ಕೊವಿಡ್ ಲಸಿಕೆ ಪ್ರಯೋಗಕ್ಕೆ ಚೀನಾ ಸಂಸ್ಥೆ ಬಳಸಿಕೊಳ್ಳುತ್ತಿರುವುದು ಯಾರನ್ನು?
ಬೀಜಿಂಗ್, ಜುಲೈ 16: ಕೊವಿಡ್ 19 ರೋಗಕ್ಕೆ ಲಸಿಕೆ ಕಂಡು ಹಿಡಿಯುವಲ್ಲಿ ವಿಶ್ವದಲ್ಲಿ ಪೈಪೋಟಿ ಎದ್ದಿದ್ದು, ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ಪರೀಕ್ಷೆಗೆ ತಮ್ಮ ನೌಕರರನ್ನೇ ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
Recommended Video
ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯುವುದು, ಚಂದ್ರನಿಗಾಗಿ ಅಮೆರಿಕ-ರಷ್ಯಾ ನಡುವಿದ್ದ ಪೈಪೋಟಿಗಿಂತಲೂ ತೀವ್ರವಾದ ಪೈಪೋಟಿಯಾಗಿ ಮಾರ್ಪಾಡಾಗಿದೆ ಎಂದು ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಜಾಗತಿಕ ಸಾರ್ವಜನಿಕ ಆರೋಗ್ಯ ಕಾನೂನು ತಜ್ಞ ಲಾರೆನ್ಸ್ ಗೋಸ್ಟಿನ್ ಹೇಳಿದ್ದಾರೆ.
ಎರಡು ಡಜನ್ ಸಂಭಾವ್ಯ ಲಸಿಕೆಗಳ ಪೈಕಿ ಮನುಷ್ಯನ ಮೇಲೆ ವಿವಿಧ ಹಂತಗಳಲ್ಲಿ ಪ್ರಯೋಗ ಮಾಡಲ್ಪಡುತ್ತಿರುವ 8 ಲಸಿಕೆಗಳು ಚೀನಾದ್ದೇ ಆಗಿದೆ. ಸಿನೋ ಫಾರ್ಮ್ ಹಾಗೂ ಚೀನಾದ ಮತ್ತೊಂದು ಸಂಸ್ಥೆ ಈಗಾಗಲೇ ಅಂತಿಮ ಹಂತದ ಪರೀಕ್ಷೆ ನಡೆಸುತ್ತಿರುವುದಾಗಿ ಘೋಷಿಸುತ್ತಿವೆ.

ಉನ್ನತ ಮಟ್ಟದ ಅಧಿಕಾರಿಗಳಿಂದ ಹಿಡಿದು ನೌಕರರು, ಜನರ ಮೇಲೆ ಲಸಿಕೆ ಪ್ರಯೋಗಕ್ಕೆ ಸರ್ಕಾರದ ಅನುಮತಿ ದೊರೆಯುವುದಕ್ಕೂ ಮುನ್ನವೇ ಪರೀಕ್ಷಾರ್ಥ ಲಸಿಕೆಗಳನ್ನು ಸ್ವೀಕರಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಟದಲ್ಲಿ ಸಹಾಯ ಹಸ್ತ ಎಂದು ಈ ಕುರಿತ ವಿವರಣೆಯಲ್ಲಿ ಸಿನೋಫಾರ್ಮ್ ಆನ್ ಲೈನ್ ನಲ್ಲಿ ತಿಳಿಸಿದ್ದು, ಪ್ರೀ-ಟೆಸ್ಟ್ ಲಸಿಕೆಗಳನ್ನು ಸ್ವೀಕರಿಸುತ್ತಿರುವ ಫೋಟೋಗಳನ್ನು ಪ್ರಕಟಿಸಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ನೌಕರರ ಈ ನಡೆ ಧೀರೋದಾತ್ತ ತ್ಯಾಗ ಎಂದರೂ ಅಥವಾ ಅಂತಾರಾಷ್ಟ್ರೀಯ ನೈತಿಕ ನಿಯಮಗಳ ಉಲ್ಲಂಘನೆ ಎಂದರೂ ವೈಜ್ಞಾನಿಕವಾಗಿ ಹಾಗೂ ರಾಜಕೀಯವಾಗಿ ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸುವುದಕ್ಕಾಗಿ ಕೊರೋನಾಗೆ ಮೊದಲು ಲಸಿಕೆ ಕಂಡುಹಿಡಿಯುವುದಕ್ಕೆ ಪೈಪೋಟಿ ನಡೆಯುತ್ತಿದೆ.












Click it and Unblock the Notifications