viral video: ತಂದೆಯ ಚಿತಾಭಸ್ಮದಿಂದ ಗಾಂಜಾ ಬೆಳೆದಳು, ಅದರಿಂದಲೇ ಸಿಗರೇಟ್ ಸೇದಿ ವೈರಲ್ ವಿಡಿಯೋ!
ಜನ ಫೇಮಸ್ ಆಗುವುದಕ್ಕೆ ಇಲ್ಲವೇ ತಮ್ಮ ವಿಕೃತಿಗಳನ್ನು ಪ್ರದರ್ಶಿಸುವುದಕ್ಕೆ ಏನೆಲ್ಲಾ ಮಾಡ್ತಾರೆ ಎನ್ನುವುದಕ್ಕೆ ಇಲ್ಲೊಂದು ಯೂಟ್ಯೂಬರ್ ಅವರೇ ಬೆಸ್ಟ್ ಎಕ್ಸಾಂಪಲ್. ಇಲ್ಲೊಬ್ಬಳು ಮಹಿಳೆ ತನ್ನ ತಂದೆಯ ಸಾವು ಹಾಗೂ ಅವರ ಚಿತಾಭಸ್ಮವನ್ನೇ ಬಳಸಿಕೊಂಡಿದ್ದಾಳೆ. ಹೌದು ನೀವು ಕೇಳಿದ್ದು ಸರಿಯಾಗಿಯೇ ಇದೆ. ಯೂಟ್ಯೂಬ್ ಇಲ್ಲ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೆ ಎಷ್ಟೆಲ್ಲ ಕುತಂತ್ರಗಳನ್ನು ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಬೆಸ್ಟ್ ಉದಾ ಇದೆ.
ಜನ ತಾವು ಫೇಮಸ್ ಆಗ್ಬೇಕು ವಿಡಿಯೋಗಳಿಗೆ ಹೆಚ್ಚು ವಿವ್ಸ್ ಬರಬೇಕು. ಕಾಮೆಂಟ್ ಬರ್ಬೇಕು ಅಂತ ಎನೆಲ್ಲ ಗಿಮಿಕ್ ಮಾಡ್ತಾರೆ ಅನ್ನೋದಕ್ಕೆ ನೀವೆಲ್ಲ ನೋಡಿರ್ತಿರಿ ಇದೀಗ ಹೊಸ ಹೊಸ ಹಾಗೂ ನೀವು ಹಿಂದೆಂದೂ ಕೇಳಿಯೇ ಇರದ ಸುದ್ದಿಗಳನ್ನು ನೋಡುವ ಸಮಯ. ಗಿಮಿಕ್ ಸುದ್ದಿಗಳಿಂದಲೇ ಕೆಲವರು ಫೇಮಸ್ ಆಗ್ತಾರೆ. ವೈರಲ್ ವಿಡಿಯೋಗಳಲ್ಲಿ ಅರ್ಧಕ್ಕೆ ಅರ್ಧ ಇಂತಹದ್ದೇ ಟಾಪಿಕ್‌ಗಳಿರ್ತವೆ. ಈಗ ಅಮೆರಿಕದಲ್ಲಿ ಇದೀಗ ಅತಂಹದ್ದೇ ಒಂದು ವಿಡಿಯೋ ವೈರಲ್ ಆಗಿದೆ.

ಅಮೆರಿಕಾದ ಯೂಟ್ಯೂಬರ್ ರೊಸಾನ್ನಾ ಪ್ಯಾನ್ಸಿನೊ ಎನ್ನುವವರು ಮಾಡಿರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗ್ತಿದೆ. ಅಲ್ಲದೇ ಆಕೆ ಮಾಡಿರುವ ಅನಾಹುತಕ್ಕೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ಈ ಯುವತಿ ತನ್ನ ರಾಡಿಕ್ಯುಲಸ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾಡಿರುವ ವಿಡಿಯೋ ನೋಡಿ ಜನ ದಂಗಾಗಿದ್ದಾರೆ. ಅಷ್ಟೇ ಅಲ್ಲ ಪೊಲೀಸರು ಸಹ ಈಕೆಯ ಮೇಲೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಷ್ಟಕ್ಕೂ ಈ ಮಹಿಳೆ ಮಾಡಿದ್ದೇನು ಅನ್ನೋದು ನೋಡೋಣ ಬನ್ನಿ.
ಯೂಟ್ಯೂಬರ್‌ಗಳು ಅವರ ಚಾನೆಲ್‌ನ ವಿಡಿಯೋಗಳು ಓಡಬೇಕು ಅಂತ ಏನೆಲ್ಲಾ ಸರ್ಕಸ್ ಮಾಡ್ತಾರೆ ಅನ್ನೋದಕ್ಕೆ ಹಲವು ಉದಾಹರಣೆಗಳು ಇವೆ. ಇಲ್ಲೊಬ್ಬ ಯೂಟ್ಯೂಬರ್ ಯಾರೂ ಎಂದೂ ಕನಸಿನಲ್ಲೂ ಅಂದಾಜು ಮಾಡದ ಕೆಲಸವೊಂದನ್ನು ಮಾಡಿದ್ದಾಳೆ. ಆಕೆ ತನ್ನ ಯುಟ್ಯೂಬ್‌ನ ಮೊದಲ ಸಂಚಿಕೆಯಲ್ಲೇ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾಳೆ. ಆಕೆ ಅವರ ತಂದೆಯ ಶವ ಹಾಗೂ ಬೂದಿಯನ್ನೂ ತನ್ನ ಪ್ರಚಾರಕ್ಕೆ ಬಳಸಿಕೊಂಡಿದ್ದಾಳೆ.

