ಶಾಕ್ ಮೇಲೆ ಶಾಕ್.. ಇದು ಮಾಜಿ ಪ್ರಧಾನಿ ಪರಿಸ್ಥಿತಿ!

ಪಾಕಿಸ್ತಾನ ಮಾಜಿ ಪ್ರಧಾನಿ ಹಣೆಬರಹ ಸರಿ ಇಲ್ಲ ಅಂತಾ ಕಾಣುತ್ತೆ, ಇದೇ ಕಾರಣಕ್ಕೆ ಈ ಮಾಜಿ ಪ್ರಧಾನಿ ಪದೇ ಪದೇ ಸಂಕಷ್ಟದ ಬಲೆಗೆ ಸಿಲುಕಿ ನರಳುವ ಸ್ಥಿತಿ ಬಂದಿದೆ. ಹಾಗಾದ್ರೆ ನಾವು ಮಾತನಾಡುತ್ತಿರುವುದು ಯಾರ ಬಗ್ಗೆ ಅಂತಾ ನಿಮಗೆ ಈಗಾಗಲೇ ಗೊತ್ತಾಗಿರಬಹುದು ಅಲ್ವಾ? ಅಕಸ್ಮಾತ್ ಗೊತ್ತಾಗಿಲ್ಲ ಅಂದ್ರೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಹೌದು, ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈಗ ಸಾಲು ಸಾಲು ಸಂಕಷ್ಟದಲ್ಲಿ ಸಿಲುಕಿ ನರಳುತ್ತಿದ್ದಾರೆ. ತೋಷಖಾನಾ ಭ್ರಷ್ಟಾಚಾರ ಕೇಸ್ ಹಿನ್ನೆಲೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಹೆಂಡತಿ ಬುಶ್ರಾ ಬೀಬಿ ಅವರಿಗೆ, 14 ವರ್ಷ ಜೈಲು ಶಿಕ್ಷೆ ಪ್ರಕಟ ಆಗಿತ್ತು. ಈಗಾಗಲೇ ನೂರಾರು ಕೇಸ್ ಎದುರಿಸುತ್ತಿರುವ ಇಮ್ರಾನ್ ಖಾನ್ ಅವರಿಗೆ ಹೀಗೆ, ದಿಢೀರ್ 14 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದ್ದು ಆಘಾತ ನೀಡಿತ್ತು. ಈ ಆಘಾತ ಸಾಲುತ್ತಿಲ್ಲ ಎನ್ನುವಂತೆ ಮತ್ತೊಂದು ಶಾಕ್ ಎದುರಾಗಿದೆ.

Allegedly Police Searched In Imran Khans Party Office

ಇಮ್ರಾನ್ ಪಕ್ಷದ ಕಚೇರಿ ಲಾಕ್?

ಅಂದಹಾಗೆ ಹಿಂದೆ ಕೂಡ ಪಾಕಿಸ್ತಾನದ ಸೂಕ್ಷ್ಮ ಮಾಹಿತಿ ಸೋರಿಕೆ ಕೇಸ್ ಸಂಬಂಧ, ಇಮ್ರಾನ್ ಮತ್ತು ಇತರರಿಗೆ 10 ವರ್ಷ ಜೈಲು ಶಿಕ್ಷೆಯಾಗಿತ್ತು. ಈ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಮತ್ತೊಮ್ಮೆ ಈ ಮಾಜಿ ಪ್ರಧಾನಿಗೆ ಶಾಕ್ ಸಿಕ್ಕಿದೆ. ಇಷ್ಟೆಲ್ಲಾ ಸಂಕಷ್ಟದ ನಡುವೆ ಈಗ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ರ ತೆಹ್ರೀಕ್‌-ಎ-ಇನ್ಸಾಫ್‌ ಅಂದ್ರೆ ಪಿಟಿಐ ಪಕ್ಷದ ಆಡಳಿತ ಕಚೇರಿಯಲ್ಲಿ, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಶೋಧ ಕೈಗೊಂಡಿದ್ದಾರಂತೆ. ಅಷ್ಟಕ್ಕೂ ಮಫ್ತಿಯಲ್ಲಿದ್ದ ಪೊಲೀಸರು ಕಚೇರಿ ಒಳಗೆ ಪ್ರವೇಶಿಸಿ ಇಡೀ ಕಚೇರಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪೊಲೀಸರು ಹೇಳೋದು ಏನು?

ಆದರೆ ಈ ವರದಿಯನ್ನು ಪಾಕಿಸ್ತಾನದ ಇಸ್ಲಾಮಾಬಾದ್ ಪೊಲೀಸರು ಅಲ್ಲಗಳೆದಿದ್ದಾರೆ. ಹೀಗೆ ಪಿಟಿಐ ಕಚೇರಿಯಲ್ಲಿ ನಾವು ಶೋಧ ನಡೆಸಿಲ್ಲ ಅಂತಿದ್ದಾರೆ. ಮ್ಯಾಜಿಸ್ಟ್ರೇಟ್‌ ಅವರ ಅನುಮತಿ ಇಲ್ಲದೆ ಶೋಧ ನಡೆಸಲು ಸಾಧ್ಯವಿಲ್ಲ. ಪಿಟಿಐ ಕಚೇರಿಯಲ್ಲಿ ಶೋಧ ನಡೆಸಲು ನಮಗೆ ಇದೀಗ ಯಾವುದೇ ಆದೇಶ ಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಚುನಾವಣೆಗೆ ಮೊದಲು ಪಾಕಿಸ್ತಾನದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿ ಸೂಕ್ಷ್ಮ ವಾತಾವರಣ ನಿರ್ಮಾಣವಾಗಿದೆ.

ಪಾಕಿಸ್ತಾನ ಮಾಜಿ ಪ್ರಧಾನಿಯನ್ನ ಅಕ್ಷರಶಃ ಕ್ರಿಮಿನಲ್ ರೀತಿ

ನಡೆಸಿಕೊಳ್ಳಲಾಗ್ತಿದೆ. ಹೀಗಾಗಿಯೇ ಇಮ್ರಾನ್ ಖಾನ್ ವಿರುದ್ಧ ಹತ್ತಾರು ಕೇಸ್ ಹಾಕಿ ಹೇಗಾದ್ರೂ ಮುಗಿಸಬೇಕು ಅಂತಾ ಈ ಪ್ರಯತ್ನ ಮಾಡ್ತಿದ್ದಾರೆ ಎಂಬ ಆರೋಪ ಇಮ್ರಾನ್ ಬೆಂಬಲಿಗರದ್ದು. ಹೀಗಾಗಿ ಇಮ್ರಾನ್ ವಿರುದ್ಧ ಕೊಲೆ ಆರೋಪದ ಕೇಸ್‌ ಬಿದ್ದಿವೆ ಅನ್ನೋ ಆರೋಪ ಇಮ್ರಾನ್ ಬೆಂಬಲಿಗರದ್ದು. ಇಷ್ಟೆಲ್ಲದರ ನಡುವೆ ಈಗ ದೊಡ್ಡ ಪ್ರಮಾಣದ ಜೈಲು ಶಿಕ್ಷೆ ಕೂಡ ಇಮ್ರಾನ್‌ಗೆ ಮುಳುವಾಗಿದೆ. ಹಾಗೇ, ಇಮ್ರಾನ್‌ರ ಕಚೇರಿಯಲ್ಲಿ ಪೊಲೀಸರು ಭಾರಿ ತಪಾಸಣೆ ನಡೆಸಿರುವ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+