ಪ್ರಿಯಕರ ಕುಡಿದು ರಂಪಾಟ, ಗಗನಸಖಿ ಅಮಾನತುಗೊಳಿಸಿದ ಬ್ರಿಟಿಷ್ ಏರ್‌ವೇಸ್
ನವದೆಹಲಿ, ಅಕ್ಟೋಬರ್ 22: ಗಗನಸಖಿಯೊಬ್ಬಳ ಪ್ರಿಯಕರ ಮದ್ಯಪಾನ ಮಾಡಿ ಪೈಲಟ್ ಬಳಿ ಜಗಳವಾಡಿದ ಪರಿಣಾಮ ಬ್ರಿಟಿಷ್ ಏರ್‌ವೇಸ್‌ಗಗನಸಖಿಯನ್ನು ಅಮಾನತುಗೊಳಿಸಿದೆ.
ಈ ಘಟನೆಯು ಸಿಂಗಾಪುರ ಹೋಟೆಲ್‌ನಲ್ಲಿ ನಡೆದಿದೆ. ಬ್ರಿಟಿಷ್ ದಿನಪತ್ರಿಕೆ ಪ್ರಕಾರ ಗಗನಸಖಿ ನಟಾಲಿ ಫ್ಲಿಂಡಾಲ್ ಬಾಯ್‌ಫ್ರೆಂಡ್ ಹೋಟೆಲ್‌ನ ರಿಸೆಪ್ಷನ್ ಪ್ರದೇಶದಲ್ಲಿ ಕಂಠಪೂರ್ತಿ ಕುಡಿದು ಪೈಲಟ್ ಜೊತೆ ಕಾದಾಡಿದ್ದಾರೆ.
ಆತ ಮದ್ಯಪಾನ ಮಾಡುವುದಷ್ಟೇ ಅಲ್ಲದೆ ಮದ್ಯದ ಬಾಟಲಿಗಳನ್ನು ವಿಮಾನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ.ನಟಾಲಿಯು ಟ್ರಿಪ್‌ನ್ನು ಎಂಜಾಯ್ ಮಾಡುವುದಕ್ಕೋಸ್ಕರ ಆತನನ್ನು ಕರೆಸಿದ್ದಳು.ಅದರೆ ಅಲ್ಲಿ ನಡೆದಿರುವ ಘಟನೆಯೇ ಬೇರೆಯಾಗಿದೆ.
Recommended Video

ಆದರೆ ಸಿಂಗಾಪುರದಲ್ಲಿ ವಿಮಾನ ನಿಂತಾಗ, ಬಿಎ ಪೈಲಟ್‌ನೊಂದಿಗೆ ಜಗಳವಾಡಿದ್ದಾರೆ. ಪ್ರಸ್ತುತ ಬ್ರಿಟಿಷ್ ವಿಮಾನಯಾನ ಸಂಸ್ಥೆಯು ತನ್ನ ಉದ್ಯೋಗಿಗಳಿಂದ ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳುತ್ತದೆ, ಇದೀಗ ನಟಾಲಿಯಾ ಅವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಹಾಗೆಯೇ ನಾವು ಕೂಡ ಉದ್ಯೋಗಿಗಳಿಂದ ಅದೇ ಮಟ್ಟದ ನಡವಳಿಕೆಯನ್ನು ಅಪೇಕ್ಷಿಸುತ್ತೇವೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬ್ರಿಟಿಷ್ ಏರ್ವೇಸ್ ವಕ್ತಾರ ಸನ್ ತಿಳಿಸಿದ್ದಾರೆ.
ಬ್ರಿಟಿಷ್ ಏರ್‌ಲೈನ್ ವಿಶ್ವದ ಎಲ್ಲರ ನೆಚ್ಚಿನ ಏರ್‌ಲೈನ್ಸ್ ಆಗಿದೆ. ಸೆಪ್ಟೆಂಬರ್‌ನಲ್ಲಿ ಉದ್ಯೋಗಿಗಳು ಎರಡು ದಿನದ ಮುಷ್ಕರ ನಡೆಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.











Click it and Unblock the Notifications