ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್‌ನಲ್ಲಿ ಅತಿಥಿಗಳು ಮರೆತು ಹೋದ ಮುಗ್ದ ಜೀವಿಗಳು

|
Google Oneindia Kannada News

ಹೋಟೆಲ್‌ನಿಂದ ಹೊರಗೆ ಹೋದ ನಂತರ ಜನರು ತಮ್ಮ ಬೆಲೆಬಾಳುವ ವಸ್ತುಗಳನ್ನು ಮರೆತುಬಿಡುತ್ತಾರೆ. ಕೆಲವೊಮ್ಮೆ ಇವು ಫೋನ್ ಚಾರ್ಜರ್‌ಗಳಾಗಿರಬಹುದು ಅಥವಾ ಇಯರ್‌ಫೋನ್‌ಗಳಾಗಿರಬಹುದು ಮತ್ತು ಕೆಲವೊಮ್ಮೆ ಜನರ ಇತರ ಕೆಲವು ಬೆಲೆಬಾಳುವ ವಸ್ತುಗಳಾಗಿರಬಹುದು.

 ಹೋಟೆಲ್‌ಗಳಲ್ಲಿ ಸ್ಮೋಕಿಂಗ್‌ ಝೋನ್‌ ಮಾಡಲು BBMP ಆದೇಶ, ರೊಚ್ಚಿಗೆದ್ದ ಹೋಟೆಲ್‌ ಮಾಲೀಕರು ಹೋಟೆಲ್‌ಗಳಲ್ಲಿ ಸ್ಮೋಕಿಂಗ್‌ ಝೋನ್‌ ಮಾಡಲು BBMP ಆದೇಶ, ರೊಚ್ಚಿಗೆದ್ದ ಹೋಟೆಲ್‌ ಮಾಲೀಕರು

ಆದರೆ ನಾವು ಮಾತನಾಡುತ್ತಿರುವ ಹೋಟೆಲ್‌ಗಳಲ್ಲಿ, ಇಲ್ಲಿ ಅತಿಥಿಗಳು ವಿಚಿತ್ರವಾದ ವಿಷಯಗಳನ್ನು ಮರೆತುಬಿಟ್ಟಿದ್ದಾರೆ. ಹೀಗೆ ಹೋಟೆಲ್‌ಗಳು ಜನರು ಮರೆತು ಹಾಗೂ ಬಿಟ್ಟು ಹೋದ ವಸ್ತುಗಳ ಪಟ್ಟಿಯನ್ನು ಮಾಡಿದ್ದಾರೆ. ಈ ಪಟ್ಟಿಯಲ್ಲಿ ನಾವ್ಯಾರೂ ಊಹಿಸದ ಜೀವಿಗಳ ಪಟ್ಟಿಯಿದೆ. ಹೋಟೆಲ್‌ನಲ್ಲಿ ರಾಣಿ ಎಲಿಜಬೆತ್ ಅವರ ಚಿತ್ರದಿಂದ, ಜೋಡಿ ನಾಯಿ ಮತ್ತು ಕತ್ತೆಗಳನ್ನು ಮರೆತಿರುವ ಪಟ್ಟಿಯನ್ನು ಹೋಟೆಲ್ ಬಿಡುಗಡೆ ಮಾಡಿದೆ.

ಬಿಟ್ಟು ಹೋದ ಬೆಲೆಬಾಳುವ ವಸ್ತುಗಳ ಪಟ್ಟಿ

ಬಿಟ್ಟು ಹೋದ ಬೆಲೆಬಾಳುವ ವಸ್ತುಗಳ ಪಟ್ಟಿ

ಟ್ರಾವೆಲಾಡ್ಜ್ ತನ್ನ UK ಹೋಟೆಲ್‌ಗಳ 580 ಪಟ್ಟಿಯನ್ನು ಸಂಗ್ರಹಿಸಿದೆ. ಅಲ್ಲಿ ಜನರು ತಮ್ಮ ವಿಚಿತ್ರವಾದ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ. ಈ ಐಟಂ ಚಾರ್ಜರ್ ಅಥವಾ ಯಾವುದೇ ಸಾಮಾನ್ಯ ವಸ್ತುವಾಗಿರಲಿಲ್ಲ, ಆದರೆ ಬೆಲೆಬಾಳುವ ವಸ್ತುಗಳಾಗಿವೆ. ಇವುಗಳನ್ನು ಕಂಡು ಕಂಡು ಕೆಲಸದ ಸಿಬ್ಬಂದಿಗೂ ಆಶ್ಚರ್ಯವಾಗಿದೆ.

