ಲಾಕ್‌ಡೌನ್ ಮುಗಿದ ಬಳಿಕ ವಿಮಾನ ಪ್ರಯಾಣ ಹೇಗಿರಬಹುದು?
ನವದೆಹಲಿ, ಏಪ್ರಿಲ್ 11: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಶುಕ್ರವಾರದ ಕೊರೊನಾ ಹೊಸ ಪ್ರಕರಣಗಳನ್ನು ನೋಡಿದರೆ ಸದ್ಯಕ್ಕಂತೂ ವಿಮಾನ ಹಾರಾಟ ಆರಂಭವಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಒಂದೊಮ್ಮೆ ಡೊಮೆಸ್ಟಿಕ್ ಅಥವಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾದರೆ ಏನಾಗಬಹುದು ಎಂಬುದರ ಕುರಿತು ಸ್ವಲ್ಪ ಆಲೋಚನೆ ಮಾಡಬೇಕಿದೆ.
ಸಾಮಾಜಿಕ ಅಂತರ ಪ್ರಮುಖ ವಿಷಯವಾಗಿದೆ. ವಿಮಾನ ನಿಲ್ದಾಣ ಹಾಗೂ ವಿಮಾನ ಎರಡರಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ. ಹಾಗಾಗಿ ವಿಮಾನಯಾನ ದುಬಾರಿಯಾಗುವ ಸಾಧ್ಯತೆ ಇದೆ.

ವಿಮಾನ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ
ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಏರ್‌ಪೋರ್ಟ್‌ಗಳಲ್ಲಿ ಸಿಐಎಸ್‌ಎಫ್‌ಗಳನ್ನು ನೇಮಕ ಮಾಡಲಾಗಿದ್ದು, ಥರ್ಮಲ್ ಟೆಂಪರೇಷರ್ ಸ್ಕ್ಯಾನರ್ ಮೂಲಕ ಪ್ರಯಾಣಿಕರನ್ನು ಪರೀಕ್ಷೆ ಮಾಡಲಾಗುತ್ತದೆ. ಪ್ರತಿಯೊಂದು ಪ್ರಯಾಣಿಕರ ನಡುವೆ ಕನಿಷ್ಟ ಒಂದು ಮೀಟರ್‌ನಷ್ಟು ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.

ಮಧ್ಯದಲ್ಲಿರುವ ಸೀಟು ಖಾಲಿ
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಧ್ಯದಲ್ಲಿರುವ ಸೀಟನ್ನು ಖಾಲಿ ಬಿಡಬೇಕಾಗುತ್ತದೆ. ವಿಮಾನದಲ್ಲಿ ಕೇವಲ ಶೇ.50ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಟಿಕೆಟ್ ದರ ಹೆಚ್ಚಳ
ಕೇವಲ ಅನಿವಾರ್ಯವಿದ್ದವರು ಮಾತ್ರ ವಿಮಾನದಲ್ಲಿ ಪ್ರಯಾಣಿಸಲಿ ಎನ್ನುವ ದೃಷ್ಟಿಯಿಂದ ವಿಮಾನ ಟಿಕೆಟ್ ದರ ಹೆಚ್ಚಳ ಮಾಡುವ ಸಾಧ್ಯತೆಯೂ ಇದೆ.ಹಾಗೆಯೇ ಕೇವಲ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯುವುದರಿಂದ ವೈಮಾನಿಕ ಸಂಸ್ಥೆಗೆ ನಷ್ಟ ಉಂಟಾಗಲಿದ್ದು, ದೆಹಲಿ- ಮುಂಬೈ ನಡುವೆ ವಿಮಾನ ಟಿಕೆಟ್ ದರ 8 ಸಾವಿರದಿಂದ ಆರಂಭವಾಗುವ ಸೂಚನೆ ದೊರೆತಿದೆ.

ಪ್ರಯಾಣಿಕರ ಸಂಖ್ಯೆಯೂ ಕಡಿಮೆ
ಲಾಕ್‌ಡೌನ್ ಮುಗಿದ ಬಳಿಕ ಏಕಾಏಕಿ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಮಾಡುವುದಿಲ್ಲ. ಕೆಲವು ದಿನಗಳು ಅಥವಾ ತಿಂಗಳು ಕಾಲ ಮನೆಯಲ್ಲೇ ಇದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದ ಬಳಿಕವೇ ಸಂಚಾರ ಮಾಡುತ್ತಾರೆ.












Click it and Unblock the Notifications