ಚೀನಾದಲ್ಲಿ ಹೇಗಿದೆ ಎಚ್‌ಎಂಪಿವಿ ವೈರಸ್: ಕನ್ನಡಿಗ ಮಾಡಿದ ರಿಯಾಲಿಟಿ ಚೆಕ್ ವಿಡಿಯೋ ಇಲ್ಲಿದೆ!
ಭಾರತದಲ್ಲಿ ಎಚ್‌ಎಂಪಿವಿ ವೈರಸ್ ಹೆಚ್ಚಾಗುತ್ತಿದೆ ಎನ್ನುವ ಭೀತಿ ಜೋರಾಗಿದೆ. ಬೆಂಗಳೂರಿನಲ್ಲಿ ಎರಡು ಎಚ್‌ಎಂಪಿವಿ ಕೇಸ್‌ಗಳು ವರದಿಯಾದ ಬೆನ್ನಲ್ಲೇ ದೇಶದ ವಿವಿಧ ರಾಜ್ಯಗಳಲ್ಲೂ ಎಚ್ಎಂಪಿವಿ ಸೋಂಕು ದೃಢಪಟ್ಟಿರುವುದು ವರದಿಯಾಗಿತ್ತು. ಕೋವಿಡ್ ಸಮಯದಲ್ಲಿ ಏನೆಲ್ಲಾ ಆಗಿದೆಯೋ ಅದು ಮತ್ತೆ ಬರಲಿದೆಯೇ ಎನ್ನುವ ಆತಂಕ ಜನರಲ್ಲಿ ಜೋರಾಗಿತ್ತು. ಇದೀಗ ಚೀನಾದಲ್ಲಿರುವ ಕನ್ನಡಿಗರೊಬ್ಬರು ಚೀನಾದಲ್ಲಿ ಪರಿಸ್ಥಿತಿ ಯಾವ ರೀತಿ ಎದೆ ಎನ್ನುವ ಬಗ್ಗೆ ರಿಯಾಲಿಟಿ ಚೆಕ್ ತರ ವಿಡಿಯೋ ಮಾಡಿದ್ದಾರೆ. ಇದನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗಿದ್ದು ಭಾರೀ ವೈರಲ್ ಆಗಿದೆ. ಚೀನಾದಲ್ಲಿ ಎಚ್‌ಎಂಪಿವಿ ವೈರಸ್ ನಿಂದ ಆತಂಕ ಸೃಷ್ಟಿಯಾಗಿದೆ ಎನ್ನುವಂತಹ ವಿಡಿಯೋಗಳನ್ನು ತೋರಿಸಲಾಗುತ್ತಿದೆ. ಆದರೆ, ಚೀನಾದಲ್ಲಿ ಆ ರೀತಿ ಏನೇನೂ ಆಗಿಲ್ಲ ಅಂತ ಹೇಳಿದ್ದಾರೆ. ಕನ್ನಡಿಗರು ಮಾಡಿರುವ ವಿಡಿಯೋದಲ್ಲಿ ಏನಿದೆ ನೋಡೋಣ..
ಕೋವಿಡ್‌ನಿಂದ ಜನ ಚೇತರಿಸಿಕೊಂಡರೂ ಆ ಕರಾಳ ದಿನಗಳನ್ನು ಯಾರೂ ಇನ್ನೂ ಮರೆತಿಲ್ಲ. ಎಚ್‌ಎಂಪಿವಿ ವೈರಸ್ ಸಹ ಇದೇ ರೀತಿಯ ಕರಾಳ ದಿನಗಳನ್ನು ತರಲಿದೆ ಎನ್ನುವ ಭೀತಿ ಎದುರಾಗಿತ್ತು. ಆದರೆ ಚೀನಾದಲ್ಲಿ ಜನ ಆರಾಮಾಗಿ ಇದ್ದಾರೆ. ವಿಡಿಯೋಗಳಲ್ಲಿ ತೋರಿಸುತ್ತಿರುವಂತೆ ಇಲ್ಲಿ ಆಸ್ಪತ್ರೆಗಳು ತುಂಬಿ ತುಳುಕುತ್ತಿಲ್ಲ. ಎಲ್ಲರಿಗೂ ಜ್ವರ ಬಂದು ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಕನ್ನಡಿಗರೊಬ್ಬರು ರಿಯಾಲಿಟಿ ಚೆಕ್ ಮಾಡಿಯೇ ಹೇಳಿದ್ದಾರೆ. ಆ ವಿಡಿಯೋದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಮೊದಲ ಎಚ್‌ಎಂಪಿವಿ ವೈರಸ್ ಸೋಂಕು ದೃಢಪಟ್ಟಿದೆ ಎಂದು ವರದಿ ಮಾಡಲಾಗಿತ್ತು. ಇದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಮುಂದಿನ ದಿನಗಳಲ್ಲಿ ಮತ್ತೆ ಲಾಕ್‌ಡೌನ್ ಬರಬಹುದು ಎನ್ನುವಂತಹ ಆತಂಕದ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ರಾಜ್ಯ ಆರೋಗ್ಯ ಇಲಾಖೆ ಸಹ ಸ್ಪಷ್ಟನೆ ಕೊಟ್ಟಿದ್ದು. ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ. ಇದರ ಹೊರತಾಗಿಯೂ ಚೀನಾದಲ್ಲಿ ಪರಿಸ್ಥಿತಿ ಗಂಭೀರವಾಗಿದೆಯಂತೆ ಅಂತೆಕಂತೆ ಸುದ್ದಿಗಳು ವೈರಲ್ ಆಗುತ್ತಿವೆ. ಇದೀಗ ಕನ್ನಡಿಗರೇ ಇದಕ್ಕೆ ವಿಡಿಯೋ ಸ್ಪಷ್ಟನೆ ಕೊಟ್ಟಿದ್ದಾರೆ.
