ಬೀಜಿಂಗ್‌ನಲ್ಲಿ ಕೊರೊನಾ ಸೋಂಕಿನ 2ನೇ ಪರ್ವ, ಮತ್ತಷ್ಟು ಭಯಾನಕ

ಬೀಜಿಂಗ್, ಜೂನ್ 16: ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ನಗರಾಡಳಿತ ಎಚ್ಚರಿಕೆ ನೀಡಿದೆ. ನಗರದಲ್ಲಿ ಹೊಸದಾಗಿ 27 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಪಾಸಣೆ ಹೆಚ್ಚಾಗಿದೆ.

Recommended Video

      ರೈತರ ಪಾಲಿಗೆ ಉತ್ತಮ ಫಸಲನ್ನು ನೀಡಲಿದೆ 2020 | Oneindia Kannada

      ಕ್ಸಿನ್‌ಫದಿ ಹೋಲ್‌ಸೇಲ್ ಆಹಾರ ಮಾರುಕಟ್ಟೆಯಿಂದ ಕೊರೊನಾದ ಎರಡನೇ ಹಂತ ಆರಂಭವಾಗಿದೆ. ಈ ವರ್ಷದ ಆರಂಭದಲ್ಲೇ ಚೀನಾದಲ್ಲಿ ಹೆಚ್ಚು ಮಂದಿಯನ್ನು ತಪಾಸಣೆ ಮಾಡಲಾಗಿತ್ತು. ಪ್ರಕರಣಗಳು ಪತ್ತೆಯಾದ ಆರಂಭದಲ್ಲೇ ಲಾಕ್‌ಡೌನ್ ವಿಧಿಸಲಾಗಿತ್ತು ಹೀಗಾಗಿ ಸೋಂಕು ನಿಯಂತ್ರಣಕ್ಕೆ ಬಂದಿತ್ತು.

      ಕಳೆದ 5 ದಿನಗಳಿಂದ ಬೀಜಿಂಗ್‌ನಲ್ಲಿ ಒಟ್ಟು 106 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 10 ಸಾವಿರ ಮಂದಿಯ ತಪಾಸಣೆ ನಡೆಸಲಾಗಿತ್ತು. 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಕುರಿತು ಎಚ್ಚರಿಕೆ ನೀಡಿದೆ. ಅಲ್ಲಿರುವ ಆಹಾರ ಮಾರುಕಟ್ಟೆ, ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಎಲ್ಲೆಡೆ ಮಾಲೀಕರು, ಮ್ಯಾನೇಜರ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.

      Beijing Coronavirus Situation Extremely Severe

      ಬೀಜಿಂಗ್‌ನಲ್ಲಿ ದಿನಕ್ಕೆ 90 ಸಾವಿರ ಮಂದಿಯನ್ನು ತಪಾಸಣೆ ಮಾಡುವ ಸಾಮರ್ಥ್ಯವಿದೆ. ಮಂಗಳವಾರ ಟ್ಯಾಕ್ಸಿ ಸೇವೆ ಸೇರಿದಂತೆ ಎಲ್ಲದಕ್ಕೂ ನಿರ್ಬಂಧ ಹೇರಲಾಗಿದೆ. ತಮ್ಮ ನಗರವನ್ನು ಹೊರತುಪಡಿಸಿ ಜನರು ಬೇರೆಡೆಗೆ ಹೋಗುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+