ಬಲೂಚಿಸ್ತಾನ ಸೇನೆಯಿಂದ ಪಾಕ್ ಸೇನಾ ಕ್ಯಾಂಪ್ ಮೇಲೆ ದಾಳಿ: 16 ಸಾವು

ಡೇರಾ ಬುಗ್ತಿ, ಫೆಬ್ರವರಿ 20: ಬಲೂಚ್ ಸೇನೆಯು ಪಾಕ್ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದು 16 ಮಂದಿ ಪಾಕ್ ಸೈನಿಕರು ಮೃತಪಟ್ಟಿದ್ದಾರೆ.

ಸಿಂಗ್ಸಿಲಾ ಪ್ರದೇಶದಲ್ಲಿರುವ ಪಾಕಿಸ್ತಾನದ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. ಬಲೂಚಿಸ್ತಾನ ಲಿಬರೇಷನ್ ಫ್ರಂಟ್, ಬಲೂಚಿಸ್ತಾನ ರಿಪಬ್ಲಿಕನ್ ಗಾರ್ಡ್ ಹಾಗೂ ಸೇನೆ ಸೇರಿ ಒಟ್ಟಿಗೆ ದಾಳಿ ನಡೆಸಿದೆ.

ದಾಳಿ ವೇಳೆ ಸೇನಾ ಶಿಬಿರದಲ್ಲಿದ್ದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ಹೋರಾಟಗಾರರು ವಶಪಡಿಸಿಕೊಂಡಿದ್ದು, ಇವುಗಳಿಂದ ಶಿಬಿರದ ಮೇಲೆ ದಾಳಿ ದಾಳಿ ಮಾಡಿದ್ದಾರೆಂದು ತಿಳಿದುಬಂದಿದೆ.

Baloch Army Attacks Pakistan Camp

ಬಲೂಚಿಸ್ತಾನ ಸೇನೆಯು ಸೇನಾ ಶಿಬಿರದ ಮೇಲೆ ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೋರಾಟಗಾರರು ಹೇಳಿಕೆ ನೀಡಿರುವ ಪ್ರಕಾರ, ದಾಳಿಯಲ್ಲಿ ಸೇನೆಗೆ ಸೇರಿದ ಎರಡು ವಾಹನಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ದಾಳಿ ಬಗ್ಗೆ ಪಾಕಿಸ್ತಾನ ಸೇನೆ ಯಾವುದೇ ಮಾಹಿತಿಗಳನ್ನು ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+