Schools And colleges Holiday: ವಿನಾಶಕಾರಿ ಚಂಡಮಾರುತದ ಎಂಟ್ರಿ: ಈ ಭಾಗದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Schools And colleges Holiday: ಸಾಮಾನ್ಯವಾಗಿ ಭೀಕರವಾಗಿ ಮಳೆ ಸುರಿಯುವ ಸಂದರ್ಭಗಳಲ್ಲಿ ಮೊದಲು ವಿದ್ಯಾರ್ಥಿಗಳ ಹಿತದೃಷ್ಟಿ ಕಡೆಗೆ ಗಮನಹರಿಸಲಾಗುತ್ತದೆ. ಹಾಗೆಯೇ ಇದೀಗ ವಿನಾಶಕಾರಿ ಚಂಡಮಾರುತದ ಪರಿಣಾಮ ಈ ಭಾಗದಲ್ಲಿನ ಶಾಲಾ-ಕೇಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದರೆ ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಭಾರತದ ಬಹುತೇಕ ರಾಜ್ಯಗಳಲ್ಲಿ ಭೀಕರ ಚಳಿ ಮುಂದುವರೆದ ಕಾರಣ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿತ್ತು. ಹಾಗೆಯೇ ಇದೀಗ ಈ ದೇಶಗಳಲ್ಲಿ ವಿನಾಶಕಾರಿ ಚಂಡಮಾರುತದ ಗರಿಷ್ಠ ವೇಗ ತಲುಪುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹವಾಮಾನ ಇಲಾಖೆ ಪ್ರಕಾರ, ಈ ಚಂಡಮಾರುತ ಇಂದು (ಜನವರಿ 24) ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ ಹೆಚ್ಚಿದೆ. ಅಲ್ಲದೆ ಅತೀ ವೇಗದಲ್ಲಿ ಗಾಳಿ ಬೀಸಲಿದ್ದು, ರಣಭೀಕರ ಮಳೆ ಬೀಳುವ ಸಾಧ್ಯತೆಯಿದೆ. ಇಂತಹ ಸಮಯದಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ವಿನಾಶಕಾರಿ ಚಂಡಮಾರುತದ ಪರಿಣಾಮ ಅಮೆರಿಕದ ಹಲವೆಡೆ ಜನರು ಕಠಿಣ ಪರಿಸ್ಥಿತಿ ಎದುರಿಸುವಂತಾಹಿದೆ. ಇದೀಗ ಈ ವಿನಾಶಕಾರಿ ಚಂಡಮಾರುತವು ಯುರೋಪ್‌ನ ಕದ ತಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಟ್ಲಾಂಟಿಕ್ ಮಹಾಸಾಗರದಲ್ಲಿ ಇವೊವಿನ್ ಚಂಡಮಾರುತ ಸೃಷ್ಟಿಯಾಗಿದ್ದು, ಇದು ಗಂಟಗೆ 162 ಕಿಲೋ ಮೀಟರ್ ವೇಗದಲ್ಲಿ ಕರಾವಳಿ ಪ್ರದೇಶಗಳಿಗೆ ಹಬ್ಬಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಮಾಹಿತಿ ರವಾನಿಸಿದೆ.
ತುಂಬಾ ವರ್ಷಗಳ ಬಳಿಕ ಬ್ರಿಟನ್, ಉತ್ತರ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಇಂತಹ ವಿನಾಶಕಾರಿ ಚಂಡಮಾರುತವನ್ನ ಎದುರಿಸಬೇಕಾಗುತ್ತದೆ. ಋತುಮಾನದ ಪರಿಸ್ಥಿತಿಗಳ ದೃಷ್ಟಿಯಿಂದ, ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಾಹಿತಿಯ ಪ್ರಕಾರ, ಐರ್ಲೆಂಡ್, ಉತ್ತರ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ದಶಕಗಳಲ್ಲಿ ಅತ್ಯಂತ ತೀವ್ರವಾದ ಚಂಡಮಾರುತಗಳನ್ನು ಎದುರಿಸಲು ತಯಾರಿ ನಡೆಸುತ್ತಿವೆ. ಐರ್ಲೆಂಡ್ ಮತ್ತು ಬ್ರಿಟನ್ ಎರಡರ ರಾಷ್ಟ್ರೀಯ ಹವಾಮಾನ ಕಚೇರಿಗಳು ಗುರುವಾರ ಇವೊವಿನ್ ಚಂಡಮಾರುತ ಪ್ರಭಾವದ ಬಗ್ಗೆ ಎಚ್ಚರಿಕೆ ಸದೇಶಗಳನ್ನು ರವಾನಿಸಿದೆ.
