ಭಾರತಕ್ಕೆ ಅಮೆರಿಕ ಗುಡ್‌ನ್ಯೂಸ್: ಚೀನಾಗೆ ಡೊನಾಲ್ಡ್ ಟ್ರಂಪ್ ಮರ್ಮಾಘಾತ!
ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಿಗ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ವಿಶ್ವದ ಎಲ್ಲಾ ಪ್ರಮುಖ ದೇಶಗಳಿಗೂ ರಿಟರ್ನ್ ಟ್ಯಾಕ್ (ಸುಂಕ / ತೆರಿಗೆ) ಅನ್ನು ಬರೋಬ್ಬರಿ 90 ದಿನಗಳ ವರೆಗೆ ತಡೆಹಿಡಿಯಲಾಗಿದೆ. ಅಂದರೆ ಮುಂದಿನ 3 ತಿಂಗಳ ಅವಧಿಯ ವರೆಗೆ ಹೊಸ ತೆರಿಗೆ ವಿರಾಮವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದಾರೆ. ಆದರೆ, ಈ ವಿನಾಯಿತಿಯಲ್ಲಿ ಅಮೆರಿಕ ದೇಶವು ಚೀನಾಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಇದರಿಂದ ಚೀನಾ ಮತ್ತು ಅಮೆರಿಕದ ನಡುವೆ ತೆರಿಗೆ ಯುದ್ಧ ಭೀಕರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಅಮೆರಿಕದ ಟ್ಯಾಕ್ಸ್ ರಿಟರ್ನ್‌ಗೆ ಗಂಭೀರವಾಗಿ ಪ್ರತಿಕ್ರಿಯೆ ನೀಡಿರುವ ಚೀನಾವು ಅಮೆರಿಕದ ಮೇಲೆ ಮಿತಿ ಮೀರಿ ತೆರಿಗೆ ವಿಧಿಸಿದೆ. ಇದು ಡೊನಾಲ್ಡ್ ಟ್ರಂಪ್ ಕೆಂಡಾಮಂಡಲರಾಗುವುದಕ್ಕೆ ಕಾರಣವಾಗಿದೆ.
ವಿಶ್ವದ ಎಲ್ಲಾ ದೇಶಗಳಿಗೂ ರಿಟರ್ನ್ ಟ್ಯಾಕ್ಸ್ (ಪ್ರತಿಸುಂಕ - ಹೆಚ್ಚುವರಿ ಟ್ಯಾಕ್ಸ್) ಹಾಕಿ ಸಂಕಷ್ಟಕ್ಕೆ ಸಿಲುಕಿಸಿದ್ದ ಡೊನಾಲ್ಡ್ ಟ್ರಂಪ್ ಅವರು ಇದೀಗ ಸಣ್ಣ ವಿರಾಮವನ್ನು ಘೋಷಿಸಿದ್ದಾರೆ. ಆದರೆ, ಚೀನಾಗೆ ಮರ್ಮಾಘಾತ ನೀಡುವುದಕ್ಕೆ ಟ್ರಂಪ್ ನಿರ್ಧರಿಸಿದ್ದಾರೆ. ಚೀನಾದ ಮೇಲೆ ಬರೋಬ್ಬರಿ ಶೇ.125% ರಷ್ಟು ತೆರಿಗೆ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಮೆರಿಕದ ಮೇಲೆ ನಾವೂ ಟ್ಯಾಕ್ಸ್ ಹಾಕಲಿದ್ದೇವೆ. ನಮಗೆ ನಮ್ಮ ದೇಶದ ಆರ್ಥಿಕ ಹಾಗೂ ಹಿತರಕ್ಷಣೆ ಮುಖ್ಯ ಎಂದು ಚೀನಾ ಹೇಳಿದ ಮೇಲೆ ಅಮೆರಿಕ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಇದೇ ಕಾರಣಕ್ಕೆ ಭಾರತ ಸೇರಿ ಇನ್ನುಳಿದ ದೇಶಗಳಿಗೆ ಸಣ್ಣ ವಿರಾಮ ಕೊಟ್ಟರೂ ಚೀನಾಗೆ ಯಾವುದೇ ವಿನಾಯಿತಿ ನೀಡಿಲ್ಲ.

