• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಂಡನ್‌ನಲ್ಲಿ ಕೊರೊನಾ ಗೆದ್ದ ಭಾರತ ಮೂಲದ 98 ವರ್ಷದ ಮಹಿಳೆ

|

ಲಂಡನ್, ಏಪ್ರಿಲ್ 9: ಅರವತ್ತು ವರ್ಷ ದಾಟಿದವರು ಕೊರೊನಾದಿಂದ ಬದುಕುಳಿಯುವುದು ಕಷ್ಟವೆಂದು ವೈದ್ಯರು ಹೇಳುತ್ತಿರುವ ಹೊತ್ತಿನಲ್ಲೇ 98 ವರ್ಷದ ಮಹಿಳೆ ಕೊರೊನಾ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

      ಕಣ್ಣಿಗೆ ಕಾಣ್ತಿರೋ ವೈದ್ಯರಿಗೆ ಪೊಲೀಸರಿಗೆ ಗೌರವ ಕೊಡಿ | Oneindia Kannada

      ಸ್ಕಾಟ್ಲೆಂಡ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ 98 ವರ್ಷದ ವೃದ್ಧೆಯೊಬ್ಬರು ಮಹಾಮಾರಿ ಕೊರೋನಾ ವೈರಸ್ ಗೆದ್ದುಬಂದಿದ್ದು, ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಕುಟುಂಬದವರಿಗೆ ಅಚ್ಚರಿ ತಂದಿದೆ.

      ಕೊರೊನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ

      ಜುಲೈನಲ್ಲಿ 99ನೇ ವರ್ಷಕ್ಕೆ ಕಾಲಿಡುತ್ತಿರುವ ದಾಫ್ನೆ ಶಾ ಎಂಬ ಮಹಿಳೆ ಕಳೆದ ಗುರುವಾರ ತೀವ್ರ ಜ್ವರ ಹಾಗೂ ನಿರಂತರ ಕೆಮ್ಮು ಮತ್ತು ಉಸಿರಾಟದ ತೊಂದರೆಗಳಿಂದ ದುಂಡಿಯ ನೈನ್‌ವೆಲ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

      ಈ ವೃದ್ಧೆಗೆ ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಕೊವಿಡ್-19 ಪರೀಕ್ಷೆ ಮಾಡಲಾಗಿದ್ದು, ಪಾಸಿಟಿವ್ ದೃಢಪಟ್ಟಿತ್ತು. ಆದರೆ ಆಸ್ಪತ್ರೆಗೆ ದಾಖಲಾಗಿ ಕೆಲವೇ ದಿನಗಳಲ್ಲಿ ಈ ಮಹಿಳೆ ಸಂಪೂರ್ಣ ಗುಣಮುಖಳಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

      ನನ್ನ ಮಗ ಈಗ ನನ್ನನ್ನು ನೋಡಿಕೊಳ್ಳುತ್ತಿದ್ದಾನೆ. ನಾನು ಈಗ ಚೆನ್ನಾಗಿದ್ದೇನೆ ಎಂದು ಭಾವಿಸುತ್ತಿದ್ದೇನೆ, ಆದರೆ ನಾನು ತುಂಬಾ ಚೆನ್ನಾಗಿದ್ದೇನೆ ಎಂದು ಹೇಳಲು ಬಯಸುವುದಿಲ್ಲ.

      ಜುಲೈನಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಸುವುದು ಒಂದು ಉತ್ತಮ ಉಪಾಯವೆಂದು ತೋರುತ್ತದೆ ಎಂದು ಕೊಚ್ಚಿ ಮೂಲದ ದಾಫ್ನೆ ಶಾ ಅವರು ಸ್ಥಳೀಯ ಡುಂಡಿ ಕೊರಿಯರ್ ಪತ್ರಿಕೆಗೆ ತಿಳಿಸಿದ್ದಾರೆ.

      ಕೊರೊನಾ ವೈರಸ್ ಅಪ್‌ಡೇಟ್ ಪತ್ರಿಕಾಗೋಷ್ಠಿಯಲ್ಲಿ ಸ್ಕಾಟ್ಲೆಂಡ್‌ನ ಪ್ರಥಮ ಮಂತ್ರಿ ನಿಕೋಲಾ ಸ್ಟರ್ಜನ್ ಅವರು ಶಾ ಅವರ ಕೊರೋನಾ ಗೆದ್ದುಬಂದಿರುವುದನ್ನು ಉಲ್ಲೇಖಿಸಿದ್ದು, ಇದು ಈ ವಾರದ ಸ್ಫೂರ್ತಿದಾಯಕ ಸುದ್ದಿ ಎಂದಿದ್ದಾರೆ.

      English summary
      A 98-year-old Indian-origin woman has pleasantly surprised her doctors and family after beating Covid-19 to return to her home in Scotland within days of her hospital admission.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X