ಸ್ಪೇನ್‌ನಲ್ಲಿ ಕೊರೊನಾ ಮರಣಮೃದಂಗ: 1720 ಮಂದಿ ಸಾವು
ಮ್ಯಾಡ್ರಿಡ್, ಮಾರ್ಚ್ 23: ಸ್ಪೇನ್‌ನಲ್ಲಿ ಕೊರೊನಾದಿಂದ ಮೃತಪಟ್ಟಿರುವವರ ಸಂಖ್ಯೆ 1720ಕ್ಕೆ ಏರಿಕೆಯಾಗಿದೆ.
ಭಾನುವಾರದ ಅಂತ್ಯಕ್ಕೆ 1326 ಮಂದಿ ಇದ್ದ ಸಾವಿನ ಸಂಖ್ಯೆ ಒಂದೇ ದಿನದಲ್ಲಿ 1720ಕ್ಕೇ ಹೆಚ್ಚಿದೆ.ಹಾಗೆಯೇ ಭಾನುವಾರ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 24426 ಇರುವುದು ಸೋಮವಾರದಷ್ಟೊತ್ತಿಗೆ 28,572 ಮಂದಿಗೆ ಏರಿಕೆಯಾಗಿತ್ತು. ಇದೀಗ ಸ್ಪೇನ್ ದೇಶದಾದ್ಯಂತ ಲಾಕ್‌ಡೌನ್ ಮಾಡಲಾಗಿದೆ.
ಸ್ಪೇನ್ ಪ್ರಧಾನಿ 15 ದಿನಗಳ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಮಾರ್ಚ್ 14 ರಂದು ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಘೋಷಿಸಸಿದ್ದರು. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಇನ್ನೂ 15 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಸ್ಪೇನ್ ದೇಶದ ಫುಟ್ಬಾಲ್ ತಂಡವೊಂದರ ತರಬೇತುದಾರ ಫ್ರಾನ್ಸಿಸ್ಕೊ ಗಾರ್ಸಿಯಾ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. 21 ವರ್ಷದ ಫ್ರಾನ್ಸಿಸ್ಕೊ ಗಾರ್ಸಿಯಾ ಅಥ್ಲೆಟಿಕೊ ಪೋರ್ಟಾಡಾ ಕ್ಲಬ್‌ನ ಕೋಚ್ ಆಗಿದ್ದರು.
ಅಮೆರಿಕದಲ್ಲಿ ಕೊರೊನಾ ಸೋಂಕಿಗೆ 452 ಮಂದಿ ಬಲಿಯಾಗಿದ್ದಾರೆ. 34,717 ಮಂದಿಗೆ ಸೋಂಕು ತಗುಲಿದೆ.
ನ್ಯೂಯಾರ್ಕ್‌ನಲ್ಲಿ 15 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 5418 ಹೊಸ ಪ್ರಕರಣಗಳು ಪತ್ತೆಯಾಗಿವೆ. ನ್ಯೂಯಾರ್ಕ್‌ನಲ್ಲಿ 114 ಮಂದಿ ಸಾವಿಗೀಡಾಗಿದ್ದಾರೆ.












Click it and Unblock the Notifications