ಚೀನಾದಿಂದ ಕೊರೊನಾ ಲಸಿಕೆ ತರಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ?

ಸಿಯೋಲ್, ಡಿಸೆಂಬರ್ 1:ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಮತ್ತವರ ಕುಟುಂಬವು ಚೀನಾದಿಂದ ಕೊರೊನಾ ಲಸಿಕೆ ತರಿಸಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಚೀನಾವು ಇವರ ಕುಟುಂಬಕ್ಕೆ ಪ್ರಾಯೋಗಿಕ ಕೊರೊನಾ ಲಸಿಕೆಯನ್ನು ನೀಡಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಲಭ್ಯವಾಗಿದೆ. ಚೀನಾದ ಯಾವುದೇ ಕೊರೊನಾ ಲಸಿಕೆಯನ್ನು ಅನುಮೋದಿಸಿದ್ದರೂ ಕೂಡ ಯಾವುದೇ ಔಷಧಿಯು ಈ ಹಂತದಲ್ಲಿ ಪರಿಪೂರ್ಣವಾಗಿಲ್ಲ.

ಅಲ್ಲದೆ ಪ್ರತ್ಯೇಕವಾಗಿರಲು ಸಾಕಷ್ಟು ಸೌಲಭ್ಯವಿರುವ ಕಿಮ್ ಜಾಂಗ್ ಉನ್ ಈ ಪ್ರಾಯೋಗಿಕ ಪಡೆದಿರಲಾರರು ಎಂದು ಸಾಂಕ್ರಾಮಿಕ ರೋಗ ತಜ್ಞ ಚೋಯ್ ಜಂಗ್ ಹನ್ ಹೇಳಿದ್ದಾರೆ.

China Gave Covid-19 Vaccine Candidate To North Koreas Kim Jong Un

ಕಿಮ್ ಜಾಂಗ್ ಉನ್ ಯಾವ ಕಂಪನಿಯ ಕೊರೊನಾ ಲಡಿಕೆಯನ್ನು ಪಡೆದುಕೊಂಡಿದೆ ಅದು ಸುರಕ್ಷಿತವೆಂದು ಸಾಬೀತಾಗಿದೆಯೇ ಎನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಚೀನಾ ಸರಬರಾಜು ಮಾಡಿದ ಯುರೋಪ್ ಮೂಲದ ಲಸಿಕೆಯನ್ನು ಮಾತ್ರ ಕಿಮ್ ಬಳಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಡಲಾಗಿದೆ. ಕಿಮ್ ಜಾಂಗ್ ಉನ್ ಹಾಗೂ ಉನ್ನತ ಅಧಿಕಾರಿಗಳಿಗೆ ಕಳೆದ ಎರಡು ಮೂರು ವಾರಗಳಲ್ಲಿ ಕೊವಿಡ್ ಲಸಿಕೆ ಹಾಕಲಾಗಿದೆ. ಲಸಿಕೆ ಸರಬರಾಜು ಮಾಡಿದ ಚೀನಾ ಸರ್ಕಾರಕ್ಕೆ ಧನ್ಯವಾದಗಳು ಎಂದು ಲೇಖನವೊಂದರಲ್ಲಿ ಉಲ್ಲೇಖಿಸಲಾಗಿದೆ.

ಸಿನೋವಾಕ್ ಬಯೋಟೆಕ್ ಲಿಮಿಟೆಡ್, ಕ್ಯಾನ್ಸಿನೊ ಬಯೋ ಮತ್ತು ಸಿನೋಫಾರ್ಮ್ ಸೇರಿದಂತೆ ಕನಿಷ್ಠ ಮೂರು ಚೀನೀ ಕಂಪನಿಗಳು ಕೊವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿವೆ.

Recommended Video

      Corona ಪ್ರಕರಣಗಳ ಅಸಲಿ ಸಂಖ್ಯೆ ತಿಳಿದರೆ ಭಯವಾಗೋದಂತೂ ಖಂಡಿತ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+