Gold: ಅಮೆರಿಕಕ್ಕೆ ವೆನೆಜುವೆಲಾದಿಂದ 1,000 ಕೆ.ಜಿ ಚಿನ್ನ ರಫ್ತು: ಬಹುಕೋಟಿ ಡಾಲರ್ ಒಪ್ಪಂದಕ್ಕೆ ಸಹಿ
ಅಂತರಾಷ್ಟ್ರೀಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ವೆನೆಜುವೆಲಾದ ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಸಂಸ್ಥೆಯು ಅಮೆರಿಕದ ಮಾರುಕಟ್ಟೆಗೆ 1,000 ಕೆಜಿ ಚಿನ್ನವನ್ನು ಮಾರಾಟ ಮಾಡಲು ಬಹುಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ವೆನೆಜುವೆಲಾದ ಸರ್ಕಾರಿ ಸಂಸ್ಥೆ 'ಮಿನರ್ವೆನ್' (Minerven) ಪ್ರಖ್ಯಾತ ಕಮೊಡಿಟಿ ಟ್ರೇಡರ್ ಆಗಿರುವ 'ಟ್ರಾಫಿಗುರಾ' (Trafigura) ಸಂಸ್ಥೆಯೊಂದಿಗೆ ಈ ಒಪ್ಪಂದ ಮಾಡಿಕೊಂಡಿದೆ.
ವರದಿಗಳ ಪ್ರಕಾರ, ಮಿನರ್ವೆನ್ ಸಂಸ್ಥೆಯು 650ರಿಂದ 1,000 ಕಿಲೋಗ್ರಾಂಗಳಷ್ಟು 'ಗೋಲ್ಡ್ ಡೋರ್ ಬಾರ್'ಗಳನ್ನು (ಅರೆ-ಶುದ್ಧೀಕರಿಸಿದ ಚಿನ್ನದ ತುಂಡುಗಳು) ಪೂರೈಸಬೇಕಾಗುತ್ತದೆ. ಈ ಒಪ್ಪಂದದ ಪ್ರಕಾರ ಪೂರೈಕೆಯಾಗುವ ಚಿನ್ನದಲ್ಲಿ ಶೇಕಡಾ 98ರಷ್ಟು ಶುದ್ಧ ಚಿನ್ನದ ಅಂಶ ಇರಬೇಕೆಂದು ನಿಗದಿಪಡಿಸಲಾಗಿದೆ. ಟ್ರಾಫಿಗುರಾ ಸಂಸ್ಥೆಯು ಅಮೆರಿಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ಪ್ರತ್ಯೇಕ ವ್ಯವಸ್ಥೆಯಡಿ, ಈ ಚಿನ್ನವನ್ನು ಅಮೆರಿಕದ ಸಂಸ್ಕರಣಾಗಾರಗಳಿಗೆ (Refineries) ಸಾಗಿಸಲಿದೆ.

ಈ ಒಪ್ಪಂದ ಏಕೆ ಮುಖ್ಯ?
ವೆನೆಜುವೆಲಾ ಮತ್ತು ಅಮೆರಿಕದ ನಡುವಿನ ರಾಜಕೀಯ ಸಂಬಂಧಗಳು ಈ ಹಿಂದೆ ಉದ್ವಿಗ್ನವಾಗಿದ್ದವು. ಆದರೆ, ಈ ರೀತಿಯ ದೊಡ್ಡ ಮಟ್ಟದ ಆರ್ಥಿಕ ಒಪ್ಪಂದವು ಜಾಗತಿಕ ಚಿನ್ನದ ಮಾರುಕಟ್ಟೆ ಮತ್ತು ಉಭಯ ದೇಶಗಳ ವಾಣಿಜ್ಯ ಸಂಬಂಧದಲ್ಲಿ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಕೆಜಿ ಚಿನ್ನದ ಬೆಲೆ ಸುಮಾರು ಅಂದಾಜು ₹1.38 ಕೋಟಿ ($1,66,000) ಇರುವ ಈ ಸಮಯದಲ್ಲಿ, ಈ ಒಪ್ಪಂದವು ಪ್ರಾಮುಖ್ಯತೆ ಪಡೆದಿದೆ.