ಇದು ಸ್ಕಾಟ್ಲೆಂಡ್‌ನ ಈಶಾನ್ಯಕ್ಕೆ ಚಲಿಸುವ ಮೊದಲು ಶುಕ್ರವಾರ ಐರಿಶ್ ಕರಾವಳಿಗೆ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 161 ಕಿಲೋ ಮೀಟರ್ ಇರಲಿದೆ. ಈ ಹಿನ್ನೆಲೆ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಈ ಭಾಗದ ಜನರಿಗೆ ಸೂಚನೆ ನೀಡಲಾಗಿದೆ.
ಚಂಡಮಾರುತದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಐರಿಶ್ ಹವಾಮಾನ ಇಲಾಖೆ ರಾಷ್ಟ್ರವ್ಯಾಪಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಸ್ಥಳೀಯ ಕಾಲಮಾನದ ಪ್ರಕಾರ, ಮಧ್ಯರಾತ್ರಿಯ ನಂತರ ರಾತ್ರಿ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಚಂಡಮಾರುತದ ವೇಗ ಗರಿಷ್ಠ ಪ್ರಮಾಣದಲ್ಲಿರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ ಎಂದು ನ್ಯೂಸ್ 18 ಕನ್ನಡ ವರದಿ ಮಾಡಿದೆ.
ಇದು ಜೀವಕ್ಕೆ ಅಪಾಯವನ್ನು ಉಂಟುಮಾಡಬಹುದು. ತಗ್ಗು ಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಪ್ರವಾಹದಂತಹ ಆಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಹವಾಮಾನ ಇಲಾಖೆಯು ಉತ್ತರ ಐರ್ಲೆಂಡ್ ಹಾಗೂ ಮಧ್ಯ ಮತ್ತು ನೈಋತ್ಯ ಸ್ಕಾಟ್ಲೆಂಡ್‌ಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಎಚ್ಚರಿಕೆಯ ಸಮಯದಲ್ಲಿ ಪ್ರಯಾಣಿಸದಂತೆ ಸೂಚಿಸಲಾಗಿದೆ. ತೀವ್ರ ಚಂಡಮಾರುತದಿಂದ ಎಲ್ಲವೂ ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ. ಯುಕೆ ಹವಾಮಾನ ಇಲಾಖೆಯ ಮುಖ್ಯ ವಿಜ್ಞಾನಿ ಪಾಲ್ ಗುಂಡರ್ಸನ್, ಗಾಳಿಯ ವೇಗ ಗಂಟೆಗೆ 100 ಮೈಲಿ ದಾಟುವ ಸಾಧ್ಯತೆಯಿದೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಚಂಡಮಾರುತದ ಪರಿಣಾಮ ಉತ್ತರ ಐರ್ಲೆಂಡ್‌ನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಜನವರಿ 24 ಅಂದರೆ ಇಂದು ಮುಚ್ಚಲು ಆದೇಶಿಸಲಾಗಿದೆ. ದಕ್ಷಿಣ ಸ್ಕಾಟ್ಲೆಂಡ್‌ನಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಇದು ಇನ್ನೂ ತೀವ್ರತೆ ಪಡೆದುಕೊಂಡರೆ ರಜೆಯನ್ನು ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.












Click it and Unblock the Notifications