ಟಾಯ್ಲೆಟ್‌ನಲ್ಲಿ ಖಾಸಗಿ ಅಂಗಕ್ಕೆ ಕಚ್ಚಿದ ಹೆಬ್ಬಾವು; ಆ ಮೇಲೆ ನಡೆದಿದ್ದು ಅವಾಂತರ
ಬೆಂಗಳೂರು, ಆಗಸ್ಟ್ 22: ಥಾಯ್ಲೆಂಡ್ ಎಂದಾಕ್ಷಣ ಎಲ್ಲರ ಗಮನ ಮಸಾಜ್ ಕಡೆಗೆ ವಾಲುತ್ತದೆ. ಆದರೆ ಇದೇ ಥಾಯ್ಲೆಂಡ್‌ನಲ್ಲಿ ಈಗ ದೊಡ್ಡ ಅವಾಂತರವೇ ನಡೆದು ಹೋಗಿದೆ. ಬರೋಬ್ಬರಿ 12 ಅಡಿ ಉದ್ದದ ಬೃಹದಾಕಾರದ ಹೆಬ್ಬಾವು ವ್ಯಕ್ತಿಯೊಬ್ಬರಿಗೆ ಕಚ್ಚಬಾರದ ಜಾಗಕ್ಕೆ ಕಚ್ಚಿದೆ. ಕೊನೆಗೆ ಕಡಿತಕ್ಕೊಳಗಾದ ವ್ಯಕ್ತಿಯಿಂದಲೇ ಜೀವ ಬಿಟ್ಟಿದೆ.
ಹೌದು, ಥಾಯ್ಲೆಂಡ್‌ನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಮಳೆಗಾಲ ಆಗಿರುವ ಕಾರಣ ಹಾವೊಂದು ನೇರವಾಗಿ ಟಾಯ್ಲೆಟ್ ಪ್ರವೇಶಿಸಿ, ಕಮೋಡ್ ಒಳಗೆ ಅಡಗಿಕೊಂಡಿದೆ. ವ್ಯಕ್ತಿಯೊಬ್ಬ ಎಂದಿನಂತೆ ತನ್ನ ನಿತ್ಯಕರ್ಮಕ್ಕಾಗಿ ಟಾಯ್ಲೆಟ್‌ಗೆ ಬಂದು ಕೂತಿದ್ದ. ಕೆಲವೇ ಕ್ಷಣಗಳಲ್ಲಿ ಆತನಿಗೆ ಇದಕ್ಕಿದ್ದಂತೆ ತನ್ನ ವೃಷಣಗಳ (testicles) ಬಳಿ ಭಾರಿ ಪ್ರಮಾಣದ ನೋವು ಕಾಣಿಸಿಕೊಂಡಿದೆ. ಏನೆಂದು ನೋಡುವಷ್ಟರಲ್ಲಿ ಕಮೋಡ್‌ನಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಆದರೂ ಹೆದರದ ಭೂಪ ಕೂಡಲೇ ಹೆಬ್ಬಾವನ್ನು ಸೆರೆ ಹಿಡಿದು ಕೈಯಾರೆ ಕೊಂದಿದ್ದಾನೆ.

ಹಾವು ಕಡಿತಕ್ಕೊಳಗಾದ ವ್ಯಕ್ತಿಯ ಹೆಸರು ಥಾನತ್ ತಾಂಗ್ತೆವಾನಾನ್. ಈ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಖುದ್ದು ಈತನೇ ವಿವರಿಸಿದ್ದಾನೆ. ʼನಾನು ಪ್ರತಿದಿನವೂ ಟಾಯ್ಲೆಟ್‌ಗೆ ಹೋಗುವ ಮುನ್ನ ಫ್ಲಶ್ ಮಾಡುತ್ತೇನೆ. ಈ ದಿನವೂ ಎಂದಿನಂತೆಯೇ ಫ್ಲಶ್ ಮಾಡಿ ಕುಳಿತೆ. ಆಗ ಅಲ್ಲಿ ಹಾವು ಅಡಗಿರುವ ಬಗ್ಗೆ ನನಗೆ ಸುಳಿವೇ ಸಿಗಲಿಲ್ಲ. ಬಳಿಕ ಎಂದಿನಂತೆ ನಿತ್ಯಕರ್ಮಕ್ಕೆ ಕುಳಿತೆ. ಕೆಲ ನಿಮಿಷಗಳ ನಂತರ ನನ್ನ ವೃಷಣಗಳ ಬಳಿ ಏನೋ ಕಚ್ಚಿದ ರೀತಿಯಲ್ಲಿ ನೋವು ಕಾಣಿಸಿಕೊಂಡಿತು. ಕೂಡಲೇ ಏನಿರಬಹುದು ಎಂದು ನೋಡಿದರೆ, ಟಾಯ್ಲೆಟ್ ಒಳಗೆ ಹೆಬ್ಬಾವು ಬುಸುಗುಡುತ್ತಿತ್ತುʼ ಎಂದು ಥಾನತ್ ವಿವರಿಸಿದ್ದಾರೆ.