ರಾಣಿ ಎಲಿಜಬೆತ್ II ರ ಭವ್ಯವಾದ ವರ್ಣಚಿತ್ರ

ರಾಣಿ ಎಲಿಜಬೆತ್ II ರ ಭವ್ಯವಾದ ವರ್ಣಚಿತ್ರ

'ನ್ಯೂಯಾರ್ಕ್ ಪೋಸ್ಟ್' ನ ಸುದ್ದಿ ಪ್ರಕಾರ, ಟ್ರಾವೆಲ್ ಲಾಡ್ಜ್ ವಕ್ತಾರರಾದ ಶಕೀಲಾ ಅಹ್ಮದ್ ಅವರು ಅತಿಥಿಗಳನ್ನು ಮರೆತುಬಿಟ್ಟು ವಸ್ತುಗಳಲ್ಲಿ ರಾಣಿ ಎಲಿಜಬೆತ್ II ರ ಭವ್ಯವಾದ ವರ್ಣಚಿತ್ರ ಸೇರಿದೆ ಎಂದಿದ್ದಾರೆ. ಜನರು ಅದರಂತೆಯೇ ಹೋಟೆಲ್ ಕೋಣೆಗಳಲ್ಲಿ ಅನೇಕ ಅದ್ಭುತ ವಸ್ತುಗಳನ್ನು ಬಿಟ್ಟಿದ್ದಾರೆ.

ಅತಿಥಿಗಳು ಹೋಟೆಲ್‌ನಲ್ಲಿ ಬಿಟ್ಟು ಹೋದ ಮುಗ್ದ ಜೀವಗಳು

ಅತಿಥಿಗಳು ಹೋಟೆಲ್‌ನಲ್ಲಿ ಬಿಟ್ಟು ಹೋದ ಮುಗ್ದ ಜೀವಗಳು

ಅತ್ಯಂತ ವಿಚಿತ್ರವಾದ ವಸ್ತುಗಳನ್ನು ಅತಿಥಿಗಳು ಹೋಟೆಲ್‌ನಲ್ಲಿ ಬಿಟ್ಟು ಹೋದ ವಸ್ತುಗಳಲ್ಲಿ ಮುಗ್ದ ಜೀವಿಗಳು ಸೇರಿವೆ. ಇವುಗಳಲ್ಲಿ ಒಂದು ಮದುವೆಯ ಕೇಕ್ ಆಗಿತ್ತು. ಇದಿಷ್ಟೇ ಅಲ್ಲ, ಜಪಾನಿನ ದಂಪತಿಗಳು ತಮ್ಮ ಎರಡು ನಾಯಿಗಳನ್ನು ಬಾತ್ ಸೆಂಟ್ರಲ್ ಹೋಟೆಲ್ ನಲ್ಲಿ ಬಿಟ್ಟು ಹೋಗಿದ್ದರು. ಚೆಕ್ ಔಟ್ ವೇಳೆ ದಂಪತಿ ಬೇರೆ ಬೇರೆ ವಾಹನಗಳಲ್ಲಿ ಹೋಗಿದ್ದರಿಂದ ಪತ್ನಿಯೇ ಕರೆದುಕೊಂಡು ಹೋಗಿರಬೇಕು ಎಂದು ಪತಿ ಭಾವಿಸಿದ್ದಾನೆ. ಪತಿಯೇ ಕರೆದುಕೊಂಡು ಹೋಗಿರಬೇಕು ಎಂದುಕೊಂಡ ಹೆಂಡತಿ ಹೀಗೆ ಇಬ್ಬರೂ ನಾಯಿಗಳನ್ನು ಬಿಟ್ಟು ಹೋಗಿದ್ದಾರೆ.

ಜೋಡಿ ಕತ್ತೆಗಳನ್ನು ಮರೆತು ಹೋದ ದಂಪತಿ

ಜೋಡಿ ಕತ್ತೆಗಳನ್ನು ಮರೆತು ಹೋದ ದಂಪತಿ

ಇದಾದ ನಂತರ ಯಾರೂ ನಾಯಿಗಳೊಂದಿಗೆ ಮನೆಗೆ ತಲುಪದಿದ್ದಾಗ, ಇಬ್ಬರೂ ಮತ್ತೆ ಹೋಟೆಲ್‌ಗೆ ಬಂದು ತಮ್ಮ ಸಾಕುಪ್ರಾಣಿಗಳನ್ನು ಕರೆದೊಯ್ದರು. ಹೋಟೆಲ್ ಕೋಣೆಗಳಲ್ಲಿ ಉಳಿದಿರುವ ಪ್ರಾಣಿಗಳು ಇವು ಮಾತ್ರವಲ್ಲ. ಡೈಸಿ ಮತ್ತು ಡ್ಯೂಕ್ ಎಂಬ ಹೆಸರಿನ ಜೋಡಿ ಕತ್ತೆಗಳನ್ನು ಅವುಗಳ ಮಾಲೀಕರು ಪೂಲ್ ನಾರ್ತ್ ಟ್ರಾವೆಲಾಡ್ಜ್‌ನಲ್ಲಿ ಮರೆತುಬಿಟ್ಟು ಹೋಗಿದ್ದರು. ಬಳಿಕ ಈ ಜೋಡಿ ಕತ್ತೆಗಳನ್ನು ಅದೇ ಸ್ಥಳೀಯ ಪ್ರದೇಶದ ದಂಪತಿಗಳು ಖರೀದಿಸಿದರು.

English summary
Dogs, donkeys are among the valuables left behind by guests at an American hotel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X