ಭಾರತದ ಪ್ರಧಾನಿಯ ಆಟೋಗ್ರಾಫ್ ಕೇಳಿದ ಅಮೆರಿಕ ಅಧ್ಯಕ್ಷ!
ಟೋಕಿಯೋ: ಭಾರತ ಜಾಗತಿಕವಾಗಿ ಬಲವಾಗುತ್ತಿದೆ. ಸ್ವಾತಂತ್ರ್ಯ ಬಂದ ನಂತರದಿಂದಲೂ ಭಾರತದ ಶಕ್ತಿ ಇಡೀ ಜಗತ್ತಿಗೇ ಗೊತ್ತು. ಅದರಲ್ಲೂ ಪ್ರಧಾನಿ ಮೋದಿಯವರ ಜಪ್ರಿಯತೆಗೆ ಕೈಗನ್ನಡಿ ಹಿಡಿದಂತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಪ್ರಧಾನಿ ಮೋದಿ ಅವರ ಆಟೋಗ್ರಾಫ್ ಕೇಳಿದ್ದಾರೆ. ಏನಾಯ್ತು? ಅಂದ್ರಾ ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
'ಜಿ7' ಶೃಂಗಸಭೆಗೆ ಅಂತಾ ಪ್ರಧಾನಿ ಮೋದಿ ಈಗ ಜಪಾನ್ ಪ್ರವಾಸದಲ್ಲಿ ಇದ್ದಾರೆ. ಮತ್ತೊಂದ್ಕಡೆ ಈ ವೇಳೆ 'ಕ್ವಾಡ್' ರಾಷ್ಟ್ರಗಳ ಸಭೆ ಕೂಡ ನಡೆದಿದೆ. ಆಗ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷರ ಮಧ್ಯೆ ಕೂಡ ಸಭೆ ನಡೆದಿದ್ದು, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಇರುವ ಜನಪ್ರಿಯತೆ ಬಗ್ಗೆ ಜೋ ಬೈಡನ್ ತುಂಬು ಹೃದಯದಿಂದ ಹೊಗಳಿದ್ದಾರೆ. ಹಾಗಾದ್ರೆ ಅಮೆರಿಕ ಅಧ್ಯಕ್ಷ ಬೈಡನ್ ಹೇಳಿದ್ದಾದರೂ ಏನು? ಮುಂದೆ ಓದಿ.

ಮೋದಿ ಬಗ್ಗೆ ಬೈಡನ್ ಮಾತು!
ಮುಂದಿನ ತಿಂಗಳು ಪಿಎಂ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವಿಚಾರದ ಬಗ್ಗೆ ಮೊದಲು ಮಾತನಾಡಿದ ಅಮೆರಿಕ ಅಧ್ಯಕ್ಷ ಬೈಡನ್, 'ನೀವು ನನಗೆ ಸಮಸ್ಯೆ ಮಾಡುತ್ತಿದ್ದೀರಿ. ಮುಂದಿನ ತಿಂಗಳು ನಿಮಗೆ ವಾಷಿಂಗ್ಟನ್‌ನಲ್ಲಿ ಡಿನ್ನರ್ ಏರ್ಪಡಿಸಿದ್ದೇವೆ. ಇಡೀ ಅಮೆರಿಕದ ಜನರು ಅಲ್ಲಿ ಪಾಲ್ಗೊಳ್ಳಲು ಬಯಸುತ್ತಿದ್ದಾರೆ. ನನ್ನ ಬಳಿ ಟಿಕೆಟ್ ಉಳಿದಿಲ್ಲ, ತಮಾಷೆ ಮಾಡುತ್ತಿದ್ದೇನೆ ಅಂತಾ ತಿಳಿಯಬೇಡಿ. ಬೇಕಿದ್ರೆ ನನ್ನ ತಂಡವನ್ನ ಕೇಳಿ. ಸಿನಿಮಾ ಸ್ಟಾರ್ಸ್‌ಗಳಿಂದ ಹಿಡಿದು ನನ್ನ ಸಂಬಂಧಿಕರವರೆಗೆ ನಿಮ್ಮ ಕಾರ್ಯಕ್ರಮದ ಟಿಕೆಟ್‌ಗಾಗಿ ಫೋನ್ ಕಾಲ್ ಬರುತ್ತಿದೆ. ನೀವು ತುಂಬಾ ಜನಪ್ರಿಯರು ಬಿಡಿ' ಎಂದು ಮೋದಿ ಬಗ್ಗೆ ಹೊಗಳಿದ್ದಾರೆ ಜೋ ಬೈಡನ್.
ನನಗೆ ನಿಮ್ಮ ಆಟೋಗ್ರಾಫ್ ಬೇಕು!
ಹಾಗೇ ತಮ್ಮ ಮಾತು ಮುಂದುವರಿಸಿ, ನಾನು ನಿಮ್ಮ ಆಟೋಗ್ರಾಫ್ ಪಡೆಯಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಅಲ್ಲದೆ ಪ್ರಧಾನ ಮಂತ್ರಿಗಳೇ ನೀವು ಕ್ವಾಡ್ ಸೇರಿ ಎಲ್ಲದರ ಮೇಲೂ ಗಮನಾರ್ಹ ಪರಿಣಾಮ ಉಂಟು ಮಾಡಿದ್ದೀರಿ. ನೀವು ವಾತಾವರಣದಲ್ಲಿ ಮೂಲಭೂತ ಬದಲಾವಣೆ ತಂದಿದ್ದೀರಿ. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ನಿಮ್ಮ ಪ್ರಭಾವವಿದೆ. ನೀವೊಂದು ಪರಿವರ್ತನೆ ತರುತ್ತಿದ್ದೀರಿ, ಎಂದು ಪ್ರಧಾನಿ ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.
