ಮುಖ್ಯ ಮಾಹಿತಿ ಆಯುಕ್ತರಾಗಿ ಯಶ್ವರ್ಧನ್ ಕುಮಾರ್ ಸಿನ್ಹಾ ಪ್ರಮಾಣವಚನ

ನವದೆಹಲಿ, ನವೆಂಬರ್ 07: ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಯಶ್ವರ್ಧನ್ ಕುಮಾರ್ ಸಿನ್ಹಾ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ರಾಷ್ಟ್ರಪತಿ ಭವನದ ಪ್ರಕಟಣೆ ಶನಿವಾರ ತಿಳಿಸಿದೆ. ಯಶ್ವರ್ಧನ್ ಕುಮಾರ್ ಸಿನ್ಹಾ ಮಾಜಿ ರಾಜತಾಂತ್ರಿಕ ಅಧಿಕಾರಿ, ಹಾಲಿ ಮಾಹಿತಿ ಆಯುಕ್ತರೂ ಆಗಿದ್ದರು.

ಯಶ್ವರ್ಧನ್ ಕುಮಾರ್ ಅವರು ಮಾಹಿತಿ ಆಯುಕ್ತರಾಗಿ 2019ರ ಜನವರಿ 1 ರಂದು ಅಧಿಕಾರ ವಹಿಸಿಕೊಂಡಿದ್ದರು.ಹಾಗೆಯೇ ಯುಕೆ ಹಾಗೂ ಶ್ರೀಲಂಕಾಕ್ಕೆ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.

Yashvardhan Kumar Sinha Takes Oath As CIC, Govt Selects 3 Information Commissioners

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ಮುಖ್ಯಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ 62 ವರ್ಷ ಸಿನ್ಹಾ ಅವರ ಅಧಿಕಾರಾವಧಿ ಮೂರು ವರ್ಷಗಳದ್ದಾಗಿರುತ್ತದೆ. ಸಿಐಸಿ ಮತ್ತು ಮಾಹಿತಿ ಆಯುಕ್ತರನ್ನು ಐದು ವರ್ಷಗಳ ಅವಧಿಗೆ ಅಥವಾ 65 ವರ್ಷ ತುಂಬುವವರೆಗೆ ನೇಮಕ ಮಾಡಲಾಗುತ್ತದೆ.

ಈ ಹಿಂದೆ ಮುಖ್ಯ ಆಯುಕ್ತರಾಗಿದ್ದ ಬಿಮಲ್ ಜುಲ್ಕಾ ಅವರ ಅಧಿಕಾರಾವಧಿ ಆಗಸ್ಟ್ 26ಕ್ಕೆ ಕೊನೆಗೊಂಡಿತ್ತು. ಇದಾದ ಎರಡು ತಿಂಗಳವರೆಗೆ ಈ ಹುದ್ದೆ ಖಾಲಿ ಇತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಸಮಿತಿ ಸಿನ್ಹಾ ಅವರನ್ನು ಈ ಹುದ್ದೆಗೆ ಶಿಫಾರಸು ಮಾಡಿತ್ತು. 2019ರ ಜನವರಿ 1 ರಂದು ಮಾಹಿತಿ ಆಯುಕ್ತರಾಗಿ ನೇಮಕಗೊಂಡಿದ್ದರು. ಅವರು ಬ್ರಿಟನ್ ಮತ್ತು ಶ್ರೀಲಂಕಾದಲ್ಲಿ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+