ಕೆನಡಾ ನಂತರ ಈಗ ಅಮೆರಿಕದಲ್ಲೂ ಭಾರತ ವಿರೋಧಿ ಚಟುವಟಿಕೆ!
ಅಮೆರಿಕದಲ್ಲಿ ಭಾರತದ ವಿರೋಧಿ ಚಟುವಟಿಕೆಯೊಂದು ನಡೆದಿದೆ. ಹೌದು ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೇ ಈ ಘಟನೆ ನಡೆದಿದ್ದು. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಗಣ್ಯರು ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ಘಟನೆಯಲ್ಲಿ ಭಾರತ ವಿರೋಧಿ ಚಟುವಟಿಕೆಯೊಂದು ನಡೆದಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾರತದ ವಿರೋಧಿ ಚಟುವಟಿಕೆಗಳು ಹಾಗೂ ಪ್ರತ್ಯೇಕ ಖಲಿಸ್ತಾನಿ ಹೋರಾಟಗಳು ಇತ್ತೀಚಿನ ವರ್ಷಗಳಲ್ಲಿ ಕೆನಡಾದಲ್ಲಿ ಮಾತ್ರ ನಡೆಯುತ್ತಿತ್ತು. ಇದೀಗ ಅಮೆರಿಕದಲ್ಲೂ ಇದೇ ಮಾದರಿಯ ಘಟನೆ ನಡೆದಿರುವುದು ಅಚ್ಚರಿ ಹಾಗೂ ಆಘಾತ ಎರಡಕ್ಕೂ ಕಾರಣವಾಗಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಏನಾಗಿದೆ ಎನ್ನುವ ವಿವರ ಇಲ್ಲಿದೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಹಾಗೂ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅದ್ಧೂರಿ ಸಮಾರಂಭದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದ್ದು, ಪವರ್ ಫುಲ್ ಸ್ಪೀಚ್ ಸಹ ಕೊಟ್ಟಿದ್ದಾರೆ. ಈ ಭಾಷಣದಲ್ಲಿ ಅವರು ಅಮೆರಿಕವನ್ನು ಮತ್ತೆ ಎಲ್ಲಾ ವಿಷಯಗಳಲ್ಲೂ ಪ್ರಥಮ ಸ್ಥಾನಕ್ಕೆ ತರುವುದಾಗಿ ಹೇಳಿದ್ದಾರೆ. ಅಲ್ಲದೆ ಅಮೆರಿಕ ಮತ್ತೆ ಮೊದಲಿನಂತೆ ಮಿಂಚಲಿದೆ ಎಂದಿದ್ದಾರೆ. ವಿಶ್ವದ ಕೆಲವು ದೇಶಗಳಿಗೆ ಶಾಕ್ ಸಹ ಕೊಟ್ಟಿದ್ದಾರೆ. ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ 80ಕ್ಕೂ ಹೆಚ್ಚು ಕಡತಗಳಿಗೆ ಸಹಿ ಹಾಕಿದ್ದಾರೆ. ಈ ಸಮಾರಂಭಕ್ಕೆ ಭಾರತದ ಗಣ್ಯರು ಹಾಗೂ ರಾಜಕಾರಣಿಗಳನ್ನು ಸಹ ಆಹ್ವಾನಿಸಲಾಗಿತ್ತು. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಸಮಾರಂಭದಲ್ಲಿ ಮೊದಲ ಸ್ಥಾನದಲ್ಲೇ ಆಸನ ವ್ಯವಸ್ಥೆ ಮಾಡಲಾಗಿತ್ತು.
ಈ ಸಮಾರಂಭಕ್ಕೆ ಭಾರೀ ಬಂದೋಬಸ್ತ್ ಹಾಗೂ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಆದರೆ, ಇಂತಹ ಅಂತರರಾಷ್ಟ್ರೀಯ ಮಟ್ಟದ ಸಮಾರಂಭದಲ್ಲಿ ಭಾರತದ ವಿರೋಧಿ ಚಟುವಟಿಕೆ ನಡೆದಿದ್ದು. ವಿಡಿಯೋ ವೈರಲ್ ಆಗಿದೆ. ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಖಾಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ "ಖಾಲಿಸ್ತಾನ್ ಜಿಂದಾಬಾದ್" ಕೂಗಿದ್ದಾನೆ ಎಂದು ಹೇಳಲಾಗಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾವಿರಾರು ಜನ ಸೇರಿದ್ದ ಈ ಸಮಾರಂಭದಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ಕಾಣಿಸಿಕೊಂಡಿದ್ದು. ಈ ಅನಿರೀಕ್ಷಿತ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಸಿಖ್ ಫಾರ್ ಜಸ್ಟಿಸ್ ಜನರಲ್ ಕೌನ್ಸಿಲ್ ಸಂಘಟನೆಯ ಪನ್ನುನ್ ಈ ಕಾರ್ಯಕ್ರಮಕ್ಕೆ ಹೇಗೆ ಟಿಕೆಟ್ ಪಡೆದುಕೊಂಡ ಎನ್ನುವುದೇ ಈಗ ಇರುವ ಕುತೂಹಲವಾಗಿದೆ. ಅಲ್ಲದೆ ಈ ಘಟನೆಯ ಬಗ್ಗೆ ಅಮೆರಿಕ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂದು ಸಹ ಭಾರತ ಕಾಯುತ್ತಿದೆ.
ವಿಶೇಷ ಅತಿಥಿ ?
ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಯುಎಸ್‌ಎ ಜಿಂದಾಬಾದ್ ಎನ್ನುವಂತಹ ಘೋಷಣೆಗಳನ್ನು ಅಮೆರಿಕನ್ನರು ಕೂಗಿದ್ದರು. ಇದೇ ಸಂದರ್ಭದಲ್ಲಿ ಖಾಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ "ಖಾಲಿಸ್ತಾನ್ ಜಿಂದಾಬಾದ್" ಎಂದಿದ್ದಾನೆ. ಆತ ತನ್ನ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್ ಅವರ ಅಧಿಕೃತ ಉದ್ಘಾಟನೆಯ (ದಿ ಲಿಬರ್ಟಿ ಬಾಲ್) ಸಮಾರಂಭದ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದೆ ಎಂದು ಹೇಳಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಭಾರತದಲ್ಲಿ ಬಾಂಬ್ ದಾಳಿಗಳನ್ನು ನಡೆಸುವುದಾಗಿ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದ. ಅಲ್ಲದೆ ಭಾರತದ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ವ್ಯಕ್ತಿ ಇಂತಹ ದೊಡ್ಡ ಸಮಾರಂಭದಲ್ಲಿ ಭಾಗವಹಿಸಿದ್ದು ಹೇಗೆ ಎನ್ನುವ ಕುತೂಹಲ ಎದುರಾಗಿದೆ. ಅಲ್ಲದೆ ಈತ ಅಮೆರಿಕ ಹಾಗೂ ಕೆನಡಾದಲ್ಲಿ ದ್ವಿಪೌರತ್ವವನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ.












Click it and Unblock the Notifications