ಇನ್ನು 90 ದಿನಗಳ ವರೆಗೆ ಹೊಸ ಟ್ಯಾಕ್ಸ್ ಇಲ್ಲ ಎಂದಷ್ಟೇ ಅಮೆರಿಕ ಹೇಳಿದೆ. ಆದರೆ ಈಗಾಗಲೇ ಇರುವ ಟ್ಯಾಕ್ಸ್ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಈಗಾಗಲೇ ಇರುವ ಟ್ಯಾಕ್ಸ್‌ನಲ್ಲಿ ಹೊಸ ಟ್ಯಾಕ್ಸ್ ಇರುವುದಿಲ್ಲ ಅಷ್ಟೇ.
ರಿಟರ್ನ್ ಟ್ಯಾಕ್ಸ್‌ಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅವರು ಪ್ರಮುಖ ಎರಡು ನಿರ್ಧಾರಗಳನ್ನು ಬುಧವಾರ ಘೋಷಿಸಿದ್ದಾರೆ. ಅದರಲ್ಲಿ ಒಂದು ಚೀನಾದ ಮೇಲೆ ಹೆಚ್ಚು ಟ್ಯಾಕ್ಸ್ ಹಾಕುವುದು ಮತ್ತೊಂದು ಎಲ್ಲಾ ದೇಶಗಳಿಗೂ ತಾತ್ಕಾಲಿಕ ರಿಲೀಫ್ ನೀಡುವುದು. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಮೇಲೆ ಡೊನಾಲ್ಡ್ ಟ್ರಂಪ್ ಅವರು ಟ್ಯಾಕ್ಸ್ ವಾರನ್ನೇ ಶುರು ಮಾಡಿದ್ದಾರೆ. ಇದರ ಭಾಗವಾಗಿ ಭಾರತವೂ ಸೇರಿದಂತೆ ಎಲ್ಲಾ ದೇಶಗಳ ಮೇಲೂ ವಿಪರೀತ ಟ್ಯಾಕ್ಸ್ ಹಾಕಲಾಗಿತ್ತು. ಆದರೆ ಈಗ 90 ದಿನಗಳ ವಿರಾಮದಿಂದ 80ಕ್ಕೂ ಹೆಚ್ಚು ದೇಶಗಳು ನಿಟ್ಟುಸಿರು ಬಿಡುವಂತೆ ಆಗಿದೆ.
ಅಮೆರಿಕ ಹಾಗೂ ಚೀನಾ ನಡುವೆ ಜಾಟಾಪಟಿ: ಇನ್ನು ರಿಟರ್ನ್ ಟ್ಯಾಕ್ಸ್ ವಿಚಾರದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಅಮೆರಿಕ ಗುಡ್‌ನ್ಯೂಸ್ ಕೊಟ್ಟಿದ್ದರೂ ಚೀನಾಗೆ ಅಮೆರಿಕ ಸಮಾಧಾನ ನೀಡಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಅಮೆರಿಕ ಹಾಗೂ ಚೀನಾದ ನಡುವೆ ಟ್ಯಾಕ್ಸ್ ಸಮರ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ವ್ಯವಹಾರಿಕ ಪೈಪೋಟಿ ಇದೆ. ಈ ಪೈಪೋಟಿಯು ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ಇದೀಗ ಹೊಸ ಹಂತವನ್ನು ತಲುಪಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಮೇಲಿ ತೆರಿಗೆಯನ್ನು ಶೇ 104%ಕ್ಕೆ ಏರಿಸಿದ್ದರು. ಇದಕ್ಕೆ ಚೀನಾ ದೇಶವು ಅಮೆರಿಕದ ಮೇಲೆ ಸೇಡು ತೀರಿಸಿಕೊಂಡಿದೆ. ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಶೇ 84% ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿತ್ತು. ಇದು ಶೇ 34%ಕ್ಕೂ ಹೆಚ್ಚಾಗಿದೆ. ಇದು ಎರಡು ದೇಶಗಳ ನಡುವೆ ಟ್ಯಾಕ್ಸ್ ವಾರ್‌ಗೆ ಕಾರಣವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಮೇಲೆ ಬರೋಬ್ಬರಿ ಶೇ 125% ರಷ್ಟು ತೆರಿಗೆಯನ್ನು ವಿಧಿಸಿದ್ದಾರೆ.
