ಡೆಂಗ್ಯೂ ಜ್ವರವು ಕೊವಿಡ್ 19 ವಿರುದ್ಧ ಹೋರಾಡುವ ಶಕ್ತಿ ನೀಡುತ್ತೆ
ಬ್ರೆಜಿಲ್, ಸೆಪ್ಟೆಂಬರ್ 22: ಡೆಂಗ್ಯೂ ಜ್ವರವು ಕೊವಿಡ್ 19 ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ ಎಂದು ಹೊಸ ಅಧ್ಯಯನದಿಂದ ಸಾಬೀತಾಗಿದೆ. ಡೆಂಗ್ಯೂ ಜ್ವರದಿಂದ ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ.
ಬ್ರೆಜಿಲ್‌ನಲ್ಲಿ ಕೊರೊನಾ ವೈರಸ್ ಕುರಿತು ಸಂಶೋಧಕರು ವಿಶ್ಲೇಷಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ಡೆಂಗ್ಯೂ ಬಂದರೆ ಕೊರೊನಾ ಸೋಂಕಿನಿಂ ದೂರವಿರಬಹುದು ಎಂದು ತಿಳಿದುಬಂದಿದೆ. ಡ್ಯೂಕ್ ವಿಶ್ವವಿದ್ಯಾಲಯ ಈ ಅಧ್ಯಯನ ನಡೆಸಿದೆ. ಆದರೆ ಈ ಮಾಹಿತಿಯನ್ನು ಇನ್ನೂ ಬಹಿರಂಗಗೊಳಿಸಿಲ್ಲ, ರಾಯ್ಟರ್ಸ್‌ನೊಂದಿಗೆ ಮಾತ್ರ ಹಂಚಿಕೊಂಡಿದೆ.
ಕಡಿಮೆ ಕೊರೊನಾ ಪ್ರಕರಣಗಳನ್ನು ಹೊಂದಿರುವ ಪ್ರದೇಶಗಳನ್ನು ಗಮನಿಸಿದಾಗ ಆ ಪ್ರದೇಶದಲ್ಲಿ ಈ ವರ್ಷ ತೀವ್ರ ಡೆಂಗ್ಯೂ ಜ್ವರವನ್ನು ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಇದು ಸತ್ಯ ಎಂದು ಸಾಬೀತಾದರೆ ಡೆಂಗ್ಯೂಗೆ ನೀಡಲಾಗುತ್ತಿದ್ದ ಔಷಧವನ್ನು ಕೊರೊನಾ ಸೋಂಕಿತರಿಗೂ ಕೂಡ ನೀಡಬಹುದಾಗಿದೆ. ಅದು ಸ್ವಲ್ಪ ಮಟ್ಟಿಗೆ ರಕ್ಷಣೆಯನ್ನು ಉಂಟು ಮಾಡಬಹುದು ಎಂದು ಅಂದಾಜಿಸಲಾಗಿದೆ.

ಕೊರೊನಾ ಸೋಂಕಿಗೆ ಒಳಗಾಗದಿದ್ದರೂ ಕೂಡ ರಕ್ತದಲ್ಲಿ ಡೆಂಗ್ಯೂ ಪ್ರತಿಕಾಯಗಳನ್ನು ಹೊಂದಿರುವ ಜನರಿಗೆ ಕೊರೊನಾ ಪಾಸಿಟಿವ್ ವರದಿ ಬರುತ್ತಿದೆ. ಆರೂ ನಿರೀಕ್ಷಿಸಿದ ಈ ಎರಡು ವೈರಸ್‌ಗಳ ನಡುವೆ ರೋಗನಿರೋಧಕ ಸಂವಹನವಿದೆ. ಯಾಕೆಂದರೆ ಎರಡೂ ವೈರಸ್‌ಗಳು ಸಂಪೂರ್ಣವಾಗಿ ವಿಭಿನ್ನ ಕುಟುಂಬಗಳಿಂದ ಬಂದವು ಎಂದು ನಿಕೋಲೆಲಿಸ್ ಹೇಳಿದ್ದಾರೆ.
ಈ ಸಂಪರ್ಕವನ್ನು ಸಾಬೀತುಪಡಿಸಲು ಹಲವು ಸಂಶೋಧನೆಗಳ ಅಗತ್ಯವಿದೆ. ಬ್ರೆಜಿಲ್‌ನಲ್ಲಿ 4.4 ಮಿಲಿಯನ್ ಕೊರೊನಾ ಸೋಂಕಿತರಿದ್ದಾರೆ. ಜಗತ್ತಿನಲ್ಲೇ ಕೊರೊನಾ ಸೋಂಕಿತರನ್ನು ಹೊಂದಿರುವ ಮೂರನೇ ರಾಷ್ಟ್ರವೆನಿಸಿಕೊಂಡಿದೆ. ತಂಡವು ಡೆಂಗ್ಯೂ ಹಾಗೂ ಡೆಂಗ್ಯೂ ಪೀಡಿತ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಭಾವ ಕಡಿಮೆ ಇರುವುದನ್ನು ಅರಿತುಕೊಂಡಿದ್ದಾರೆ.












Click it and Unblock the Notifications