Rent Me For a Day: ₹1,500ಕ್ಕೆ ಕಾಫಿ, ₹10,000ಕ್ಕೆ ಟ್ರಿಪ್! ಯುವತಿಯ ವಿಚಿತ್ರ ಸೇವೆ ವೈರಲ್

Rent Me For a Day: ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಿದೆ. ಈಗೆಲ್ಲ ಎಲ್ಲ ಕೆಲಸಕ್ಕೂ ಜನ ಸಿಗುತ್ತಾರೆ ಅಥವಾ ಎಲ್ಲ ಕೆಲಸವನ್ನೂ ಆನ್‌ಲೈನ್‌ನ ಮೂಲಕ ಸುಲಭಗೊಳಿಸಲಾಗುತ್ತಿದೆ. ಜನ ತಮ್ಮ ಜೀವನ ನಡೆಸೋಕೆ ಹಲವು ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಇದರಿಂದ ಜನರ ಜೀವನವು ಸುಲಭವಾಗಿದೆ. ನಿಜ ಅದೇ ರೀತಿ ಕೆಲವೊಂದು ವಿಚಿತ್ರ ಟ್ರೆಂಡ್‌ಗಳು ಸಹ ಶುರುವಾಗಿವೆ.

ಬೆಂಗಳೂರಿನಂತಹ ನಗರದಲ್ಲಿ ಪ್ರಾರಂಭವಾಗುತ್ತಿರುವ ಕೆಲವೊಂದು ಟ್ರೆಂಡ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಆಗ್ಗಾಗೆ ವೈರಲ್ ಆಗುವುದು ಇದೆ. ಬೆಂಗಳೂರು ಮಾತ್ರವಲ್ಲ, ದೆಹಲಿ - ಮುಂಬೈ - ಹೈದರಾಬಾದ್ ಹಾಗೂ ಚೆನ್ನೈ ನಗರಗಳಲ್ಲಿ ಬಾಡಿಗೆಗೆ ಬಾಯ್‌ಫ್ರೆಂಡ್ಸ್‌, ಫ್ರೆಂಡ್ಸ್‌ ಸಿಗುವ ಪದ್ಧತಿಗಳು ಶುರುವಾಗುತ್ತಿವೆ. ಮನೆ ಕೆಲಸದವು ನಿರ್ದಿಷ್ಟ ಅವಧಿಗೆ ಮನೆಗೆ ಬಂದು ಮನೆ ಕೆಲಸ ಮಾಡಿ ಹೋಗುತ್ತಾರೆ. ಬಹುತೇಕ ಈ ಹೊಸ ಟ್ರೆಂಡ್‌ಗಳು ಹಲವರಿಗೆ ಈಗಾಗಲೇ ಪರಿಚಿತವಾಗಿವೆ. ಆದರೆ, ದಿವ್ಯಾ ಎಂಬ ಯುವತಿ "ರೆಂಟ್ ಮಿ ಫಾರ್ ಎ ಡೇ" ಎಂಬ ಹೊಸ ಅಸಾಂಪ್ರದಾಯಿಕ ಸೇವೆಯನ್ನು ಪರಿಚಯಿಸಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಈ ಟ್ರೆಂಡ್ ಭಾರೀ ವೈರಲ್ ಆಗಿದೆ.

Rent Me For a Day

"ರೆಂಟ್ ಮಿ ಫಾರ್ ಎ ಡೇ" ಎನ್ನುವ ಟ್ರೆಂಡ್ ಶುರು ಮಾಡಿರುವ ಯುವತಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ದರ ಕಾರ್ಡ್ ಸಹ ವೈರಲ್ ಆಗಿದೆ. ಅದರಲ್ಲಿ ಯುವತಿಯೊಂದಿಗೆ ಗ್ರಾಹಕರು ಕಾಫಿ ಕುಡಿಯಲು ₹1,500, ಡೇಟ್‌ಗೆ ₹2,000ಗೆ ಡಿನ್ನರ್ ಮತ್ತು ಚಲನಚಿತ್ರ ಡೇಟ್‌ಗೆ ₹3,000, ಕುಟುಂಬದ ಸಮಾರಂಭಕ್ಕೆ ಅಥವಾ ಈವೆಂಟ್ ಕಂಪ್ಯಾನಿಯನ್ ಆಗಿ ಭಾಗವಹಿಸಲು ₹3,500 ಕೊಟ್ಟರೆ ಸಾಕು.

ಬೈಕ್ ರೈಡ್ ಡೇಟ್‌ಗೆ ₹4,000 ಬೆಲೆಯಿದ್ದು, ಪ್ರವಾಸದ ವೆಚ್ಚದ ಕುರಿತು ಸಾರ್ವಜನಿಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ₹6,000 ವಿನಂತಿಸಲಾಗಿದೆ. ಇದರೊಂದಿಗೆ ಯುವತಿ ಹೆಚ್ಚುವರಿ ಪ್ರೀಮಿಯಂ ಸೇವೆಗಳನ್ನೂ ಕೊಡ್ತಾರಂತೆ. ಇದರಲ್ಲಿ ₹5,000ಕ್ಕೆ ರಿಸ್ಕಿ ಡೇಟ್‌, ₹3,500ಕ್ಕೆ ಜೊತೆಯಾಗಿ ಅಡುಗೆ ಮಾಡುವ ಅನುಭವ, ₹4,500ಕ್ಕೆ ಶಾಪಿಂಗ್ ಸ್ಪ್ರೀ ಹಾಗೂ ₹10,000ಕ್ಕೆ ಎರಡು ದಿನಗಳ ವಾರಾಂತ್ಯದ ಪ್ರವಾಸ ಸೇರಿವೆ. ಇದಲ್ಲದೆ, ವಿಭಿನ್ನ ಅನುಭವ ಬಯಸುವವರು ತಮ್ಮ ಇಚ್ಛೆ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಿದ ವಿಶೇಷ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ ಎಂದು ಅವರು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಯಾರೂ ಅಂದಾಜು ಸಹ ಮಾಡಿಕೊಳ್ಳಲು ಸಾಧ್ಯವಿಲ್ಲದ ಆಫರ್‌ಗಳನ್ನು ಈ ಯುವತಿ ಕೊಟ್ಟಿದ್ದು ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದು ಬೆಳೆಯುತ್ತಿರುವ ಗಿಗ್ ಆರ್ಥಿಕತೆಯ ಇನ್ನೊಂದು ಉದಾಹರಣೆ ಇರಬೇಕು ಎಂದು ನೆಟ್ಟಿಗರು ಹೇಳಿದ್ದಾರೆ. ಈ ಪೋಸ್ಟ್ ಆನ್‌ಲೈನ್‌ನಲ್ಲಿ ಸಾವಿರಾರು ಪ್ರತಿಕ್ರಿಯೆಗಳು ಮತ್ತು ಕಾಮೆಂಟ್‌ಗಳನ್ನು ಆಕರ್ಷಿಸುತ್ತಲೇ ಇದೆ, ಇದು ದಿವ್ಯಾ ಅವರ "ರೆಂಟ್ ಮಿ ಫಾರ್ ಎ ಡೇ" ಸೇವೆಯನ್ನು ಇತ್ತೀಚಿಗೆ ಟ್ರೆಂಡ್ ಆಗಿರುವ ವಿಷಯಗಳಲ್ಲಿ ಒಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+