ಟ್ರಂಪ್ ಆಡಳಿತದ ತಂತ್ರಗಾರಿಕೆ
ವೆನೆಜುವೆಲಾದ ಸಮಾಜವಾದಿ ಸರ್ವಾಧಿಕಾರಿ ಎನಿಸಿಕೊಂಡಿದ್ದ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ದೇಶದ ತೈಲ ಮತ್ತು ಖನಿಜ ಸಂಪನ್ಮೂಲಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ್ದಾರೆ. ಅಮೆರಿಕದ ಆಂತರಿಕ ವ್ಯವಹಾರಗಳ ಕಾರ್ಯದರ್ಶಿ ಡೌಗ್ ಬರ್ಗುಮ್ ಅವರು ವೆನೆಜುವೆಲಾಕ್ಕೆ ಭೇಟಿ ನೀಡಿ ಈ ಚಿನ್ನದ ಒಪ್ಪಂದಕ್ಕೆ ಚಾಲನೆ ನೀಡಿದ್ದಾರೆ ಎಂದು ವರದಿಯಾಗಿದೆ.
ತೈಲ ಮತ್ತು ಚಿನ್ನದ ಮೇಲೆ ಅಮೆರಿಕ ನಿಯಂತ್ರಣ
ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ನಡೆದ ಸಭೆಯ ನಂತರ, ಟ್ರಂಪ್ ಈ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ. ತೈಲವು ಹರಿಯಲು ಪ್ರಾರಂಭಿಸಿದೆ, ಎರಡೂ ದೇಶಗಳ ನಡುವಿನ ವೃತ್ತಿಪರತೆ ನೋಡಲು ಸಂತೋಷವಾಗುತ್ತಿದೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಟ್ರಾಫಿಗುರಾ ಸಂಸ್ಥೆಯು ಈಗಾಗಲೇ ವೆನೆಜುವೆಲಾದೊಂದಿಗೆ ಒಂದು ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ತೈಲ ಒಪ್ಪಂದಗಳನ್ನು ಮಾಡಿಕೊಂಡಿದೆ.
ಅಮೆರಿಕದ ಈ ಕ್ರಮವನ್ನು "ಸಾಮ್ರಾಜ್ಯಶಾಹಿ ಮತ್ತು ಭ್ರಷ್ಟಾಚಾರ" ಎಂದು ಅಲ್ಲಿನ ಡೆಮೋಕ್ರಾಟ್ ಪಕ್ಷದ ನಾಯಕರು ಟೀಕಿಸಿದ್ದಾರೆ. ಆದರೆ ಈ ಒಪ್ಪಂದದಿಂದ ವೆನೆಜುವೆಲಾಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಹಿಂದೆ ಬ್ಲಾಕ್ ಮಾರ್ಕೆಟ್‌ನಲ್ಲಿ ಕಳ್ಳಸಾಗಣೆಯಾಗುತ್ತಿದ್ದ ಚಿನ್ನವು ಈಗ ಅಧಿಕೃತವಾಗಿ ಅಮೆರಿಕದ ಮಾರುಕಟ್ಟೆಗೆ ಬರಲಿದೆ. ಇದರಿಂದ ಬರುವ ಹಣವು ವೆನೆಜುವೆಲಾದ ಸರ್ಕಾರ ಮತ್ತು ಜನರಿಗೆ ತಲುಪಲಿದೆ ಎಂಬುದು ಅಮೆರಿಕದ ವಾದ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ನಂತರ ಜಾಗತಿಕವಾಗಿ ತೈಲ ಮತ್ತು ಚಿನ್ನದ ಬೆಲೆಗಳು ಏರಿಕೆ ಕಂಡಿವೆ. ಇಂತಹ ಸಮಯದಲ್ಲಿ ವೆನೆಜುವೆಲಾದ ಸಂಪನ್ಮೂಲಗಳು ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications