Get Updates
Get notified of breaking news, exclusive insights, and must-see stories!

ಚೀನಾದಲ್ಲಿ ಮಂಗಗಳ ಮೇಲೆ ಕೊವಿಡ್ 19 ಲಸಿಕೆ ಪ್ರಯೋಗ ಯಶಸ್ವಿ

ಬೀಜಿಂಗ್, ಮೇ 8: ಚೀನಾದಲ್ಲಿ ಕೊವಿಡ್ 19 ಲಸಿಕೆ ಪ್ರಯೋಗ ಯಶಸ್ವಿಯಾಗಿದೆ. ಕೋತಿಯ ಮೇಲೆ ಮೊದಲ ಪ್ರಯೋಗ ನಡೆಸಲಾಗಿದೆ.

ವರದಿಗಳ ಪ್ರಕಾರ ಚೀನಾ ಮೊದಲ ಕೊರೋನಾ ಲಸಿಕೆ-PiCoVacc ಪ್ರಯೋಗವನ್ನು ಪ್ರಾಣಿಗಳ ಮೇಲೆ ನಡೆಸಲಾಗಿದೆ. ಮಂಗಗಳಿಗೆ ನೀಡಿರುವ ಈ ಲಸಿಕೆ ಪರಿಣಾಮಕಾರಿಯಾದ ಫಲಿತಾಂಶ ನೀಡಿದೆ ಎನ್ನಲಾಗುತ್ತಿದೆ. ಕೋವಿಡ್-19 ಲಸಿಕೆ PiCoVaccಯನ್ನು ಬೀಜಿಂಗ್ ಮೂಲದ ಸಿನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.

ಭಾರತದ ಮೂಲದ ರೀಸಸ್ ಮಕಾಕ್ ಎಂಬ ಪ್ರಬೇಧದ ಮಂಗಗಳ ಮೇಲೆ ಈ ಲಸಿಕೆಯನ್ನು ಚೀನಾ ಪ್ರಯೋಗಿಸಿ ಮೂರು ವಾರಗಳ ನಂತರ ಕೊರೋನಾ ವೈರಾಣು ಸೋಂಕು ತಗುಲುವಂತೆ ಮಾಡಿದೆ. ಹೆಚ್ಚು ಪ್ರಮಾಣದ ಲಸಿಕೆಯನ್ನು ನೀಡಿದ್ದ ಮಂಗಳಲ್ಲಿ ಕೊರೋನಾ ಕಂಡುಬಂದಿಲ್ಲ.

China Conducts First Successful Coronavirus COVID-19 Vaccine Test On Monkeys

ಲಸಿಕೆ ನೀಡದೇ ಇದ್ದ ಮಂಗಳಲ್ಲಿ ಕೊರೋನಾ ಉಲ್ಬಣಗೊಂಡಿದೆ. ಏಪ್ರಿಲ್ ಮಧ್ಯ ಭಾಗದಿಂದ ಈ ಲಸಿಕೆಯನ್ನು ಚೀನಾ ಮನುಷ್ಯರ ಮೇಲೆಯೂ ಪ್ರಯೋಗಿಸುತ್ತಿದ್ದು, ಕೋವಿಡ್ ತಡೆಗೆ ಇದು ಆಶಾದಾಯಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಶಿಷ್ಟ ವಿಧಾನದ ಮೂಲಕ ಈ ಲಸಿಕೆಯನ್ನು ಕೊರೋನಾ ವೈರಸ್ ಸೋಂಕಿಗೆ ಕಂಡುಹಿಡಿಯಲಾಗಿದ್ದು, ದುರ್ಬಲಗೊಂಡ ಕೊರೋನಾ ವೈರಸ್ ನ್ನು ಪ್ರಾಣಿಗಳ ದೇಹಕ್ಕೆ ಸೇರಿಸಿ ಸಹಜವಾಗಿಯೇ ಕೊರೋನಾ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗುವಂತೆ ಮಾಡಲಾಗುತ್ತದೆ. ಈ ಪ್ರತಿಕಾಯಗಳು ಸಾಮಾನ್ಯ ವೈರಾಣುಗಳನ್ನೂ ಸಹ ಕೊಲ್ಲಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+