ಪತಿಯನ್ನು ಕೊಂದು ದೇಹವನ್ನು 6 ತುಂಡುಗಳಾಗಿ ಕತ್ತರಿಸಿದ ಪತ್ನಿಯ ಪ್ರಿಯಕರ!
ಜೈಪುರ ಜುಲೈ 19:ಪತ್ನಿಯ ಪ್ರಿಯಕರ ಪತಿಯನ್ನು ಕೊಂದು ದೇಹವನ್ನು 6 ತುಂಡುಗಳಾಗಿ ಕತ್ತರಿಸಿದ ಘಟನೆ ರಾಜಸ್ಥಾನದ ಪಾಲಿಯಲ್ಲಿ ನಡೆದಿದೆ. 33 ವರ್ಷದ ವ್ಯಕ್ತಿಯನ್ನು ಪತ್ನಿಯ ಪ್ರಿಯಕರನ್ನು ಕೊಲೆ ಮಾಡಿ, ಶವವನ್ನು ಆರು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಹೂತಿಟ್ಟಿದ್ದಾನೆ.
ಮದನ್‌ಲಾಲ್ ಎಂದು ಗುರುತಿಸಲಾದ ಆರೋಪಿ ಜೋಗೇಂದ್ರನನ್ನು ಕೊಂದು ಮುಂಡವನ್ನು ಸಮೀಪದ ಕಾಡಿನಲ್ಲಿ ಹೂತಿಟ್ಟಿದ್ದಾನೆ. ಜೊತೆಗೆ ಮನೆಯಿಂದ 100 ಮೀಟರ್ ದೂರದಲ್ಲಿರುವ ತೋಟದಿಂದ ತಲೆ, ಕೈ ಮತ್ತು ಕಾಲುಗಳನ್ನು ಹೂತಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾತ್ರವಲ್ಲದೆ ಆರೋಪಿ ಸಮಾಧಿ ಸ್ಥಳದ ಮೇಲೆ ಮಾವಿನ ಸಸಿ ನೆಟ್ಟಿದ್ದನು. ಸದ್ಯ ಆರೋಪಿಯನ್ನು ಮಂಗಳವಾರ ವಶಕ್ಕೆ ಪಡೆದಿದ್ದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಜುಲೈ 13ರಂದು ಜೋಗೇಂದ್ರನ ತಂದೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ದೂರಿನ ಪ್ರಕಾರ, ಜುಲೈ 11 ರಂದು ಜೋಗೇಂದ್ರ ಮನೆಯಿಂದ ಹೊರಗೆ ಹೋಗಿದ್ದರು. ಮತ್ತೆ ಆತ ಹಿಂತಿರುಗಲಿಲ್ಲ. ಅನುಮಾನದ ಮೇಲೆ ಜೋಗೇಂದ್ರ ಅವರ ತಂದೆ ಮದನ್‌ಲಾಲ್‌ನ ಕೈವಾಡವನ್ನು ಶಂಕಿಸಿ ಪೊಲೀಸರನ್ನು ಸಂಪರ್ಕಿಸಿದರು. "ನನ್ನ ಮಗನನ್ನು ಕೊಲ್ಲುವಲ್ಲಿ ಹೆಚ್ಚಿನ ಜನರು ಭಾಗಿಯಾಗಿದ್ದಾರೆಂದು ನಾನು ನಂಬುತ್ತೇನೆ" ಎಂದು ಮೃತನ ತಂದೆ ಮಿಶ್ರಾಲಾಲ್ ಮೇಘವಾಲ್ ದೂರಿದ್ದಾರೆ.
ತಕ್ಷಣ ಪೊಲೀಸರು ತನಿಖೆ ನಡೆಸಿ ಮದನ್‌ಲಾಲ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮದನ್‌ಲಾಲ್ ತಾನು ಜೋಗೇಂದ್ರನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದು, ಆತನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮುಂದೆ ತಾನು ಅಪರಾಧ ಎಸಗಿದ್ದು ಹೇಗೆ ಎಂಬ ವಿವರ ನೀಡಿದರು.












Click it and Unblock the Notifications