America: ಸಂಕಷ್ಟದಲ್ಲಿ ಸೂಪರ್ ಪವರ್ ನೇಷನ್ ಅಮೆರಿಕ, ಕಾರಣ ವಿಚಿತ್ರ !
ವಿಶ್ವದ ದೊಡ್ಡಣ್ಣ ಹಾಗೂ ಸೂಪರ್ ಪವರ್ ನೇಷನ್ ಎಂದು ಕರೆದುಕೊಳ್ಳುವ ಅಮೆರಿಕ ಈಗ ನಿಧಾನವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೌದು ಬೇರೆ ಬೇರೆ ದೇಶಗಳ ಯುದ್ಧದಲ್ಲಿ ಮೂಗು ತೂರಿಸುವ, ಎಲ್ಲದಕ್ಕೂ ಮುಂದಿರುವ ಹಾಗೂ ವಿಶ್ವದಲ್ಲೇ ಅತ್ಯಂತ ಬಲಿಷ್ಠ ರಾಷ್ಟ್ರ ಎಂದು ಹೇಳಿಕೊಳ್ಳುವ ಅಮೆರಿಕದ ದುಡ್ಡು ಸಣ್ಣಗೆ ಕರಗುತ್ತಿದೆ. ಅಮೆರಿಕ ಆರ್ಥಿಕವಾಗಿ ಸಂಕಷ್ಟವನ್ನು ಅನುಭವಿಸುತ್ತಿದೆ.
ಹೌದು ಇದು ಅಚ್ಚರಿ ಏನಿಸಿದರೂ ನಿಜ. ಅಮೆರಿಕದ ಬಳಿ ಈಗ ದುಡ್ಡಿಲ್ಲ ಇದೇ ಕಾರಣಕ್ಕೆ ಅಮೆರಿಕ ಹಲವು ಯೋಜನೆಗಳಿಗೆ ಬ್ರೇಕ್ ಹಾಕುತ್ತಿದೆ. ಅಲ್ಲದೆ ವಿಶ್ವದ ವಿವಿಧ ರಾಷ್ಟ್ರಗಳಿಗೆ ನೀಡುತ್ತಿದ್ದ ದುಡ್ಡಿಗೂ ಬ್ರೇಕ್ ಹಾಕಲಾಗಿದೆ. ಜನ ಇಲ್ಲಿ ಸಾಲ ಮಾಡಿಕೊಳ್ಳುತ್ತಿದ್ದಾರೆ. ಏನಿದು ವಿಶ್ವದ ದೊಡ್ಡಣ್ಣನ ಸಾಲದ ಸ್ಟೋರಿ ಎನ್ನುವ ವಿವರ ಇಲ್ಲಿದೆ.

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದು ಅಮೆರಿಕದ ಸುವರ್ಣ ಯುಗ. ಅಮೆರಿಕದ ಗತವೈಭವವನ್ನು ಮರಳಿ ತರುತ್ತೇವೆ. ನಮ್ಮ ದೇಶದ ಕಡೆ ಎಲ್ಲರೂ ತಿರುಗಿ ನೋಡುವಂತೆ ಮಾಡುತ್ತೇವೆ ಎಂದೆಲ್ಲ ಹೇಳಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಅವರು ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು. ಆದರೆ ಅಮೆರಿಕದ ನಿಜವಾದ ಕಹಾನಿ ಬೇರೆಯೇ ಇದೆ ಎನ್ನಲಾಗುತ್ತಿದೆ. ಈಚೆಗೆ ಸೂಪರ್ ಪವರ್ ನೇಷನ್ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಇದರೊಂದಿಗೆ ಹೊಸದಾಗಿ ದುಡ್ಡಿಲ್ಲ ಎನ್ನುವುದು ಸಹ ಹೊಸ ಸಮಸ್ಯೆ.
ಸೂಪರ್ ನೇಷನ್‌ನ ಸಾಲ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಹೌದು ಇದು ಅಚ್ಚರಿ ಏನಿಸಿದರೂ ನಿಜ ಈ ದೇಶದ ಸಾಲ ಹೆಚ್ಚಳವಾಗಿದೆ. ಸರ್ಕಾರದ ಖರ್ಚು ಆದಾಯಕ್ಕಿಂತ ಹೆಚ್ಚಳವಾಗಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಅಂತ ಹೇಳಲಾಗಿದೆ.