ಭಾರತದ ಜೊತೆ ಉಕ್ರೇನ್ ಅಧ್ಯಕ್ಷ ಚರ್ಚೆ
ನಿನ್ನೆಯಷ್ಟೇ ಉಕ್ರೇನ್ ಅಧ್ಯಕ್ಷ ಪ್ರಧಾನಿ ಮೋದಿಯವರ ಜೊತೆ ಚರ್ಚಿಸಿದ್ದರು. ರಷ್ಯಾ ಜೊತೆಗೆ ಭಾರತ ಉತ್ತಮ ಸಂಬಂಧ ಹೊಂದಿದ್ದು, ಇನ್ನೊಂದ್ಕಡೆ ಉಕ್ರೇನ್ ಕೂಡ ಯುದ್ಧ ನಿಲ್ಲಿಸಿ ಎಂದು ಭಾರತದ ಬಳಿ ಅಂಗಲಾಚಿದೆ. ಈ ಹೊತ್ತಲ್ಲಿ ಪಿಎಂ ಮೋದಿ & ಉಕ್ರೇನ್ ಅಧ್ಯಕ್ಷರ ಚರ್ಚೆಗೆ ಜಪಾನ್ ವೇದಿಕೆ ಒದಗಿಸಿತ್ತು. ಪ್ರಧಾನಿ ಮೋದಿ ಯುದ್ಧದ ಬದಲು ಮಾನವೀಯತೆ ಪಾಠ ಪ್ರಸ್ತಾಪಿಸಿದ್ದಾರು. ಅಲ್ಲದೆ ಪರೋಕ್ಷವಾಗಿ ಯುದ್ಧ ನಿಲ್ಲಿಸಿ ಎಂದು ಮತ್ತೆ ರಷ್ಯಾಗೆ ಪ್ರಧಾನಿ ಮೋದಿ ಮನವಿ ಮಾಡಿದ್ದರು. ಈಗ ಅಮೆರಿಕ ಅಧ್ಯಕ್ಷರು ಕೂಡ ಭಾರತದ ಪ್ರಧಾನಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಉಕ್ರೇನ್ & ಅಮೆರಿಕಗೆ ಭಾರತವೇ ಮುಖ್ಯ!
ಉಕ್ರೇನ್ ಸಂಕಷ್ಟದಲ್ಲಿ ಇದೆ, ಹೀಗಾಗಿ ಭಾರತದ ಸಹಾಯ ಉಕ್ರೇನ್‌ಗೆ ಅತ್ಯಗತ್ಯ. ಇದೇ ಕಾರಣಕ್ಕೆ ಈಗ ಭಾರತದ ಬಳಿ ಬೇಡುತ್ತಿದೆ ಉಕ್ರೇನ್ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದ್ಕಡೆ ಉಕ್ರೇನ್ ಮೇಲಿನ ದಾಳಿ ನಿಲ್ಲಿಸಲು ರಷ್ಯಾಗೆ ಮನವಿ ಮಾಡಿ ಎಂದು ಭಾರತದ ಬಳಿ ಈ ಹಿಂದೆ ಉಕ್ರೇನ್ ಕೇಳಿಕೊಂಡಿತ್ತು. ಇಷ್ಟೆಲ್ಲದರ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಉಕ್ರೇನ್ ಅಧ್ಯಕ್ಷರು ಭಾರತದ ಪ್ರಧಾನಿ ಜೊತೆ ಮಾತುಕತೆಗೆ ನಡೆಸಿ ಜಗತ್ತಿನ ಗಮನ ಸೆಳೆದಿದ್ದಾರೆ. ಇದರ ಜೊತೆಗೆ ಅಮೆರಿಕ ಕೂಡ ಭಾರತದ ಜೊತೆಗಿನ ತನ್ನ ಸಂಬಂಧ ವೃದ್ಧಿಗೆ ಮುಂದಾಗಿದೆ.
ಒಟ್ನಲ್ಲಿ ಇದೀಗ ಟೋಕಿಯೋದಲ್ಲಿ ನಡೆಯುತ್ತಿರುವ ಕ್ವಾಡ್ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿಯವರು ಪಪುವಾ ನ್ಯೂ ಗಿನಿಯಾಗೆ ತೆರಳಲಿದ್ದಾರೆ. ಅಲ್ಲಿನ ಭೇಟಿ ಬಳಿಕ ಆಸ್ಟ್ರೇಲಿಯಾಗೂ ಭೇಟಿ ನೀಡಲಿದ್ದಾರೆ. ಭಾರತ ಈಗ ಬಲಾಢ್ಯ ರಾಷ್ಟ್ರವಾಗಿ ಬೆಳೆಯುತ್ತಿರುವುದು ಜಪಾನ್‌ನಲ್ಲಿ ಇಡೀ ಜಗತ್ತಿಗೇ ಗೊತ್ತಾಗಿದೆ. ಅದರಲ್ಲೂ ಜಿ7 ರಾಷ್ಟ್ರಗಳು ಭಾರತದ ಜೊತೆ ಸಂಬಂಧ ವೃದ್ಧಿಗೆ ಸಾಕಷ್ಟು ಒತ್ತು ನೀಡುತ್ತಿರುವುದು ವಿಶೇಷ.












Click it and Unblock the Notifications