ಇಸ್ರೇಲ್: ಹೊರಾಂಗಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ

ಇಸ್ರೇಲ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಿದ್ದು, ಹೊರಾಂಗಣದಲ್ಲಿ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕೊರೊನಾವೈರಸ್ ಸೋಂಕು ಪ್ರಕರಣಗಳ ಕುಸಿತದ ನಡುವೆ ಹೊರಾಂಗಣದಲ್ಲಿ ಮುಖಗವಸು ಧರಿಸುವುದು ಕಡ್ಡಾಯವಲ್ಲ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಆದರೂ, ದೊಡ್ಡ ಹೊರಾಂಗಣದಲ್ಲಿ ನಡೆಯುವ ಸಭೆ-ಸಮಾರಂಭ ಮತ್ತು ಕೂಟಗಳಲ್ಲಿ ಮುಖಗವಸು ಧರಿಸಬೇಕೆಂದು ಸಚಿವಾಲಯ ಸಲಹೆ ನೀಡಿದೆ. ಒಳಾಂಗಣದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ ಎಂದು ಸಚಿವಾಲಯ ಪ್ರತಿಪಾದಿಸಿದೆ.

Covid-19: Outdoor Mask-Wearing No Longer Required In Israel After Drop In Infection Rate

ದೇಶಾದ್ಯಂತ ಕೋವಿಡ್‍ ಸೋಂಕಿನ ಪ್ರಕರಣಗಳು ತುಂಬಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯದ ಮಹಾನಿರ್ದೇಶಕ ಪ್ರೊ. ಹೆಜಿ ಲೆವಿ ಅವರು ಸಾರ್ವಜನಿಕ ಆರೋಗ್ಯ ಆದೇಶವನ್ನು ತಿದ್ದುಪಡಿ ಮಾಡಿದ್ದಾರೆ. ಇದರಿಂದಾಗಿ ತೆರೆದ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಅಗತ್ಯವಿರುವುದಿಲ್ಲ.' ಇದು ಭಾನುವಾರದಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ಶನಿವಾರ ತಿಳಿಸಿದೆ.

ವಿಶ್ವದೆಲ್ಲೆಡೆ ಒಟ್ಟು 140,652,074ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 119,477,372ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 122,492,474ಪ್ರಕರಣಗಳು ಮುಕ್ತಾಯಗೊಂಡಿವೆ. ಯುಎಸ್ಎ: 32,308,557ಪ್ರಕರಣಗಳು, ಭಾರತ: 14,526,609, ಬ್ರೆಜಿಲ್ : 13,834,342, ಫ್ರಾನ್ಸ್: 5,224,321, ರಷ್ಯಾ: 4,693,469, ಯುಕೆ: 4,383,572, ಟರ್ಕಿ:, 4,150,039, ಇಟಲಿ: 3,842,079, ಸ್ಪೇನ್: 3,407,283, ಜರ್ಮನಿ: 3,116,950.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+