ಪಾಕಿಸ್ತಾನ್ ಹಾಗೂ ಅಫ್ಘಾನಿಸ್ತಾನದಂತಹ ರಾಷ್ಟ್ರಗಳು ಸಾಲದ ಸುಳಿಯಲ್ಲಿ ಇವೆ. ಈ ರಾಷ್ಟ್ರಗಳು ಸಾಲದಲ್ಲಿ ಇರುವುದಕ್ಕೆ ಬೇರೆಯದೇ ಕಾರಣವಿದೆ. ಆದರೆ ಅಮೆರಿಕದಂತಹ ದೈತ್ಯ ರಾಷ್ಟ್ರ ಸಹ ಸಾಲದಲ್ಲಿ ಹಾಗೂ ಆರ್ಥಿಕ ಸಂಕಷ್ಟದಲ್ಲಿದೆ ಎನ್ನುವುದು ಅಚ್ಚರಿ ಮೂಡಿಸಿದೆ. ಅಲ್ಲದೆ ಈ ಸಾಲ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಅಂತಲೂ ಹೇಳಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ (US) ಸಾಲವು $5.7 ಟ್ರಿಲಿಯನ್‌ನಿಂದ $36 ಟ್ರಿಲಿಯನ್‌ಗೆ ಹೆಚ್ಚಳವಾಗಿದೆ. ಈ ರೀತಿ ಕೋಟ್ಯಾಂತರ ರೂಪಾಯಿ ಸಾಲದಲ್ಲಿ ಅಮೆರಿಕ ಮುಳುಗಿದೆ. ಈ ಸಾಲವನ್ನು ಅಮೆರಿಕದ GDPಯ 125% ರಷ್ಟಿದೆ ಅಂತ ಅಂದಾಜಿಸಲಾಗಿದೆ. ಅಂದರೆ ತಲಾ ಆದಾಯಕ್ಕಿಂತ ಶೇ 125ರಷ್ಟು ಹೆಚ್ಚು.
ಇನ್ನೂ ಆಘಾತಕಾರಿ ವಿಚಾರ ಎಂದರೆ ಮುಂದಿನ ದಿನಗಳಲ್ಲಿ ಈ ಸಾಲದ ಪ್ರಮಾಣ ಶೇ 200ರಷ್ಟು ತಲುಪಬಹುದು ಎಂದೂ ಹೇಳಲಾಗಿದೆ. ಈ ದೇಶದ ಖರ್ಚು ಹಾಗೂ ಆದಾಯಕ್ಕೆ ಹೋಲಿಕೆಯೇ ಆಗುತ್ತಿಲ್ಲ. 2022- 2023ನೇ ಸಾಲಿನ ಹಣಕಾಸು ವರ್ಷದಲ್ಲಿ ಬಜೆಟ್ ಕೊರತೆ $1.83 ಟ್ರಿಲಿಯನ್ ಎಂದು ಹೇಳಲಾಗಿದೆ. ಅಲ್ಲದೆ ಅಮೆರಿಕನ್ನರು ತಮ್ಮ ಸಾಲವನ್ನು ತೀರಿಸಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸಹಕಾರಿ ಕಾರ್ಯಕ್ರಮಗಳಿಗೆ ಹಣಕಾಸು: ಇನ್ನು ಅಮೆರಿಕ ಸಹಕಾರಿ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಸಹಕಾರದ ಮೊತ್ತವನ್ನು ಹಿಂಪಡೆದಿದೆ. ಎಲ್ಲಾ ಹಣಕಾಸು ಖಾತೆಗಳನ್ನು ಸ್ಥಗಿತಗೊಳಿಸಿದೆ. ಅಲ್ಲದೆ ಅಮೆರಿಕ ತನ್ನ ತೆರಿಗೆ ನೀತಿಯನ್ನು ಪರಿಷ್ಕರಿಸಲಿದೆ ಅಂತ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.












Click it and Unblock the Notifications