ಟ್ವಿಟರ್‌ನಿಂದ ಹೊರನಡೆದ ಟಾಪ್‌ 625 ಜಾಹೀರಾತುದಾರರು: ವರದಿ

2022 ರ ಸೆಪ್ಟೆಂಬರ್‌ನಲ್ಲಿ Twitter ನ ಅಗ್ರ 1,000 ಜಾಹೀರಾತುದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಟ್ವಿಟರ್‌ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ನ್ಯೂಯಾರ್ಕ್‌: 2022 ರ ಸೆಪ್ಟೆಂಬರ್‌ನಲ್ಲಿ Twitter ನ ಅಗ್ರ 1,000 ಜಾಹೀರಾತುದಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಟ್ವಿಟರ್‌ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಜನವರಿಯ ಮೊದಲ ವಾರಗಳಿಂದ ಗಮನಿಸಿದರೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 625 ಜಾಹೀರಾತುದಾರರು ಯಾವುದೇ ಜಾಹೀರಾತನ್ನು ನೀಡುತ್ತಿಲ್ಲ. ಜಾಹೀರಾತುದಾರರ ನಿರ್ಗಮನದ ವಿಚಾರವನ್ನು ಡಿಜಿಟಲ್ ಮಾರ್ಕೆಟಿಂಗ್ ವಿಶ್ಲೇಷಣಾ ಕಂಪನಿ Pathmatics ಹೊರಹಾಕಿದೆ. ಈ ಡೇಟಾವನ್ನುಉಲ್ಲೇಖಿಸಿ CNN ವರದಿ ಮಾಡಿದೆ.

ಈ ವರ್ಷದ ಜನವರಿ 25 ರವರೆಗಿನ ಡೇಟಾದ ಆಧಾರದ ಮೇಲೆ Pathmatics ನ ಅಂದಾಜಿನ ಪ್ರಕಾರ, ಕೋಕಾ-ಕೋಲಾ, ಯೂನಿಲಿವರ್, ಜೀಪ್, ವೆಲ್ಸ್ ಫಾರ್ಗೋ ಮತ್ತು ಮರ್ಕ್‌ನಂತಹ ಕಂಪನಿಗಳು ಸೇರಿದಂತೆ ಟಾಪ್ 1,000 ಟ್ವಿಟರ್ ಜಾಹೀರಾತುದಾರರಲ್ಲಿ 625 ಜನರು ಜಾಹೀರಾತುಗಳನ್ನು ಕೊಡುವುದನ್ನು ನಿಲ್ಲಿಸಿದ್ದಾರೆ. ಇದು ಅಕ್ಟೋಬರ್‌ನಿಂದ ಜನವರಿ 25 ರವರೆಗೆ 60 ಪ್ರತಿಶತ ಆದಾಯದ ಇಳಿಕೆಗೆ ಕಾರಣವಾಯಿತು. ಸುಮಾರು $127 ಮಿಲಿಯನ್‌ನಿಂದ $48 ಮಿಲಿಯನ್‌ಗೆ ಟ್ವಿಟರ್‌ ಆದಾಯ ಬಂದುನಿಂತಿದೆ.

ಬಿಲಿಯನೇರ್ ಎಲಾನ್‌ ಮಸ್ಕ್ ಅಕ್ಟೋಬರ್ ಅಂತ್ಯದಲ್ಲಿ ಕಂಪನಿಯ ಸ್ವಾಧೀನವನ್ನು ಮಾಡಿಕೊಂಡ ನಂತರ ಜಾಹೀರಾತುದಾರರು ವೇದಿಕೆಯ ಭದ್ರತೆ ಮತ್ತು ಕಾರ್ಯಸಾಧ್ಯತೆಯ ಬಗ್ಗೆ ಚಿಂತಿಸಲಾರಂಭಿಸಿದರು ಎಂದು ವರದಿಯಾಗಿದೆ. 'ನವೆಂಬರ್ 2022 ರ ಆರಂಭದಲ್ಲಿ ಟ್ವಿಟರ್ ಭಾರಿ ಆದಾಯದ ಕುಸಿತವನ್ನು ಅನುಭವಿಸಿದೆ' ಮಸ್ಕ್ ಹೇಳಿದ್ದಾರೆ.

625 Of Top 1000 Twitter Advertisers Stopped Spending On Platform: Report

ಸಿಎನ್‌ಎನ್ ಪ್ರಕಾರ, ಮಸ್ಕ್ ಈಗ ಜಾಹೀರಾತುದಾರರನ್ನು ಪ್ಲಾಟ್‌ಫಾರ್ಮ್‌ಗೆ ಮರಳಿ ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ. ವರದಿಗಳ ಪ್ರಕಾರ, ಪ್ಲಾಟ್‌ಫಾರ್ಮ್ ಜಾಹೀರಾತುದಾರರಿಗೆ 'ಫೈರ್ ಸೇಲ್' 'ಸೂಪರ್ ಬೌಲ್' ಒಪ್ಪಂದಕ್ಕೆ ಮನವಿ ಮಾಡಿದೆ.

625 Of Top 1000 Twitter Advertisers Stopped Spending On Platform: Report

CNN ಪ್ರಕಾರ, HBO ಸೆಪ್ಟೆಂಬರ್‌ನಲ್ಲಿ ಟ್ವಿಟರ್‌ನ ಅಗ್ರ ಜಾಹೀರಾತುದಾರರಾಗಿದ್ದು, ಜಾಹೀರಾತುಗಳಿಗಾಗಿ $12 ಮಿಲಿಯನ್ (ರೂ. 99 ಕೋಟಿ) ಖರ್ಚು ಮಾಡಿದೆ. ಆದರೆ ಜನವರಿ 25 ರ ಹೊತ್ತಿಗೆ ಅದು $54,000 (ರೂ. 44 ಲಕ್ಷ) ಕ್ಕಿಂತ ಸ್ವಲ್ಪ ಹೆಚ್ಚು ಖರ್ಚು ಮಾಡಿದೆ.

ಇಎಸ್‌ಪಿಎನ್, ಸೇಲ್ಸ್‌ಫೋರ್ಸ್ ಮತ್ತು ಆಪಲ್‌ನಂತಹ ಕಂಪನಿಗಳು ಮಸ್ಕ್ ಕಂಪನಿಯನ್ನು ಖರೀದಿಸುವ ಮೊದಲು ತಿಂಗಳಿಗಿಂತ ಜನವರಿಯಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಹಣವನ್ನು ಖರ್ಚು ಮಾಡಿದ್ದನ್ನು ಗಮನಿಸಬಹುದು.

625 Of Top 1000 Twitter Advertisers Stopped Spending On Platform: Report

ಇತ್ತೀಚೆಗೆ, ಟ್ವಿಟರ್‌ನ ಸಿಇಒ ಅವರು ಟ್ವಿಟರ್ ಅನ್ನು ದಿವಾಳಿತನದಿಂದ ಉಳಿಸಲು ಕಷ್ಟಪಡುತ್ತಿದ್ದ ಕಾರಣ ಕಳೆದ 'ಮೂರು ತಿಂಗಳುಗಳು ಅತ್ಯಂತ ಕಠಿಣವಾಗಿದ್ದವು' ಎಂದು ತಿಳಿಸಿದ್ದರು. 'ಟ್ವಿಟ್ಟರ್ ಇನ್ನೂ ಸವಾಲುಗಳನ್ನು ಹೊಂದಿದೆ, ಸಾರ್ವಜನಿಕ ಬೆಂಬಲದ ಅಗತ್ಯತೆ ಇದೆ' ಎಂದು ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+