ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮವಿತ್ತ ಮಹಾತಾಯಿ!

ಢಾಕಾ (ಬಾಂಗ್ಲಾದೇಶ್), ಮಾರ್ಚ್ 27: ಬಾಂಗ್ಲಾದೇಶ್ ನ ಇಪ್ಪತ್ತು ವರ್ಷದ ಮಹಿಳೆ ಈಗ ವೈದ್ಯಕೀಯ ಲೋಕದ ಪಾಲಿಗೆ ಅಚ್ಚರಿಯಾಗಿದ್ದಾರೆ. ಅವಧಿಗೆ ಪೂರ್ವವಾಗಿ ಮೊದಲ ಮಗು ಜನಿಸಿದ ಇಪ್ಪತ್ತಾರು ದಿನದಲ್ಲಿ ಅರೋಗ್ಯವಂತ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅರೀಫಾ ಸುಲ್ತಾನಾ ಕಳೆದ ತಿಂಗಳು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಗ ಸಹಜವಾದ ಹೆರಿಗೆಯಾಗಿತ್ತು. ಆಗ ವೈದ್ಯರು ಎರಡನೇ ಗರ್ಭಾಶಯ ಇರುವುದನ್ನು ಗಮನಿಸಿರಲಿಲ್ಲ. ಆಕೆಗೆ ಕೂಡ ತನ್ನ ಗರ್ಭದಲ್ಲಿ ಅವಳಿ ಮಕ್ಕಳಿವೆ ಎಂಬುದು ಗೊತ್ತಿರಲಿಲ್ಲ. ಮೊದಲ ಮಗು ಆದ ಇಪ್ಪತ್ತಾರು ದಿನಕ್ಕೆ ಮತ್ತೆ ಹೆರಿಗೆ ಲಕ್ಷಣ ಕಾಣಿಸಿಕೊಂಡಿದೆ. ಆಗ ವೈದ್ಯರ ಬಳಿ ಆಕೆಯನ್ನು ಕರೆದೊಯ್ಯಲಾಗಿದೆ.

ಕಳೆದ ಶುಕ್ರವಾರ ಶೀಲಾ ಎಂಬುವವರು ಹೆರಿಗೆ ಮಾಡಿಸಿದ್ದು, ಆಗ ಗಂಡು- ಹೆಣ್ಣು ಅವಳಿ ಮಕ್ಕಳು ಜನಿಸಿವೆ. ಆ ಮಹಿಳೆ ಜೆಸ್ಸೋರ್ ಜಿಲ್ಲೆಯವರಾಗಿದ್ದು, ಈಗ ಮೂರೂ ಮಕ್ಕಳು ಅರೋಗ್ಯವಾಗಿವೆ. ಯಾವುದೇ ಸಮಸ್ಯೆ ಆಗಲಿಲ್ಲ ಎಂದು ವೈದ್ಯೆ ಹೇಳಿದ್ದಾರೆ. ಮೂವತ್ತು ವರ್ಷಕ್ಕೂ ಹೆಚ್ಚು ಅನುಭವ ಇರುವ ನನ್ನ ವೈದ್ಯ ವೃತ್ತಿ ಜೀವನದಲ್ಲಿ ಇಂಥ ಪ್ರಕರಣ ನೋಡಿಲ್ಲ ಎಂದು ಜೆಸ್ಸೋರ್ ಜಿಲ್ಲಾಸ್ಪತ್ರೆ ವೈದ್ಯ ದಿಲೀಪ್ ರಾಯ್ ಹೇಳಿದ್ದಾರೆ.

Bangladeshi woman gives birth to twins within a month after first baby

ಸುಲ್ತಾನಾ ಅವರ ಪತಿ ತಿಂಗಳಿಗೆ ಐದು ಸಾವಿರ ರುಪಾಯಿ ದುಡಿಯುವ ಕಾರ್ಮಿಕ. "ಈಗ ಮೂವರು ಮಕ್ಕಳು ಹುಟ್ಟಿರುವುದು ಸಂತೋಷವೇ. ಆದರೆ ಇವರನ್ನು ಹೇಗೆ ಸಾಕುತ್ತೇವೋ ಎಂಬ ಚಿಂತೆಯಾಗಿದೆ'' ಎಂದಿದ್ದಾರೆ ಸುಲ್ತಾನಾ. ಆ ಅಲ್ಲಾಹ್ ನ ದಯೆಯಿಂದ ನನ್ನ ಮೂರು ಮಕ್ಕಳು ಆರೋಗ್ಯವಾಗಿವೆ. ಅವರನ್ನು ಸಂತೋಷವಾಗಿ ಇರಿಸಿಕೊಳ್ಳುವುದಕ್ಕೆ ನನ್ನಿಂದ ಎಷ್ಟು ಶ್ರಮ ಹಾಕಲು ಸಾಧ್ಯವೋ ಅಷ್ಟೂ ಶ್ರಮ ಪಡುತ್ತೇನೆ ಎಂದು ಸುಲ್ತಾನಾ ಪತಿ ಸುಮನ್ ಬಿಸ್ವಾಸ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+