ಪಾಕಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ 4.8ರಷ್ಟು ತೀವ್ರತೆಯ ಭೂಕಂಪನ

ಇಸ್ಲಮಾಬಾದ್, ಅಕ್ಟೋಬರ್.26: ಪಾಕಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.8ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.
ಸೋಮವಾರ ಬೆಳಗಿನ ಜಾವ 4.14 ಗಂಟೆಗೆ ಭೂಕಂಪನ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು ಯಾವುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಬದಲಿಗೆ ಲಘು ಭೂಕಂಪನದಿಂದ ಯಾವುದೇ ಆಸ್ತಿ ಪಾಸ್ತಿ ಮತ್ತು ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳ ಮೂಲಕ ತಿಳಿದು ಬಂದಿದೆ.

ಜಮ್ಮು ಕಾಶ್ಮೀರದ ಕಾರ್ಗಿಲ್ ನಲ್ಲಿ ಲಘು ಭೂಕಂಪನ
ಜಮ್ಮು-ಕಾಶ್ಮೀರದಲ್ಲಿ ಕೂಡಾ ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಲಡಾಖ್ ನ ಕಾರ್ಗಿಲ್ ಪ್ರದೇಶದಲ್ಲಿ ಬೆಳಗ್ಗೆ 9 ಗಂಟೆ 22 ನಿಮಿಷಕ್ಕೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 4.2ರಷ್ಟು ದಾಖಲಾಗಿತ್ತು.

An Earthquake Of Magnitude 4.8 On The Richter Scale Occurred At 4:14 Am In Pakistan

ಜಮ್ಮು ಕಾಶ್ಮೀರದಲ್ಲಿ ಹಲವು ಬಾರಿ ಭೂಕಂಪನ:
ಕಳೆದ ಎರಡು ವಾರಗಳ ಹಿಂದೆ ಕೂಡಾ ಎರಡರಿಂದ ಮೂರು ಬಾರಿ ಜಮ್ಮು ಕಾಶ್ಮೀರದ ಹಲವೆಡೆ ಭೂಕಂಪನ ಸಂಭವಿಸಿತ್ತು. ಶ್ರೀನಗರದಲ್ಲಿ ಸಪ್ಟೆಂಬರ್.23ರ ಮಂಗಳವಾರ ರಾತ್ರಿ 9.40ರ ವೇಳೆಗೆ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.6ರಷ್ಟು ದಾಖಲಾಗಿತ್ತು. ಭೂಮಿಯಿಂದ 5 ಕಿಲೋ ಮೀಟರ್ ಆಳದಲ್ಲಿ ಭೂಮಿ ಕಂಪಿಸಿದ್ದು, ಭೂಕಂಪನದ ಕೇಂದ್ರಬಿಂದು ಶ್ರೀನಗರದಿಂದ ಉತ್ತರ ಭಾಗದಲ್ಲಿ 11 ಕಿಲೋ ಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿದು ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+