ರಷ್ಯನ್ ಪ್ರಯಾಣಿಕ ವಿಮಾನ ಅಪಘಾತ: 41 ಮಂದಿ ಸಜೀವ ದಹನ
ಮಾಸ್ಕೋ, ಮೇ 6: ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದ ಅಗ್ನಿ ಅವಘಡದಲ್ಲಿ 41 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ರಷ್ಯನ್ ಸೂಪರ್ ಜೆಟ್ 100 ವಿಮಾನವು ಮಾಸ್ಕೋದ ಶೆರ್‌ಮೆಟೇವೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಾಗ ಸಮಸ್ಯೆ ಉಂಟಾಗಿದೆ.ಇದರಿಂದ ವಿಮಾನಕ್ಕೆ ಬೆಂಕಿ ತಗುಲಿದೆ.
ವಿಮಾನದಲ್ಲಿ ಒಟ್ಟು 78 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ 41 ಪ್ರಯಾಣಿಕರು ಸಜೀವ ದಹನವಾಗಿದ್ದು, ಉಳಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಮಾನವು ಮಾಸ್ಕೋದಿಂದ ಮುರ್ಮನ್ಸಕ್ ಗೆ ಹೋಗುತ್ತಿತ್ತು. ಆದರೆ ಮಿಂಚಿನ ಕಾರಣದಿಂದ ವಿಮಾನವು ಸಂವಹನ ಕಳೆದುಕೊಂಡಿದ್ದರಿದ ಮಾಸ್ಕೋ ವಿಮಾನ ನಿಲ್ದಾಣಕ್ಕೆ ಮತ್ತೆ ಹಿಂದಿರುಗಬೇಕಾಯಿತು. ಈ ಹಂತದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವಾಗ ರನ್‌ವೇ ಗೇ ವಿಮಾನ ಅಪ್ಪಳಿಸಿದೆ. ಇದರಿಂದ ಬೆಂಕಿ ತಗುಲಿಕೊಂಡಿದೆ.












Click it and Unblock the Notifications