ಆಕೆಯ ತಂದೆಯ ಶವದ ಸುಟ್ಟ ಬೂದಿಯಿಂದಲೇ ಗಾಂಜಾ ಗಿಡಗಳನ್ನು ಬೆಳೆಸಿದ್ದಾಳೆ. ಆ ಮೇಲೆ ಆ ಗಾಂಜಾ ಎಲೆಗಳ ಸಿಗರೇಟ್ ಸೇದಿದ್ದಾಳೆ. ಈ ವಿಷಯವನ್ನು ಆಕೆಯೇ ಬಹಿರಂಗ ಪಡಿಸಿದ್ದು, ಜನ ದಂಗಾಗಿ ಹೋಗಿದ್ದಾರೆ. ತನ್ನ ತಂದೆ ಅವರ ಶವವನ್ನು ಈ ರೀತಿ ಬಳಸಿಕೊಂಡಿರುವುದಕ್ಕೆ ವೀಕ್ಷಕರು ಆಘಾತ ವ್ಯಕ್ತಪಡಿಸಿದ್ದಾರೆ. ಚಿತಾಭಸ್ಮ ಎಂದರೆ ಭಾರತೀಯರಲ್ಲಿ ವಿಶೇಷ ಸಂಪ್ರದಾಯಗಳು ಇವೆ. ಚಿತಾ ಭಸ್ಮವನ್ನು ಈ ರೀತಿ ಭಾರತೀಯರು ಬಳಸುವುದು ಇರಲಿ, ಆ ಭಾವನೆಯಿಂದ ಕನಸಿನಲ್ಲೂ ನೋಡುವುದಿಲ್ಲ. ಆದರೆ, ಇದೀಗ ಈ ಹುಡುಗಿ ಮಾಡಿರೋ ವಿಡಿಯೋ ನೋಡಿ ಭಾರತೀಯರು ಶಾಕ್ ಆಗಿದ್ದಾರೆ.
ತಂದೆ ಸತ್ತ ಮೇಲೆ ಅವರ ಶವವನ್ನು ಸುಟ್ಟು ಸಿಗುವ ಬೂದಿಯಿಂದ ಗಾಂಜಾ ಗಿಡಗಳನ್ನು ಬೆಳೆಸಿರುವುದಾಗಿಯೂ ಅದರ ಎಲೆಯನ್ನು ಸಿಗರೇಟ್ ಮಾಡಿಕೊಂಡು ಸೇದಿರುವುದಾಗಿ ಹೇಳಿಕೊಂಡಿದ್ದಾಳೆ. ಈ ಬಗ್ಗೆ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಜನ ಈ ತರನೂ ಮಾಡ್ತಾರಾ ಅಂತ ಜನ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಮಹಿಳೆಗೆ 14.6 ಮಿಲಿಯನ್‌ಗಿಂತಲೂ ಹೆಚ್ಚು ಯೂಟ್ಯೂಬ್ ಸಬ್ ಸ್ಕ್ರೈಬರ್ ಇದ್ದಾರೆ.
ನಾನು ಅವರಿಗೆ ಗೌರವ ಸಲ್ಲಿಸಿದ್ದೇನೆ
ಅಮೆರಿಕದ ಯೂಟ್ಯೂಬರ್ ರೋಸನ್ನಾ ಪ್ಯಾನ್ಸಿನೊ ಅವರು ಈ ವಿಡಿಯೋ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ರೀತಿ ಮಾಡಬೇಕು ಎನ್ನುವುದು ನಮ್ಮ ತಂದೆಯವರ ಕನಸು ಹಾಗೂ ಆಸೆಯಾಗಿತ್ತು. ಹೀಗಾಗಿ, ಈ ರೀತಿ ಮಾಡಿದ್ದೇನೆ ಚಿತಾಭಸ್ಮ ಬಳಸಿ, ಬೆಳೆದಿರುವ ಗಾಂಜಾದಿಂದ ಮಾಡಿದ ಸಿಗರೇಟನ್ನು ಸೇದಿ ನನ್ನ ತಂದೆಗೆ ಗೌರವ ಸಲ್ಲಿಸಿದ್ದೇನೆ ಎಂದಿದ್ದಾಳೆ.
ಐಮ್ ಸ್ಮೋಕಿಂಗ್ ಮೈ ಡೆಡ್ ಡ್ಯಾಡ್ ಎಂದು ನಗುತ್ತಲ್ಲೇ ಹೇಳಿದ್ದಾಳೆ. ಜಗತ್ತಿನಲ್ಲಿ ಯಾರಾದರೂ ಈ ರೀತಿ ಮಾಡಲು ಸಾಧ್ಯವೇ ಅಂತ ಜನ ಕೇಳಿದ್ದಾರೆ. ಆದರೆ, ಆಕೆ ಮಾತ್ರ ಗಾಂಜಾ ಗಿಡ ಬೆಳೆಸು ಮಗಳೆ ಅದರಲ್ಲಿ ನನ್ನ ಭಸ್ಮವನ್ನು ಬಳಸಿ ಅಂತ ಹೇಳಿಕೊಂಡಿದ್ದರು ಎಂದಿದ್ದಾಳೆ. ಆದರೆ, ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.












Click it and Unblock the Notifications