ಚೀನಾದಲ್ಲಿ ಜನಜೀವನ ಮಾಮೂಲಿನಂತೆ ಇದೆ. ಕರ್ನಾಟಕದ ಟಿವಿ ಮಾಧ್ಯಮಗಳಿಗೆ ಏನಾಗಿದೆಯೋ ಗೊತ್ತಿಲ್ಲ. pic.twitter.com/SKikwk2Zft
— ಕನ್ನಡಿಗ ದೇವರಾಜ್ (@sgowda79) January 7, 2025
ಚೀನಾದಲ್ಲಿ ಹೇಗಿದೆ ಪರಿಸ್ಥಿತಿ ?
ಚೀನಾದಲ್ಲಿ ಜನ ಆರಾಮಾಗಿ ಇದ್ದಾರೆ. ಭಾರತದಲ್ಲಿ ಮಾಧ್ಯಮಗಳು ತೋರಿಸುವಂತೆ ಇಲ್ಲಿ ಎಲ್ಲರೂ ಆಸ್ಪತ್ರೆಗೆ ಸೇರಿ ಏನೋ ದೊಡ್ಡ ದುರಂತ ಆಗಿಲ್ಲ ಎಂದು ಕನ್ನಡಿಗರೊಬ್ಬರು ವಿಡಿಯೋ ಮೂಲಕ ಹೇಳಿದ್ದಾರೆ. ಅಲ್ಲದೆ ಚೀನಾದ ರಸ್ತೆಗಳು ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿ ಜನ ಯಾವ ರೀತಿ ಇದ್ದಾರೆ ಎನ್ನುವ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಚೀನಾದ ರಸ್ತೆಗಳಲ್ಲಿ ಎಲ್ಲರೂ ಸಾಮಾನ್ಯ ದಿನಗಳಲ್ಲಿ ಇರುವಂತೆಯೇ ಓಡಾಡುತ್ತಿದ್ದಾರೆ. ಪ್ರಮುಖ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿರುವ ಕನ್ನಡಿಗರೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅಲ್ಲಿ ಜನ ಎಂದಿನಂತೆ ಸಾಮಾನ್ಯವಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿರುವುದು ಇದೆ.
ಮಾಸ್ಕ್ ಕಡ್ಡಾಯವಲ್ಲ: ಎಚ್‌ಎಂಪಿವಿ ವೈರಸ್‌ನ ಬಗ್ಗೆ ಬೆಂಗಳೂರಿನಲ್ಲಿ ಆತಂಕ ಹೆಚ್ಚಳವಾದ ಬೆನ್ನಲ್ಲೇ ಕಡ್ಡಾಯ ಮಾಸ್ಕ್ ನೀತಿ ಮತ್ತೆ ಜಾರಿಯಾಗಲಿದೆಯೇ ಎನ್ನುವುದು ಆತಂಕ ಶುರುವಾಗಿತ್ತು. ಆದರೆ, ಚೀನಾದಲ್ಲೇ ಕಡ್ಡಾಯ ಮಾಸ್ಕ್ ನೀತಿ ಜಾರಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಕಡ್ಡಾಯ ಮಾಸ್ಕ್ ನೀತಿಯ ಬಗ್ಗೆ ಚರ್ಚೆ ಆಗುತ್ತಿರುವಾಗಲೇ ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಒಟ್ಟಾರೆ ಚೀನಾದಲ್ಲಿ ಎಚ್‌ಎಂಪಿವಿ ವೈರಸ್ ಭೀಕರವಾಗಿದೆ ಎನ್ನುವುದು ಸುಳ್ಳು ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications