. ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುತ್ತಿದ್ದೇವೆ ಎಂದಿದ್ದಾರೆ.
ಗಾಜಾದಲ್ಲಿ ಹಮಾಸ್‌ನಿಂದ ಬಂಧನಕ್ಕೆ ಒಳಗಾಗಿದ್ದ ಮೂರು ಜನ ಇಸ್ರೇಲ್‌ನ ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ಅವರು ಮಾತನಾಡಿದ್ದಾರೆ. ಇನ್ನು ಒತ್ತೆಯಾಳುಗಳನ್ನು ಹಿಂದಿರುಗಿದ್ದು ಸಂಭ್ರಮಾಚರಣೆ ಮನೆ ಮಾಡಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುವ ಸಂದರ್ಭದಲ್ಲಿಯೇ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಮೊದಲ ದಿನವೇ ಯುದ್ಧಗಳನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದರು. ಆ ಭರವಸೆಗಳು ಇದೀಗ ಸಾಕಾರವಾಗಿದೆ.
ಎದ್ದು ನಿಂತು ಚಪ್ಪಾಳೆ!
ಇನ್ನು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರು ಪ್ರಮಾಣವಚನ ಸ್ವೀಕರಿಸಿ ಅವರ ಮೊದಲ ಭಾಷಣದಲ್ಲಿ ಪ್ರಸ್ತಾಪಿಸಿರುವ ವಿಷಯಗಳಿಗೆ ಅವರ ವಿರೋಧಿಗಳು ಸಹ ಫಿದಾ ಆಗಿದ್ದಾರೆ. ಕದನ ವಿರಾಮ ವಿಷಯನ್ನು ಟ್ರಂಪ್ ಪ್ರಸ್ತಾಪಿಸುತ್ತಿದ್ದಂತೆಯೇ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.
ಭಾಷಣ ಮುಂದುವರಿಸಿದ ಟ್ರಂಪ್, ಜಗತ್ತಿನಲ್ಲಿ ಅಮೆರಿಕ ರಾಷ್ಟ್ರವು ಶ್ರೇಷ್ಠ, ಅತ್ಯಂತ ಶಕ್ತಿಶಾಲಿ ಹಾಗೂ ಅತ್ಯಂತ ಗೌರವಾನ್ವಿತ ರಾಷ್ಟ್ರವೆನ್ನುವ ಸರಿಯಾದ ಸ್ಥಾನವನ್ನು ಮರಳಿ ಪಡೆಯಲಿದೆ. ಇಡೀ ವಿಶ್ವವೇ ನಮ್ಮ ಕಡೆ ತಿರುಗಿ ನೋಡಲಿದೆ ಎಂದಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರು ಚೀನಾದ ವಿರುದ್ಧವೂ ಗುಡುಗಿದ್ದಾರೆ.












Click it and Unblock the Notifications