32 ಹಲ್ಲುಗಳೊಂದಿಗಿದೆ ಜನಿಸಿದ ಅಪರೂಪದ ಮಗು.!- ಹೇಗೆ ಸಾಧ್ಯೆ ಇಲ್ಲಿದೆ ವೈರಲ್ ವಿಡಿಯೋ
ಸಾಮಾನ್ಯವಾಗಿ ಜನಿಸಿದ ಮಗುವಿಗೆ 9 ತಿಂಗಳು ಅಥವಾ ಕೆಲವರಿಗೆ ಬೆಳವಣಿಗೆ ಮೇಲೆ 10, 11 ಅಥವಾ ಒಂದು ವರ್ಷಗಳ ಬಳಿಕ ಒಂದರಿಂದ ಮೂರು ಹಲ್ಲುಗಳನ್ನು ಬರುತ್ತದೆ. ಆದರೆ ವಿಚಿತ್ರ ಎಂಬಂತೆ ಇಲ್ಲೊಬ್ಬ ಮಗು 32 ಹಲ್ಲುಗಳೊಂದಿಗೆ ಹೊಟ್ಟಿದ್ದು, ಈ ಮಗುವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಗು ಹುಟ್ಟಿದ ಹಲವು ವರ್ಷಗಳು ಕಳೆದ ಬಳಿಕ ಆ ಮಗುವಿಗೆ ಸಂಪರ್ಣವಾಗಿ ಹಲ್ಲುಗಳು ಬರುತ್ತವೆ. ಆದರೆ ಇಲ್ಲೊಂದು ಮಗು 32 ಹಲ್ಲುಗಳೊಂದಿಗೆ ಜನಿಸಿದ್ದು, ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ. ಅಮೆರಿಕದ ಮಹಿಳೆಯೊಬ್ಬರು ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ಬಹಳ ಅಪರೂಪದ ಘಟನೆ ಎಂದು ವೈದ್ಯರು ತಿಳಿಸಿದ್ದಾರೆ.

ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸಿಸುತ್ತಿರುವ ನಿಕಾ ದಿವಾ ಎಂಬ ಮಹಿಳೆ ತನ್ನ ನವಜಾತ ಶಿಶುವಿನ ಅಪರೂಪದ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಟಿಕ್‌ಟಾಕ್‌ನ ಸಹಾಯವನ್ನು ತೆಗೆದುಕೊಂಡಿದ್ದಾರೆ. ಮಗು ಜನಿಸುವಾಗಲೇ 32 ಹಲ್ಲುಗಳನ್ನು ಹೊಂದಿದ್ದು, ಈ ಬಗ್ಗೆ ಮಗುವಿನ ತಾಯಿ ಟಿಕ್‌ಟಾಕ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಇದು ಭಾರೀ ವೈರಲ್ ಆಗುತ್ತಿದೆ.
ಇನ್ನಯ ತನ್ನ ಮಗಳನ್ನು ಮೊದಲ ಬಾರಿಗೆ ನೋಡಿದಾಗ ಬಾಯಿಯಲ್ಲಿ ಎಲ್ಲಾ ಹಲ್ಲುಗಳನ್ನು ನೋಡಿ ಆಘಾತಕ್ಕೊಳಗಾಗಿದ್ದೆ ಅಂತಲೂ ತಾಯಿ ಹೇಳಿಕೊಂಡಿದ್ದಾಳೆ. @ika.diwa ಅವರ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ಈ ವೀಡಿಯೋ ಭಾರೀ ಸದ್ದು ಮಾಡುತ್ತಿದೆ.
ಭಾರೀ ವೈರಲ್: ಯುವತಿಯೊಬ್ಬಳು ಮುಂಬೈನಲ್ಲಿ ಚಲಿಸುವ ಲೋಕಲ್ ರೈಲಿನೊಳಗೆ ಜೋರಾಗಿ ಡ್ಯಾನ್ಸ್ ಮಾಡುವ ಮೂಲಕ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಅಲ್ಲದೆ, ಲೋಕಲ್ ಟ್ರೈನ್‌ನೊಳಗೂ ಕೂಡ ಯುವತಿಯೊಬ್ಬಳು ಭೋಜ್‌ಪುರಿ ನೃತ್ಯ ಮಾಡಿದ್ದು, ಈ ವೀಡಿಯೊಗಳು ಸಾಜಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಸದ್ಯ ಈ ವಿಚಾರ ಭಾರೀ ಟ್ರೆಂಡಿಂಗ್‌ನಲ್ಲಿದೆ. ಇನ್ನು ಈ ವಿಡಿಯೋವನ್ನು ಮುಂಬೈ ಮ್ಯಾಟರ್ಸ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳು ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಳು. ಹಾಗೆಯೇ ಇದೀಗ ಮುಂಬೈ ಲೋಕಲ್ಸ್ ಎಕ್ಸ್‌ಪ್ರೆಸ್ ಟ್ರೈನ್‌ನಲ್ಲಿ ಈ ಘಟನೆ ಮತ್ತ ಮರುಕಳಿಸಿದೆ. ಇನ್ನು ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ರೈಲಿನಲ್ಲಿ ರೀಲ್ಸ್ ಮಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ ಮಹಿಳೆಯ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಮುಂಬೈ ಪೊಲೀಸರಿಗೆ ಆಹ್ರಹಿಸಿದ್ದಾರೆ.












Click it and Unblock the Notifications