ಫಿಲಿಪೈನ್ಸ್ 6.4 ತೀವ್ರತೆಯ ಭೂಕಂಪ
ಮನೀಲ, ಆಗಸ್ಟ್ 18 : ಫಿಲಿಪೈನ್ಸ್‌ನ ಮನೀಲ ಬಳಿ 6.4 ತೀವ್ರತೆಯ ಭೂಕಂಪ ಉಂಟಾಗಿದೆ. ಭೂಕಂಪದಿಂದಾಗಿ ಯಾವುದೇ ಹಾನಿ ಉಂಟಾದ ಬಗ್ಗೆ ಇದುವರೆಗೂ ಮಾಹಿತಿ ಸಿಕ್ಕಿಲ್ಲ.
ಮಂಗಳವಾರ ಬೆಳಗ್ಗೆ ಭಾರತೀಯ ಕಾಲಮಾನ 5.33ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಕಂಪನ ದಾಖಲಾಗಿದೆ ಎಂದು ಹೇಳಿದೆ.

ಭೂಮಿಯಿಂದ 124 ಅಡಿ ಆಳದಲ್ಲಿ 10 ಕಿ. ಮೀ.ಗಳ ತನಕ ಕಂಪನ ಉಂಟಾಗಿದೆ ಎಂದು ತಿಳಿದುಬಂದಿದೆ. ಆದರೆ, ಭೂಕಂಪದಿಂದಾಗಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.












Click it and Unblock the Notifications