ಬ್ರಿಟನ್ : ದಾಖಲೆ ಸಂಖ್ಯೆಯಲ್ಲಿ ಭಾರತ ಮೂಲದವರಿಗೆ ಗೆಲುವು
ಲಂಡನ್, ಮೇ 9: ಕನ್ಸರ್ವೇಟಿವ್ ಪಕ್ಷದ ಡೇವಿಡ್ ಕ್ಯಾಮರೂನ್ ಮತ್ತೊಂದು ಅವಧಿಗೆ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಈ ನಡುವೆ ಬ್ರಿಟನ್ ಸಂಸತ್ತಿಗೆ ದಾಖಲೆ ಸಂಖ್ಯೆಯಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಹಿರಿಯ ಸಂಸದ ಕೀತ್ ವಾಜ್ ಹಾಗೂ ಇನ್ಫಿ ಮೂರ್ತಿ ಅಳಿಯ ರಿಷಿ ಪ್ರಮುಖರಾಗಿದ್ದಾರೆ.
ಒಟ್ಟು 10 ಮಂದಿ ಭಾರತೀಯ ಮೂಲದವರು ಬ್ರಿಟನ್‌ನ ಸಂಸತ್ತಿಗೆ ಶುಕ್ರವಾರ ಆಯ್ಕೆಯಾಗಿದ್ದಾರೆ. ದೀರ್ಘ ಕಾಲದಿಂದ ಲೇಬರ್ ಪಕ್ಷದ ಸಂಸದರಾಗಿರುವ ಕೀತ್ ವಾಜ್ (ಲಿಸೆಸ್ಟರ್ ಈಸ್ಟ್) ಮತ್ತು ವೀರೇಂದ್ರ ಶರ್ಮಾ (ಇಲಿಂಗ್ ಸೌಥ್‌ಹಾಲ್) ತಮ್ಮ ಕ್ಷೇತ್ರಗಳಿಂದ ಪುನರಾಯ್ಕೆಯಾಗಿದ್ದಾರೆ. ಉಳಿದಂತೆ ಲೇಬರ್‌ನ ವಲೇರಿ ವಾಜ್ (ವಲ್‌ಶಲ್‌ಲ್ ಸೌಥ್) ಮತ್ತು ಸೀಮಾ ಮಲ್ಹೋತ್ರಾ (ಸೌತ್ ವೆಸ್ಟ್ ಲಂಡನ್) ಸ್ಥಾನಗಳಿಂದ ಗೆಲುವು ಸಾಸಿದ್ದಾರೆ.[ಚುನಾವಣೆ ಗೆದ್ದ ರಿಷಿ, ಮಾವ ಇನ್ಫಿ ಮೂರ್ತಿ ಖುಷ್!]

ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದಿಂದ ಸ್ಪರ್ಧಿಸಿದ್ದ ಪ್ರೀತಿ ಪಟೇಲ್ ಅವರು ವಿಥೇಮ್ ಕ್ಷೇತ್ರದಿಂದ 27,123 ಮತಗಳಿಸಿ ಪುನರಾಯ್ಕೆಗೊಂಡಿದ್ದಾರೆ. ಇನ್ಫೋಸಿಸ್ ನ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಉತ್ತರ ಇಂಗ್ಲೆಂಡ್‌ನ ರಿಚ್ಮಂಡ್ (ಯಾರ್ಕ್) ಸ್ಥಾನದಿಂದ ಸುಲಭವಾಗಿ ಜಯ ಗಳಿಸಿ ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸುತ್ತಿದ್ದಾರೆ.
Here's to a brighter future for everyone. pic.twitter.com/EeN0YFAvBm
— David Cameron (@David_Cameron) May 8, 2015 ಅಲೋಕ್ ಶರ್ಮಾ (ರೀಡಿಂಗ್ ವೆಸ್ಟ್), ಶೈಲೇಶ್ ವರ (ಕೇಂಬ್ರಿಜ್ಡ್‌ಶೈರ್ ನಾರ್ಥ್‌ವೆಸ್ಟ್), ಸುಯೆಲ್ಲಾ ಫರ್ನಾಂಡೀಸ್ (ಫರೇಹ್ಯಾಮ್), ಲಿಸಾ ನಂದಿ (ವಿಗಾನ್) ಕೂಡ ಜಯ ಸಾಸಿದ್ದಾರೆ. ಸುಯೆಲ್ಲಾ ಕನ್ಸರ್ವೇಟಿವ್ ಪಕ್ಷದಿಂದ ಹಾಗೂ ಲಿಸಾ ಲೇಬರ್ ಪಕ್ಷದಿಂದ ಮೊದಲ ಬಾರಿಗೆ ಹೌಸ್ ಆಫ್ ಕಾಮನ್ಸ್ ಪ್ರವೇಶಿಸಿದ್ದಾರೆ. [ವಿಶ್ವದ ಪುರಾತನದ ಸಂಸತ್ತಿಗೆ 20 ವರ್ಷದ 'ಬೇಬಿ' ಎಂಟ್ರಿ!]
ಡೇವಿಡ್ ಕ್ಯಾಮರೂನ್ ಅವರ ಕನ್ಸರ್ವೇಟಿವ್ ಪಾರ್ಟಿಯಲ್ಲಿ ಒಟ್ಟಾರೆ 17ಕ್ಕೂ ಅಧಿಕ ಭಾರತೀಯ ಮೂಲದ ವ್ಯಕ್ತಿಗಳು ಈ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಲೇಬರ್ ಪಾರ್ಟಿಯಿಂದ 14 ಮಂದಿ ಭಾರತೀಯ ಮೂಲದವರಿದ್ದಾರೆ. ಒಟ್ಟಾರೆ 7,00,000 ಮತಗಳು ಭಾರತೀಯ ಮೂಲದವರಿಂದ ಚಲಾಯಿಸಲ್ಪಟ್ಟಿದೆ.(ಪಿಟಿಐ)












Click it and Unblock the Notifications