ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪನಾಮ- ಕೋಸ್ಟರಿಕಾ ಗಡಿಯಲ್ಲಿ 6.3ರಷ್ಟು ತೀವ್ರತೆಯ ಭೂಕಂಪ

By ಅನಿಲ್ ಆಚಾರ್
|
Google Oneindia Kannada News

6.3ರಷ್ಟು ತೀವ್ರತೆಯ ಭೂಕಂಪವು ಪನಾಮ- ಕೋಸ್ಟರಿಕಾ ಗಡಿಯಲ್ಲಿ ಮಂಗಳವಾರ ಮಧ್ಯರಾತ್ರಿ ಹೊತ್ತು ಸಂಭವಿಸಿದೆ ಎಂದು ಯುಎಸ್ ಭೂ ಸರ್ವೇಕ್ಷಣಾ ಸರ್ವೇ ತಿಳಿಸಿದೆ. ಈ ಪ್ರಮಾಣದಲ್ಲಿ ಭೂಕಂಪ ಆದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿ ಹಾಗೂ ಸಾವು-ನೋವು ತಂದೊಡ್ಡುವ ಸಾಮರ್ಥ್ಯ ಈ ಭೂ ಕಂಪನಕ್ಕೆ ಇದೆ ಎಂದು ಹೇಳಲಾಗಿದೆ.

ಪನಾಮದ ಪ್ರೊಗ್ರೆಸೊ ಎರಡು ಕಿ.ಮೀ. ಸಮೀಪದಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ತಕ್ಷಣಕ್ಕೆ ಯಾವುದೇ ಹಾನಿ ಅಥವಾ ಸಾವು- ನೋವಿನ ಮಾಹಿತಿ ಹೊರಬಂದಿಲ್ಲ. ಆದರೆ ಈ ಬಗ್ಗೆ ಯುಎಸ್ ಭೂ ಸರ್ವೇಕ್ಷಣಾ ಸರ್ವೇ ವೆಬ್ ಸೈಟ್ ತಿಳಿಸಿರುವ ಪ್ರಕಾರ, ಈ ಹಿಂದಿನ ಇಷ್ಟು ಪ್ರಮಾಣದ ಜಾಗ್ರತೆಯನ್ನು ಗಮನದಲ್ಲಿಟ್ಟು ಹೇಳಬೇಕು ಅಂದರೆ, ರಾಷ್ಟ್ರ ಮಟ್ಟದಲ್ಲಿ ಎಚ್ಚರಿಕೆ ಅಗತ್ಯ ಇದೆ.

ಇಂಡೋನೇಷ್ಯಾದಲ್ಲಿ 7.5 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ ಇಲ್ಲಇಂಡೋನೇಷ್ಯಾದಲ್ಲಿ 7.5 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ ಇಲ್ಲ

ಅಂದಾಜಿನಂತೆ ಪನಾಮ ಜಿಡಿಪಿಯ 0ಯಿಂದ 4% ತನಕ ಆರ್ಥಿಕ ನಷ್ಟ ಆಗಿರಬಹುದು. ಕೋಸ್ಟರಿಕಾದ ಮೂಲಗಳ ಪ್ರಕಾರ, ಪನಾಮದ ಗಡಿ ಪಟ್ಟಣ ಪ್ಯೂರ್ಟೋ ಅರ್ಮ್ಯುಲೆಸ್ ನಿಂದ 11 ಕಿ.ಮೀ. ದೂರಕ್ಕೆ ಭೂ ಕಂಪನ ಕೇಂದ್ರೀಕೃತವಾಗಿತ್ತು.

6.3 magnitude earthquake in Panama- Cost Rica border

2017ರ ನವೆಂಬರ್ ನಲ್ಲಿ ಪೆಸಿಫಿಕ್ ಕಡಲ ತೀರದ ಕೋಸ್ಟರಿಕಾದಲ್ಲಿ 6.5ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು. ಆ ವೇಳೆ ಕಟ್ಟಡ ಕುಸಿತವಾಗಿ, ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಲ್ಲಿಂದ ಉತ್ತರಕ್ಕೆ ಎರಡು ತಿಂಗಳ ಹಿಂದೆ 7.1ರಷ್ಟು ತೀವ್ರತೆಯ ಭೂಕಂಪವಾಗಿ 300ಕ್ಕೂ ಹೆಚ್ಚು ಜನರು ಮೆಕ್ಸಿಕೋದಲ್ಲಿ ಸಾವನ್ನಪ್ಪಿದ್ದರು.

English summary
6.3 magnitude earthquake in Panama- Cost Rica border on Tuesday night, according to US Geological Survey. Estimating significance loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X