90 ದಿನಗಳ ವಿರಾಮ ಇಲ್ಲ!
ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಡೀ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಹೊಸ ತೆರಿಗೆಯಿಂದ ವಿರಾಮ ನೀಡಿದರೂ, ಚೀನಾಗೆ ಮಾತ್ರ ಈ ಸೌಲಭ್ಯ ಸಿಗಲಿಲ್ಲ. ಚೀನಾದ ಮೇಲೆ ಪ್ರತಿಕಾರ ತೆಗೆದುಕೊಳ್ಳುವುದಕ್ಕೆ ಅಮೆರಿಕ ನಿರ್ಧರಿಸಿದಂತೆ ಇದೆ.
75 ದೇಶಗಳಿಂದ ಮಾತುಕತೆ ಪ್ರಯತ್ನ: ಇನ್ನು ವಿಶ್ವದ 75ಕ್ಕೂ ಹೆಚ್ಚು ದೇಶಗಳು ರಿಟರ್ನ್ ಟ್ಯಾಕ್ಸ್‌ಗೆ ಸಂಬಂಧಿಸಿದಂತೆ ಅಮೆರಿಕದೊಂದಿಗೆ ಮಾತುಕತೆ ನಡೆಸುವುದಕ್ಕೆ ಮುಂದಾಗಿದ್ದವು. ಈ ರೀತಿ ಇರುವಾಗಲೇ ಅಮೆರಿಕ ಹೊಸ ತೆರಿಗೆ ವಿಧಿಸುವುದಕ್ಕೆ ಮೂರು ತಿಂಗಳ ಅವಧಿಗೆ ವಿರಾಮವನ್ನು ಘೋಷಿಸಿದೆ. ಇದರಿಂದ ಭಾರತವೂ ಸೇರಿದಂತೆ ವಿವಿಧ ದೇಶಗಳು ನಿಟ್ಟುಸಿರು ಬಿಟ್ಟಿವೆ.
ಅಮೆರಿಕ ಮೊದಲು ಎನ್ನುವ ನೀತಿ: ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಮೊದಲು ಎನ್ನುವ ನೀತಿಯನ್ನು ಜಾರಿ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2.0 ಆಡಳಿತ ಕಠಿಣವಾಗಿದೆ. ಇನ್ನು ನಾವು ನಮ್ಮ ಆರ್ಥಿಕತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ನೀತಿಯನ್ನು ಅನುಸರಿಸಬೇಕಿದೆ. ಭಾರತ ಸೇರಿದಂತೆ ವಿವಿಧ ದೇಶಗಳು ನಮ್ಮ ಮೇಲೆ ವಿಪರೀತ ಅಥವಾ ಅನ್ಯಾಯವಾಗಿ ಟ್ಯಾಕ್ಸ್ ವಿಧಿಸುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ಅವರು ಆರೋಪಿಸಿದ್ದರು.
ಅಮೆರಿಕ ಟ್ಯಾಕ್ಸ್ ನೀತಿ ಭಾರತದ ಮೇಲೆ ಹೇಗೆ ಪರಿಣಾಮ ಬೀರಲಿದೆ ?
ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀತಿಯಿಂದ ಭಾರತಕ್ಕೂ ಸಂಕಷ್ಟ ಎದುರಾಗಿದೆ. ಭಾರತವು ನಮ್ಮ ಸ್ನೇಹಿತ ದೇಶವಾಗಿರಬಹುದು. ಆದರೆ, ನಾವು ಟ್ಯಾಕ್ಸ್ ವಿಚಾರದಲ್ಲಿ ರಾಜಿ ಆಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಉತ್ತಮ ಸಂಬಂಧ ಇರುವುದರಿಂದ ಭಾರತದ ಮೇಲೆ ಭಾರೀ ರಿಟರ್ನ್ ಟ್ಯಾಕ್ಸ್ ಇರುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಭಾರತದ ಮೇಲೆ ಶೇ 26% ರಷ್ಟು ರಿಟರ್ನ್ ಟ್ಯಾಕ್ಸ್ ವಿಧಿಸಲಾಗಿದೆ. ಇದು ದ್ವಿಪಕ್ಷೀಯ ವ್ಯವಹಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.












Click it and Unblock the Notifications