The man is courageous and a hero saving his life
— Winnie Schola (@WinnieSchola) August 21, 2024
In Thailand, a man was bitten on the testicles by a snake that had entered his toilet due to the rainy season.
While using the toilet, he felt the snake bite him and immediately got up to yank the snake off his body. pic.twitter.com/H7Kk8kSJUx
ʼನಾನು ಕೂಡಲೇ ಹಾವಿನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದೆ. ಅದನ್ನು ಟಾಯ್ಲೆಟ್‌ನಿಂದ ಹೊರತೆಗೆಯಲು ಪ್ರಯತ್ನಿಸಿದೆ. ಆದರೆ, ಹಾವು ತುಂಬಾ ಬಲಶಾಲಿಯಾಗಿತ್ತು, ಹಾಗಾಗಿ ಅದು ಹೊರಬರಲೇ ಇಲ್ಲ. ಕೊನೆಗೆ ನನ್ನ ಸಿಟ್ಟು ನೆತ್ತಿಗೇರಿತ್ತು. ಟಾಯ್ಲೆಟ್‌ನಲ್ಲಿದ್ದ ಬ್ರಷ್‌ನಿಂದ ಹೆಬ್ಬಾವಿಗೆ ಬಲವಾಗಿ ಹೊಡೆಯಲಾರಂಭಿಸಿದೆ. ಆ ನಂತರ ಹಾವು ಹೊರಬಂತು. ಹಾವು ಸಾಯುವವರೆಗೂ ನಾನು ಹೊಡೆಯುತ್ತಲೇ ಇದ್ದೆ. ನನ್ನ ಹೊಡೆತಕ್ಕೆ ಹಾವು ಕೊನೆಗೂ ಜೀವ ಬಿಟ್ಟಿತುʼ.
ʼಬಳಿಕ ಅಲ್ಲಿದ್ದ ಸೆಕ್ಯುರಿಟಿಗೆ ಕರೆ ಮಾಡಿ ಈ ಹಾವನ್ನು ತೆಗೆದುಕೊಂಡು ಹೋಗಲು ಸೂಚಿಸಿದೆ. ತಕ್ಷಣವೇ ನಾನು ನೆರೆಹೊರೆಯವರ ನೆರವಿನಿಂದ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದೆ. ಅದೃಷ್ಟವಶಾತ್ ನನಗೆ ಯಾವುದೇ ಅಪಾಯ ಸಂಭವಿಸಲಿಲ್ಲ. ಸದ್ಯ ನಾನು ಕ್ಷೇಮವಾಗಿದ್ದೇನೆ, ನನ್ನ ವೃಷಣಗಳಿಗೂ ಯಾವುದೇ ಹಾನಿಯಾಗಿಲ್ಲʼ ಎಂದು ಥಾನತ್ ಬರೆದುಕೊಂಡಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೊಗಳನ್ನು ಕೂಡ ಈತ ಹಂಚಿಕೊಂಡಿದ್ದು, ಇದನ್ನು ಕಂಡ ನೆಟ್ಟಿಗರು ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದಾರೆ.

ವೃಷಣಕ್ಕೆ ಕಚ್ಚಿ ಇಷ್ಟೆಲ್ಲ ಅವಾಂತರವಾದರೂ ನಿನ್ನ ಜೀವ ಉಳಿದಿದ್ದೇ ಹೆಚ್ಚು. ಟಾಯ್ಲೆಟ್‌ಗೆ ಹೋಗುವ ಮುನ್ನ ಜೋಪಾನ. ಇನ್ನು ಮುಂದೆ ಟಾಯ್ಲೆಟ್‌ಗೆ ಹೋಗುವಾಗ ಪರಿಶೀಲಿಸಿ, ಕುಳಿತುಕೊಳ್ಳಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications