ಪಾಕಿಸ್ತಾನದಲ್ಲಿ 24 ಗಂಟೆಗಳಲ್ಲಿ 90 ಕೊರೊನಾ ಪ್ರಕರಣ ದೃಢ

ಇಸ್ಲಾಮಾಬಾದ್, ಮಾರ್ಚ್ 17: ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ 90 ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಟ್ಟು ಪಾಕಿಸ್ತಾನದಲ್ಲಿ ಕೊರೊನಾ ವೈರಸ್‌ನಿಂದ ಬಳಲುತ್ತಿರುವವರ ಸಂಖ್ಯೆ 184ಕ್ಕೇರಿದೆ.

Recommended Video

      DK Shivakumar requests to his fans to not bring gifts and garlands | DKS | Oneindia Kannada

      ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಮಂಜಾಬ್, ಸಿಂಧ್, ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಹೆಚ್ಚಿನ ಪ್ರಕರಣಗಳು ದೃಢಪಟ್ಟಿವೆ.

      ಸಿಂಧ್ ಪ್ರದೇಶದಲ್ಲಿ ಒಟ್ಟು 146 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಇದನ್ನು ಹೊರತುಪಡಿಸಿ ಜೈರೀನ್ ನಲ್ಲಿ 119, ಕರಾಚಿಯಲ್ಲಿ 26 ಮಂದಿ, ಹೈದರಾಬಾದ್‌ನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

      Coronavirus Cases Jumps To 184 In Pakistan

      ಬಲೂಚಿಸ್ತಾನದಲ್ಲಿ ಇರಾನ್‌ನಿಂದ ಪಾಕಿಸ್ತಾನಕ್ಕೆ ಬಂದ100 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಇಟಲಿ, ಚೀನಾದ ನಂತರ ಹೆಚ್ಚು ಸಾವು ಇರಾನ್‌ನಲ್ಲಿ ಸಂಭವಿಸಿದೆ. ಇರಾನ್‌ನಿಂದ ಪಾಕಿಸ್ತಾನಕ್ಕೆ ಆಗಮಿಸಿರುವ ಹೆಚ್ಚಿನ ಮಂದಿಯಲ್ಲಿ ಕೊರೊನಾ ವೈರಸ್‌ ಇರುವುದು ಕಂಡುಬಂದಿದೆ.

      ಕೊರೊನಾ ಹರಡುವುದನ್ನು ನಿಯಂತ್ರಿಸಲು ಇರಾನ್ ಹಾಗೂ ಅಫ್ಘಾನಿಸ್ತಾನದಿಂದ ಬರುವ ಮಾರ್ಗವನ್ನು ಪಾಕಿಸ್ತಾನ ಬಂದ್ ಮಾಡಿದೆ. ಮುಂದಿನ ಮೂರು ವಾರಗಳ ಕಾಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.

      ಕತಾರ್‌ಪುರ್ ಕಾರಿಡಾರ್‌ನ್ನು ಕೂಡ ಬಂದ್ ಮಾಡಲಾಗಿದೆ.ಹೋಟೆಲ್‌ಗಳನ್ನು ಮುಚ್ಚಲಾಗಿದೆ. ಚೀನಾದಲ್ಲಿ ಇದುವರೆಗೆ 173,000 ಪ್ರಕರಣಗಳು ದೃಢಪಟ್ಟಿವೆ 6 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 75 ಸಾವಿರಕ್ಕೂ ಹೆಚ್ಚು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+